ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯಮಿ ವಾರೆನ್‌ ಬಫೆಟ್‌ಗೂ ಇದೆ ಕ್ಯಾನ್ಸರ್‌

By Srinath
|
Google Oneindia Kannada News

warren-buffett-has-prostate-cancer
ನ್ಯೂಯಾರ್ಕ್, ಏ.19‌: ವಿಶ್ವದ ಮೂರನೆಯ ಅತಿ ದೊಡ್ಡ ಶ್ರೀಮಂತ ಉದ್ಯಮಿ ಅಮೆರಿಕದ ವಾರೆನ್‌ ಬಫೆಟ್‌ಗೆ ಕ್ಯಾನ್ಸರ್‌ ಆಗಿದೆ. ಆದರೆ ಪ್ರಾಣಕ್ಕೆ ಯಾವುದೇ ರೀತಿಯ ಅಪಾಯವಿಲ್ಲ. ಪ್ರಾಸ್ಟೇಟ್‌ (ಜನನಾಂಗದ ಗ್ರಂಥಿ) ಕ್ಯಾನ್ಸರ್‌ ಇದಾಗಿದೆ. ಒಂದು ವಾರದ ಹಿಂದೆ ಇದು ತನಗೆ ಗೊತ್ತಾಯಿತು ಎಂದು 81 ವರ್ಷದ ಬಫೆಟ್‌ ಹೇಳಿದ್ದಾರೆ. ನಮ್ಮ ಯುವರಾಜ (ಸಿಂಗ್), ಸೋನಿಯಾ ಗಾಂಧಿ ಅವರುಗಳನ್ನು ಯಾಕೋ ಈ ವೇಳೆ ಜ್ಞಾಪಿಸಿಕೊಳ್ಳುವಂತಾಗಿದೆ.

ಈ ಕುರಿತು ಷೇರುದಾರರಿಗೆ ಪತ್ರ ಬರೆದಿರುವ ಬಫೆಟ್‌, 'ನನ್ನಲ್ಲಿ ಒಂದನೇ ಹಂತದ ಪ್ರಾಸ್ಟೇಟ್‌ ಕ್ಯಾನ್ಸರ್‌ ಕಾಣಿಸಿಕೊಂಡಿದೆ. ಇನ್ನೆರಡು ತಿಂಗಳಲ್ಲಿ ಅಂದರೆ ಜುಲೈನಲ್ಲಿ ವಿಕಿರಣ ಚಿಕಿತ್ಸೆಗೆ ಒಳಗಾಗಲಿದ್ದೇನೆ. ಸಂತಸದ ವಿಷಯ ಏನೆಂದರೆ, ನನ್ನಲ್ಲಿ ಪತ್ತೆಯಾಗಿರುವ ಕ್ಯಾನ್ಸರ್‌ ಮಾರಣಾಂತಿಕವೇನೂ ಅಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ ವಾರ ಸಿಎಟಿ, ಮೂಳೆ ಹಾಗೂ ಎಂಆರ್‌ಐ ಸ್ಕ್ಯಾನ್‌ಗಳನ್ನು ಮಾಡಿಸಿಕೊಂಡೆ. ದೇಹದ ಬೇರೆಲ್ಲೂ ಕ್ಯಾನ್ಸರ್‌ ಕೋಶ ಪತ್ತೆಯಾಗಿಲ್ಲ' ಎಂದು ವಿವರಿಸಿದ್ದಾರೆ.

ಅಜಿತ್‌ ಜೈನ್‌ ಉತ್ತರಾಧಿಕಾರಿ?: ಆದರೆ ತಮ್ಮ ಉತ್ತರಾಧಿಕಾರಿಯ ಬಗ್ಗೆ ಅವರು ಪತ್ರದಲ್ಲಿ ಯಾವುದೇ ಸುಳಿವನ್ನೂ ನೀಡಿಲ್ಲ. ತಮ್ಮ ಉತ್ತರಾಧಿಕಾರಿ ಯಾರೆಂದು ಬಫೆಟ್‌ ಅಧಿಕೃತವಾಗಿ ಹೇಳದಿದ್ದರೂ ಭಾರತೀಯ ಮೂಲದ, ಬರ್ಕ್‌ಶೈರ್‌ ಸಾಮ್ರಾಜ್ಯದ ಮರುವಿಮಾ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾಗಿರುವ ಅಜಿತ್‌ ಜೈನ್‌ ಅವರಿಗೆ ಆ ಪಟ್ಟ ಒಲಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಕ್ಯಾನ್ಸರ್
ಫೋರ್ಬ್ಸ್ ನಿಯತಕಾಲಿಕೆಯ ಪ್ರಕಾರ ವಿಶ್ವದ ನಂ. 3 ಶ್ರೀಮಂತ ಬಫೆಟ್‌, ತಮ್ಮದೇ ಮಾಲೀಕತ್ವದ ಬರ್ಕ್‌ಶೈರ್‌ ಹಾಥ್ ವೇ ಕಂಪನಿಯಲ್ಲಿ 50 ವರ್ಷಗಳ ಕಾಲ ದುಡಿದಿದ್ದಾರೆ. ಅಮೆರಿಕದ ದೊಡ್ಡ ಕಂಪನಿ ಇದಾಗಿದ್ದು 10 ಲಕ್ಷ ಕೋಟಿ ರೂ. ಮೌಲ್ಯ ಹೊಂದಿದೆ. 2.2 ಲಕ್ಷ ಕೋಟಿ ರೂ. ಸಂಪತ್ತು ಹೊಂದಿರುವ ಬಫೆಟ್‌ ಹಲವಾರು ಸಮಾಜಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

English summary
Legendary investor Warren Buffett has said that he has been diagnosed with prostate cancer, but asserted that his condition is not remotely life-threatening and he feels great with 100 per cent energy level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X