ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡೀ ಚೀನಾ ಕ್ರಮಿಸಬಲ್ಲ ಅಗ್ನಿ-V ಯಶಸ್ವಿ ಉಡಾವಣೆ

By Prasad
|
Google Oneindia Kannada News

Agni-V successfully test launched
ನವದೆಹಲಿ, ಏ. 19 : ಇಡೀ ಚೈನಾವನ್ನು ಕ್ರಮಿಸುವ ತಾಕತ್ತಿರುವ ಮತ್ತು ಯುರೋಪನ್ನು ಮುಟ್ಟಬಲ್ಲ ಸಾಮರ್ಥ್ಯವಿರುವ ಇಂಟರ್-ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ICBM) ಅಗ್ನಿ-Vಯನ್ನು ಗುರುವಾರ ಭಾರತ ಅತ್ಯಂತ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಿತು. ರಾಕೆಟ್ಟನ್ನು ಓರಿಸ್ಸಾದ ವೀಲರ್ ದ್ವೀಪದಿಂದ ಉಡಾಯಿಸಲಾಯಿತು.

5,000 ಕಿ.ಮೀ. ಕ್ರಮಿಸಬಲ್ಲ ಭೂಮಿಯಿಂದ ಭೂಮಿಗೆ ಹಾರುವ ಭಾರತದ ಮೊತ್ತಮೊದಲ ಅಂತರ್‌ಖಂಡ ರಾಕೆಟ್ ಅಗ್ನಿ-V ಉಡಾವಣೆಯೊಂದಿಗೆ ಇಂಥ ರಾಕೆಟ್ಟನ್ನು ಯಶಸ್ವಿಯಾಗಿ ಉಡಾಯಿಸಿದ ಪ್ರತಿಷ್ಠಿತ ರಾಷ್ಟ್ರಗಳಾದ ಅಮೆರಿಕ, ಯುನೈಟೆಡ್ ಕಿಂಗ್‌ಡಂ, ರಷ್ಯಾ, ಫ್ರಾನ್ಸ್ ಮತ್ತು ಚೈನಾ ರಾಷ್ಟ್ರಗಳ ಸಾಲಿಗೆ ಸೇರಿತು.

"ನಾವು ಕೊನೆಗೂ ಇದನ್ನು ಸಾಧಿಸಿದ್ದೇವೆ. ಎಲ್ಲವೂ ಅಂದುಕೊಂಡಂತೆ ಸರಾಗವಾಗಿ ಆಯಿತು, ಸೂಪರ್ ಹಿಟ್" ಎಂದು ಡಿಆರ್‌ಡಿಓ ಮುಖ್ಯಸ್ಥ ವಿಕೆ ಸರಸ್ವತ್ ಅವರು ಉದ್ಘರಿಸಿದ್ದಾರೆ. "ನಮ್ಮ ದೇಶದ ಭದ್ರತೆ ಮತ್ತು ಸುರಕ್ಷತೆಗಾಗಿ ಡಿಆರ್‌ಡಿಓ ಮತ್ತಿತರ ಸಂಸ್ಥೆಗಳು ಸಾಕಷ್ಟು ದುಡಿದಿವೆ" ಎಂದು ಭಾರತದ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ಅಭಿನಂದಿಸಿದ್ದಾರೆ.

"ನಮ್ಮ ದೇಶ ಈಗ ಅತ್ಯಂತ ಎತ್ತರದ ಸ್ಥಾನಕ್ಕೇರಿದೆ. ನಾವು ಪ್ರತಿಷ್ಠಿತ ರಾಷ್ಟ್ರಗಳ ಸಾಲಿಗೆ ಸೇರಿದ್ದೇವೆ" ಎಂದು ಕೇಂದ್ರ ರಕ್ಷಣಾ ಸಚಿವ ಎಕೆ ಆಂಟನಿ ಅವರು ಅಗ್ನಿ-V ಉಡಾವಣೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಈ ಯೋಜನೆಗಾಗಿ ಡಿಆರ್‌ಡಿಓ 25 ಬಿಲಿಯನ್ ರುಪಾಯಿಗಳನ್ನು ವ್ಯಯಿಸಿದೆ. ಇದನ್ನು ಉಡಾವಣೆ ಮಾಡುವ ಮುಖಾಂತರ ಚೀನಾ ಸೇರಿದಂತೆ ತನ್ನ ಸುತ್ತಲಿನ ದೇಶಗಳಿಗೆ ಭಾರತ ಎಚ್ಚರಿಕೆ ನೀಡಿದೆ. ಆದರೆ, ನಮಗಿಂತ ಬಲಿಷ್ಠವಾಗಿರುವ ಚೀನಾ, 11,200 ಕೀ.ಮೀ. ದೂರ ಕ್ರಮಿಸುವ ಮಿಸೈಲನ್ನು ರೂಪಿಸಿದೆ. ಒಂದು ವೇಳೆ ಯಾವುದೇ ರಾಷ್ಟ್ರದಿಂದ ದಾಳಿಯಾದರೂ ತಾನೂ ಸಿದ್ಧವಿರುವುದಾಗಿ ಭಾರತದಿಂದ ಸಂದೇಶ ರವಾನೆಯಾಗಿರುವುದು ಸತ್ಯ. [ವಿಡಿಯೋ : ಭಾರತದ ಬತ್ತಳಿಕೆಗೆ ಅಗ್ನಿ ಅಸ್ತ್ರ]

English summary
India's first Inter-Continental Ballistic Missile (ICBM), Agni-V has been successfully test-fired from Wheeler Island, Odisha. Agni-V has a range of 5,000 kilometers. By launching it India has joined elite countries like USA, Russia, France, UK and China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X