ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್‌-ರೆಡ್ಡಿ ಪ್ರಕರಣ: ಸಿಬಿಐ ಮುಗುಳ್ನಗೆ

By Srinath
|
Google Oneindia Kannada News

jagan-case-hc-cancels-vijaysai-reddy-bail
ಹೈದರಾಬಾದ್, ಏ.21: ಅಕ್ರಮ ಆಸ್ತಿ ಪ್ರಕರಣ ಸಂಬಂಧ ವೈ.ಎಸ್. ಜಗನ್‌ಮೋಹನ ರೆಡ್ಡಿ ಅವರ ಸಹಾಯಕ, ಪ್ರಕರಣದ 2ನೇ ಆರೋಪಿ ವಿಜಯ್ ಸಾಯಿ ರೆಡ್ಡಿಗೆ ಸಿಬಿಐ ವಿಶೇಷಕೋರ್ಟ್ ನೀಡಿದ್ದ ಜಾಮೀನನ್ನು ಆಂಧ್ರ ಹೈಕೋರ್ಟ್ ಶುಕ್ರವಾರ ರದ್ದು ಮಾಡಿದೆ. ಇದರಿಂದ ಸಾಯಿರೆಡ್ಡಿ ಸೋಮವಾರ ಕೋರ್ಟಿಗೆ ಶರಣಾಗಬೇಕಿದೆ.

ಏಪ್ರಿಲ್ 13ರಂದು ಖುದ್ದು ಸಿಬಿಐ ನ್ಯಾಯಾಲಯವೇ ಸಾಯಿ ರೆಡ್ಡಿಗೆ ಜಾಮೀನು ನೀಡಿ, ಬಿಡುಗಡೆಗೊಳಿಸಿತ್ತು. ಪ್ರಕರಣದಲ್ಲಿ ಬೇರೆ ಯಾರನ್ನೂ ಬಂಧಿಸದಿರುವಾಗ ಇವರೊಬ್ಬರನ್ನೇ ಏಕೆ ಬಂಧಿಸಿದಿರಿ ಎಂಬುದು ಆ ಕೆಳ ನ್ಯಾಯಾಲಯವು ಸಿಬಿಐಅನ್ನು ಪ್ರಶ್ನಿಸಿ, ಜಾಮೀನು ನೀಡಿತ್ತು.

ಆದರೆ ಹೈಕೋರ್ಟ್ ಈ ವಾದವನ್ನು ಸುತರಾಂ ಒಪ್ಪಲಿಲ್ಲ. ಹೀಗಾಗಿ, ವಿಜಯ್ ಸಾಯಿ ರೆಡ್ಡಿ ಸೋಮವಾರ ಸಿಬಿಐ ವಿಶೇಷ ನ್ಯಾಯಾಲಯದೆದುರು ಹಾಜರಾಗಿ, ಜಾಮೀನು ಅರ್ಜಿ ಮರುವಿಚಾರಣೆಗೊಳಗಾಗಬೇಕಿದೆ. ಸಾಯಿರೆಡ್ಡಿಗೆ ಜಾಮೀನು ನೀಡುವುದರಿಂದ ತನಿಖೆಗೆ ಅಡ್ಡಿ ಉಂಟಾಗುತ್ತದೆ ಎಂದು ಸಿಬಿಐ, ಹೈಕೋರ್ಟಿಗೆ ಅಲವತ್ತುಕೊಂಡಿತ್ತು.

English summary
The AP High Court on Friday (A 21) set aside a bail order granted by the special CBI court to V. Vijay Sai Reddy, auditor and co-accused in the alleged disproportionate assets case of YSR Congress president Y.S. Jagan Mohan Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X