ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Times ಗೌರವ: ಮಾ, ಭೂಮಿ, ಜನತೆಗೆ ಅರ್ಪಿಸಿದ ದೀದಿ

By Mahesh
|
Google Oneindia Kannada News

Mamata dedicates Time honour to 'Ma, Mati, Manush'
ನ್ಯೂಯಾರ್ಕ್, ಏ.19: ಪ್ರತಿಷ್ಠಿತ 'ಟೈಮ್' ನಿಯತಕಾಲಿಕವು ತಯಾರಿಸಿರುವ ವಿಶ್ವದ ನೂರು ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಹೆಸರನ್ನು ಸೇರಿಸಿದೆ. ಇದರಿಂದ ಹರ್ಷಗೊಂಡ ದೀದಿ 'Ma, Mati, Manush'(mother, land and people) ಗೆ ಅರ್ಪಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹಾಗೂ ಬೃಹತ್ ಹೂಡಿಕೆದಾರ ವಾರೆನ್ ಬಫೆಟ್‌ರ ಸಾಲಿನಲ್ಲಿ ಮಮತಾ ಗುರುತಿಸಿಕೊಂಡಿದ್ದಾರೆ.

ಮಮತಾ ಬ್ಯಾನರ್ಜಿ ಅಲ್ಲದೆ ಇನ್ನೊಬ್ಬ ಭಾರತೀಯ ಮಹಿಳೆ ಪಟ್ಟಿಲ್ಲಿ ಕಾಣಿಸಿಕೊಂಡಿದ್ದಾರೆ. ಸಲಿಂಗ ಕಾಮಿಗಳು ಹಾಗೂ ಲಿಂಗ ಪರಿವರ್ತಿತರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ವಕೀಲೆ ಅಂಜಲಿ ಗೋಪಾಲನ್ ಹೆಸರು ಕೂಡಾ ಸೇರ್ಪಡೆಗೊಂಡಿದೆ.

ಅಮೆರಿಕದ ಬಾಸ್ಕೆಟ್‌ಬಾಲ್ ಮಾಂತ್ರಿಕ ಜೆರೆಮಿ ಲಿನ್‌ರ ಹೆಸರು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.

ಮಮತಾ ವಿವಾದ: ರಾಜ್ಯ ಸರ್ಕಾರದ ಅನುದಾನ, ಗ್ರಂಥಾಲಯಗಳಿಗೆ ವಾರ್ತಾಪತ್ರಿಕೆಗಳ ಆಯ್ಕೆ ಹಾಗೂ ಮುಖ್ಯಮಂತ್ರಿಯ ವ್ಯಂಗ್ಯಚಿತ್ರವನ್ನು ರಚಿಸಿ ಪ್ರಸಾರ ಪ್ರಾಧ್ಯಾಪಕರೊಬ್ಬರ ಬಂಧನಕ್ಕೆ ಸೇರಿದಂತೆ ಇತ್ತೀಚೆಗೆ ಮಮತಾ ಬ್ಯಾನರ್ಜಿ ಸಾಕಷ್ಟು ವಿವಾದಗಳಲ್ಲಿ ಕಾಣಿಸಿಕೊಂಡಿದ್ದು.

ಆದರೆ, 57ರ ಹರೆಯದ ಬ್ಯಾನರ್ಜಿಯವರು ಕಠಿಣ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲ ರಾಜಕಾರಣಿ ಎಂದು ಟೈಮ್ಸ್ ಹೇಳಿದೆ.

English summary
West Bengal Chief Minister Mamata Banerjee, who has been named among 100 most influential people globally by Time magazine in its 2012 list, today(Apr.18) said it is a recognition for 'Ma, Mati, Manush'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X