ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳ ಮತಾಂತರ : ಕ್ರೈಸ್ತ ಧರ್ಮಪ್ರಚಾರಕನ ಬಂಧನ

By Prasad
|
Google Oneindia Kannada News

Trainee pastor arrested in Bangalore
ಬೆಂಗಳೂರು, ಏ. 20 : ಬೇಸಿಗೆ ಶಿಬಿರದಲ್ಲಿ ರಜಾ ಮಜಾದಲ್ಲಿ ತಲ್ಲೀನರಾಗಿದ್ದ ಮಕ್ಕಳ ತಲೆಕೆಡಿಸಿ, ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿದ್ದ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಪುಸಲಾಯಿಸುತ್ತಿದ್ದ ತರಬೇತಿಯಲ್ಲಿದ್ದ ಧರ್ಮಪ್ರಚಾರಕನನ್ನು ಮಹದೇವಪುರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮಕ್ಕಳ ಹೇಳಿಕೆಯ ಮೇಲೆ ಪಾಲಕರು ನೀಡಿದ ದೂರಿನ ಆಧಾರದ ಮೇಲೆ ಆಂಧ್ರಪ್ರದೇಶದ ಧರ್ಮಾವರಂನ 31 ವರ್ಷದ ಧರ್ಮಪ್ರಚಾರಕ ವಿಕ್ಟರ್ ಬಾಬು ಅಲಿಯಾಸ್ ವಿಕ್ಟರ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಆತನಿಂದ ಪ್ರಾರ್ಥನಾ ಪುಸ್ತಕ, ಮತಾಂತರವನ್ನು ಉತ್ತೇಜಿಸುವಂತಹ ಭಿತ್ತಿಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ 295ಎ ನಿಯಮದಡಿ ಪ್ರಕರಣ ದಾಖಲಿಸಲಾಗಿದೆ.

ವೈಟ್ ಫೀಲ್ಡ್ ಬಳಿಯ ಮಹದೇವಪುರದ ಕುಂಡಲಹಳ್ಳಿಯಲ್ಲಿ ಹೆಬ್ರನ್ ಪ್ರಾರ್ಥನಾ ಮಂದಿರದಲ್ಲಿ ವಿಕ್ಟರ್ ಸ್ವತಃ ನಡೆಸುತ್ತಿದ್ದ ಉಚಿತ ಬೇಸಿಗೆ ಶಿಬಿರದಲ್ಲಿ 14 ಹೆಣ್ಣುಮಕ್ಕಳು ಸೇರಿದಂತೆ 23 ಮಕ್ಕಳು ಭಾಗವಹಿಸುತ್ತಿದ್ದರು. ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಕ್ರಿಯಾತ್ಮಕ ಚಟುವಟಿಕೆಗಳನ್ನು ಕಲಿಸುವ ಬದಲಾಗಿ ಮತಾಂತರಕ್ಕೆ ಪುಸಲಾಯಿಸುತ್ತಿದ್ದ ಎಂದು ದೂರಲಾಗಿದೆ.

ಕೆಲ ಷರತ್ತುಗಳ ಮೇಲೆ ಮಕ್ಕಳಿಗೆ ಉಚಿತವಾಗಿ ಕ್ರಿಯಾತ್ಮಕ ಚಟುವಟಿಕೆಗಳ ಜೊತೆಗೆ ಶಿಕ್ಷಣ ನೀಡುವುದಾಗಿ ವಿಕ್ಟರ್ ಹೇಳಿದ್ದ. ಆದರೆ, ಆ ಷರತ್ತುಗಳು ಯಾವುದೆಂದು ಬಾಯಿಬಿಟ್ಟಿರಲಿಲ್ಲ ಎಂದು ಪಾಲಕರು ದೂರಿದ್ದಾರೆ. ಮಕ್ಕಳಿಗೆ ಪ್ರಾರ್ಥನೆಗಳನ್ನು ಹೇಳಿಕೊಡುವುದು ಮತಾಂತರ ಹೇಗೆ ಆಗುತ್ತದೆ ಎಂದು ವಿಕ್ಟರ್ ವಾದಿಸಿದ್ದಾನೆ. ವಿಕ್ಟರಿ ಯಾರಿಗೆ ಸಿಗಲಿದೆ ನ್ಯಾಯಾಲಯ ನಿರ್ಧರಿಸಲಿದೆ.

English summary
A trainee pastor, originally from Dharmavaram Andhra Pradesh, has been arrested in Bangalore by Mahadevapura police on a complaint that he was trying to convert children in summer camp. He has been booked under 295A section of Indian Penal Code.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X