ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿ ರಕ್ತ ಕಣವಿದ್ದ ಹುಲ್ಲಿನ ಬೆಲೆ 10,000 ಪೌಂಡ್

By Mahesh
|
Google Oneindia Kannada News

Mahathma Gandhiji
ಲಂಡನ್, ಏ.17: ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳದಲ್ಲಿ ಗಾಂಧೀಜಿ ಅವರ ರಕ್ತದ ಕಣವಿರುವ ಮಣ್ಣು ಹಾಗೂ ಹುಲ್ಲು ಹರಾಜು ಹಾಕಲಾಗಿದೆ. 1948 ರಲ್ಲಿ ಗಾಂಧೀಜಿ ಹತ್ಯೆಯಾದಾಗ ಸಂಗ್ರಹಿಸಿದ್ದ ಈ ಹುಲ್ಲು, ಮಣ್ಣು ಸುಮಾರು 10,000 ಪೌಂಡ್ ಬೆಲೆಗೆ ಹರಾಜಾಗಿದೆ.

ಗಾಂಧೀಜಿ ಅವರ ರೌಂಡ್ ಫ್ರೇಮ್ ಕನ್ನಡಕ ಸೇರಿದಂತೆ ಅನೇಕ ಸಂಗ್ರಹಯೋಗ್ಯ ವಸ್ತುಗಳನ್ನು ಹರಾಜು ಹಾಕಲಾಯಿತು. ಶ್ರೋರ್ಸ್ ಶೈರ್ ಮೂಲದ ಮುಲ್ಲೊಕ್ಸ ಅವರು ಹರಾಜು ಹಾಕಿದ ವಸ್ತುಗಳಲ್ಲಿ ಚರಕ, 10 ಇಂಚಿನ 78 rpmನ ಕೊಲಂಬಿಯಾ ಡಿಸ್ಕ್( ಆಧಾತ್ಮ ಕುರಿತ ವಿಚಾರಧಾರೆ), ಗಾಂಧೀಜಿ ಅಸಲಿ ಚಿತ್ರಗಳು ಹಾಗೂ 1931ರಲ್ಲಿ ನೀಡಿದ್ದ ಆಟೋಗ್ರಾಫ್, ರಾಘವನ್ ಎಂಬುವವರಿಗೆ ಇಂಗ್ಲೀಷ್ ನಲ್ಲಿ ಬರೆದ ಪತ್ರಗಳು, ಗುಜರಾತಿ ಪ್ರಾರ್ಥನೆ ಪುಸ್ತಕ ಸೇರಿದೆ.

ಕನ್ನಡಕ 34,000 ಪೌಂಡ್, ಚರಕ 26,500 ಪೌಂಡ್, ಪ್ರಾರ್ಥನಾ ಪುಸ್ತಕ 10,500 ಪೌಂಡ್ ಒಟ್ಟಾರೆ 128,000 ಪೌಂಡ್ ಗಳಿಗೆ ಸಂಗ್ರಹ ಹರಾಜಾಗಿದೆ. ಗಾಂಧಿಜೀ ರಕ್ತಕಣವಿರುವ ಮಣ್ಣು ಹಾಗೂ ಹುಲ್ಲು ಪಿಪಿ ನಂಬಿಯಾರ್ ಅವರ ಪಾಲಾಗಿದೆ.

English summary
A pinch of soil and blood-stained blades of grass from the place where Mahatma Gandhi was assassinated in 1948 was sold today for 10,000 pounds at an auction here in London.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X