ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ನಲ್ಲಿ ವಿಮಾನ ಅಪಘಾತ, ಅಪಾರ ಸಾವುನೋವು

|
Google Oneindia Kannada News

Pak aircraft crashed near Islamabad
ಇಸ್ಲಾಮಾಬಾದ್, ಏ 20 : 127 ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಪಾಕಿಸ್ತಾನದ ಪ್ಯಾಸೆಂಜರ್ ವಿಮಾನವೊಂದು ಅಪಘಾತಕ್ಕೆ ಈಡಾಗಿದ್ದು 118 ಜನ ಸಾವಿಗೆ ಈಡಾಗಿದ್ದಾರೆಂದು ಪ್ರಾಥಮಿಕ ವರದಿಯನ್ನು ಆಧರಿಸಿ 'ಡಾನ್' ಪತ್ರಿಕೆ ವರದಿ ಮಾಡಿದೆ. ಅಪಘಾತಕ್ಕೆ ಪ್ರತಿಕೂಲ ಹವಾಮಾನ ಕಾರಣವೆನ್ನಲಾಗಿದೆ.

ಭೋಜಾ ಏರ್ ಫ್ಲೈಟ್ ಬಿ4213 ಕರಾಚಿಯಿಂದ ಹೋರಾಟ ವಿಮಾನ ಇಸ್ಲಾಮಾಬಾದಿನ ಬೆನಜೀರ್ ಭುಟ್ಟೋ ಅಂತರಾಷ್ಟ್ರೀಯ ವಿಮಾನನಿಲ್ದಾಣದ ಹೊರಗೆ ಅಪಘಾತಕ್ಕೆ ಈಡಾಗಿದೆ. ವಿಮಾನದಲ್ಲಿ 118 ಮಂದಿ ಪ್ರಯಾಣಿಕರು ಮತ್ತು 9 ಮಂದಿ ವಿಮಾನ ಸಿಬ್ಬಂದಿಗಳು ಇದ್ದರು.

ವಿಮಾನದ ಅವಶೇಷಗಳು ಇಸ್ಲಾಮಾಬಾದ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಹುಸೇನ್ ಅಬದ್ ಹಳ್ಳಿಯ ಬಳಿ ಬಿದ್ದಿದೆ ಎಂದು ವಿಮಾನ ನಿಲ್ದಾಣದ ಪೋಲೀಸ್ ಅಧಿಕಾರಿ ಫಾಜಲ್ ಅಕ್ಬರ್ ಹೇಳಿಕೆ ನೀಡಿದ್ದಾರೆ.

ಕರಾಚಿಯಿಂದ ಇಸ್ಲಾಮಾಬಾದ್ ಗೆ ತನ್ನ ಪ್ರಥಮ ಸಂಚಾರ ಆರಂಭಿಸಿದ್ದ ಈ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವಿಗೆ ಈಡಾಗಿದ್ದಾರೆಂದು ಪಾಕ್ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದ್ದರೂ ಕೆಲವರು ಬದುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಜುಲೈ 2010ರಲ್ಲಿ ಏರ್ ಬ್ಲೂ ವಿಮಾನವು ಕರಾಚಿ ಬಳಿ ಪತನಗೊಂಡಿತ್ತು ಅದರಲ್ಲಿ 152 ಮಂದಿ ಸಾವನ್ನಪ್ಪಿದ್ದರು. ಏರ್ ಲೈನ್ಸಿನ Introductory offer 1999* ಎಂಬ ಕೊಡುಗೆ ವಿಧಿ ಆಟದ ಕುಚೋದ್ಯವಲ್ಲದೆ ಮತ್ತಿನ್ನೇನು?

English summary
Breaking News : A Pakistani civilian aircraft ( flight B4213) with 127 people on board crashed in bad weather near Islamabad's international airport on Friday eve -TV reports. The aircraft was operated by local carrier Bhoja Air. ( worst is feared, worst is feared) Just in : Plane crash near Chaklala kills 127 Boeing 737 of Bhoja Airline was carrying 121 passengers and six crew members from Karachi and was destined for Islamabad, when it crashed close to the airport amidst inclement weather. ( Root : Dawn.com)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X