• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ್ಯೂಸ್ ಚಾನೆಲ್ ಬಂದ್ ಕರೋ ಎಂದ ಮಮತಾ

By Mahesh
|

ಕೋಲ್ಕತ್ತಾ, ಏ.20: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚೆಗೆ ವಿವಾದಗಳ ಕೇಂದ್ರ ಬಿಂದುವಾಗಿದ್ದಾರೆ. ರಾಜ್ಯ ಗ್ರಂಥಾಲಯಗಳಲ್ಲಿ ಇಂಗ್ಲೀಷ್ ಪತ್ರಿಕೆ ಇರಿಸಕೂಡದು ಎಂದು ಆಜ್ಞೆ ನೀಡಿದ್ದ ಮಮತಾ, ಈಗ ಇಂಗ್ಲೀಷ್ ನ್ಯೂಸ್ ಚಾನೆಲ್ ಗಳ ಮೇಲೆ ಕೆಂಗಣ್ಣು ಬೀರಿದ್ದಾರೆ.

ಸಾರ್ವಜನಿಕರು ಯಾವ ಟಿವಿ ಚಾನೆಲ್ ನೋಡಬೇಕು ಯಾವುದನ್ನು ನೋಡಬಾರದು ಎಂಬುದನ್ನು ಮಮತಾ ನಿರ್ಧರಿಸುತ್ತಾರಂತೆ. ನ್ಯೂಸ್ ಚಾನೆಲ್ ಗಳನ್ನು ನೋಡುವುದು ಬಿಡಿ. ಮನರಂಜನೆ ಚಾನೆಲ್ ಗಳನ್ನು ನೋಡಿ ಎಂದು ಮಮತಾ ಇತ್ತೀಚೆಗೆ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ತಮ್ಮ ಸರ್ಕಾರದ ಆಡಳಿತವನ್ನು ಕೆಟ್ಟದಾಗಿ ಬಿಂಬಿಸುತ್ತಿರುವ ಟಿವಿ ಚಾನೆಲ್ ಗಳ ಮೇಲೆ ಮಮತಾ ಕಿಡಿಕಾರಿದರು. ನ್ಯೂಸ್ ಚಾನೆಲ್ ಬದಲು ಯಾವುದಾದರೂ ಮ್ಯೂಸಿಕ್ ಚಾನೆಲ್ ನೋಡಿ ಎಂದು ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

ಬೆಂಗಾಳದಲ್ಲಿ ಭೂ ಮಾಫಿಯಾ ಅಧಿಕವಾಗುತ್ತಿದೆ. ಹಾಗಾಗಿ ಸರ್ಕಾರದ ಮೇಲೆ ವಿವಿಧ ರೀತಿಯಿಂದ ಒತ್ತಡ ಹೇರಲಾಗುತ್ತಿದೆ. ರೈತರ ಜಾಗವನ್ನು ಕಿತ್ತುಕೊಂಡು ಎಸ್ ಇಜಡ್ ಗೆ ಮೀಸಲಿಡಲು ಅನೇಕ ಜನರು ಒತ್ತಡ ಹೇರುತ್ತಿದ್ದಾರೆ. ಈ ರೀತಿ ಮಾಫಿಯಾಗೆ ನಾನೆಂದು ತಲೆಬಾಗುವುದಿಲ್ಲ ಎಂದು ಮಮತಾ ಹೇಳಿದ್ದಾರೆ.

ನ್ಯೂಸ್ ಪೇಪರ್ ಗಳಿಗೆ ನಿರ್ಬಂಧ ಹೇರಿದಂತೆ, ನ್ಯೂಸ್ ಚಾನೆಲ್ ಗಳಿಗೂ ಮಮತಾ ಅಧಿಕೃತವಾಗಿ ನಿರ್ಬಂಧ ಹೇರುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

English summary
Mamata has now come up yet another ridiculous proposition for the Bengalis. She is now advising people on which TV channels to watch. She made this bizarre comment while addressing a gathering in North 24 Parganas. She has asked people to stop watching news channels and instead watch entertainment channels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X