• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಕ್ಕೆ ಸುಬ್ರಹ್ಮಣ್ಯಗೆ ಮೊರೆಹೋದ ವಿಜಯ್ ಮಲ್ಯ

By Srinath
|

Dr. Vijay Mallya surrenders before almighty

ಸುಬ್ರಹ್ಮಣ್ಯ, ಏ.20: ಇತ್ತೀಚೆಗೆ ಅಷ್ಟಮಂಗಲಕ್ಕೆ ಮೊರೆ ಹೋಗಿದ್ದ ಕಿಂಗ್ ಮಲ್ಯ ಗುರುವಾರ(ಏ.19) ಕುಕ್ಕೆ ಸುಬ್ರಮಣ್ಯ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

ಧರೆಗಿಳಿದಿರುವ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ನಿಂದಾಗಿ ಕಂಗೆಟ್ಟಿರುವ ಮದ್ಯದ ದೊರೆ ವಿಜಯ್‌ ಮಲ್ಯ ಅವರು ಐಪಿಎಲ್‌ ಟೂರ್ನಮೆಂಟಿನಲ್ಲಿ ತಮ್ಮ ಮಾಲೀಕತ್ವದ ಕಿಂಗ್‌ಫಿಶರ್‌ ತಂಡವು ವಿಜಯೀಭವವಾಗುವಂತೆ ಹರಸೋ ತಂದೆ ಎಂದು ಸುಬ್ರಮಣ್ಯನಲ್ಲಿ ಬೇಡಿಕೊಂಡರು. ಮಂಗಳೂರು ಮೂಲದ ಮಲ್ಯ ಅವರು ಆಗಾಗ ಕುಕ್ಕೆ ಸುಬ್ರಮಣ್ಯ ದೇವಳಕ್ಕೆ ಭೇಟಿ ನೀಡುತ್ತಿರುತ್ತಾರೆ.

ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ ಹಾಗೂ ಆಶ್ಲೇಷ ಬಲಿಗೆ ಸಂಕಲ್ಪ ಮಾಡಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ ದೇವಳದ ಗರ್ಭಗುಡಿಯ ಹೊರಗಿನ ಮಂಟಪದ ಬಾಗಿಲಿಗೆ ಚಿನ್ನದ ಕವಚ ಹೊದಿಸುವುದಾಗಿ ಹರಕೆ ಹೊತ್ತರು. ದೇವಳದ ಪರವಾಗಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣ ಪ್ರಸಾದ್‌ ಮಡ್ತಿಲ, ಕಾರ್ಯ ನಿರ್ವಹಣಾಧಿಕಾರಿ ಎಚ್‌.ಎಂ. ಕಾಳಿ ಹಾಗೂ ಶಿಷ್ಟಾಚಾರಾಧಿಕಾರಿ ವೆಂಕಟರಾಜು ಅವರು ಮಲ್ಯರನ್ನು ಸ್ವಾಗತಿಸಿದರು.

ದೇಗುಲ ದರ್ಶನದ ಭಾಗವಾಗಿ ನಂತರ ಬಂಟ್ವಾಳಕ್ಕೆ ತೆರಳಿದ ಮಲ್ಯ, ತಮ್ಮ ಮನೆ ದೇವರು ಶ್ರೀವೆಂಕರಮಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಸುಮಾರು ಎರಡು ಗಂಟೆಗಳ ಕಾಲ ದೇಗುಲದಲ್ಲಿ ಅವರು ಭಕ್ತಿ ಪರವಶರಾಗಿ ಕಾಲಕಳೆದರು. [Video : ಕುಕ್ಕೆ, ಕೊಲ್ಲೂರು, ಬಂಟ್ವಾಳದ ಮನೆದೇವರ ದರ್ಶನ ಪಡೆದ ಮಲ್ಯ]

ತಮಗೆ, ಅಂದರೆ, ಮುಖ್ಯವಾಗಿ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ತಟ್ಟಿರುವ ಶಾಪವನ್ನು ಪರಿಹರಿಸೋ ತಂದೆ ಎಂದು ಶ್ರೀಮನ್ನಾರಾಯಣನಲ್ಲಿ ಅರಿಕೆ ಮಾಡಿಕೊಂಡರು. ಈ ಸಂದರ್ಭದಲ್ಲಿ ಮಲ್ಯ ಜೊತೆ ಅವರ ಆಪ್ತ ಕಾರ್ಯದರ್ಶಿ ಮತ್ತು ಭದ್ರತಾ ಸಿಬ್ಬಂದಿ ಬಿಟ್ಟರೆ ಕುಟುಂಬದ ಇತರ ಸದಸ್ಯರು ಭಾಗವಹಿಸಿರಲಿಲ್ಲ.

ತಮ್ಮ ಈ ದೇವಸ್ಥಾನದ ಭೇಟಿಯನ್ನು ಮಲ್ಯ ಅವರು ಗುಟ್ಟಾಗಿ ಇಟ್ಟಿದ್ದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲು ನಿರಾಕರಿಸಿದರು. ಆದರೆ, ಅದು ಹೇಗೋ, ಸುವರ್ಣ ಮತ್ತು ಪಬ್ಲಿಕ್ ಟಿವಿಯ ಕ್ಯಾಮೆರಾಮನ್ ಗಳ ಕಣ್ಣಿಗೆ ಬಿದ್ದು ಬಿಟ್ಟರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Battered by losses in King Fisher Airlines; pushed to 8th slot on IPL 5 Points table, owner of RCB Dr. Vijay Mallya decided to seek blessings of the Almighty. The King on Thursday surrendered before his family deity Sri Venkateshwara Swamy in Bantwal, Dakshina Kannada District, Karnataka. The Liquor baron spent two hours performing various Poojas and participated in Temple rituals. Earlier, Mr. Mallya visited famous Kukke Subramanya Temple, offered Ashlesha Bali Pooja. Dr. Mallyas temple tour news/videos (Courtesy: Public TV)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more