ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಎಸ್ ಧೋನಿಗೆ ಜಾರ್ಖಂಡಿನಿಂದ ರಾಜ್ಯಸಭೆ ಸೀಟು

By Mahesh
|
Google Oneindia Kannada News

MS Dhoni eyeing Rajya Sabha seat?
ರಾಂಚಿ, ಏ.18: ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ನಂತರದ ಜೀವನವನ್ನು ಈಗಲೇ ರೂಪಿಸಿಕೊಂಡ ಹಾಗಿದೆ. ಜಾರ್ಖಂಡ್ ವಿಕಾಸ್ ಮೋರ್ಚಾ(JVM)ನೇತೃತ್ವ ಸಿಎಂ ಬಾಬುಲಾಲ್ ಮರಾಂಡಿ ಅವರು ಧೋನಿಯನ್ನು ರಾಜ್ಯಸಭೆಗೆ ನಾಮಕರಣ ಮಾಡಲು ಉತ್ಸುಕರಾಗಿದ್ದಾರೆ.

ಮೇ.3ಕ್ಕೆ ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಧೋನಿ ಹೆಸರನ್ನು ಪ್ರಸ್ತಾಪಿಸಲಾಗಿದೆ. ಮಾ,30ರಂದ ನಡೆದ ಚುನಾವಣೆಯಲ್ಲಿ ಸುಮಾರು 2.15 ಕೊಟಿ ಅಕ್ರಮ ಜರಗಿರುವುದು ಪತ್ತೆಯಾಗಿತ್ತು.

'ಭಾರತಕ್ಕೆ 28 ವರ್ಷಗಳ ನಂತರ ವಿಶ್ವಕಪ್ ಸಿಗುವಂತೆ ಮಾಡಿದ ಸಮರ್ಥ ನಾಯಕ ಧೋನಿ ಆಯ್ಕೆ ಸರಿಯಾಗಿದೆ ಎಂದು ಜೆವಿಎಂನ ಉಪಾಧ್ಯಕ್ಷ ಸಮರೇಶ್ ಸಿಂಗ್ ಹೇಳಿದ್ದಾರೆ.

ಈ ಮುಂಚೆ ರೈತ ಮುಖಂಡರಿಗೆ ಸೀಟು ನೀಡಲು ಮುಂದಾಗಿದ್ದ ಮರಾಂಡಿ ಈಗ ಧೋನಿ ಪರ ಬ್ಯಾಟಿಂಗ್ ಮಾಡುತ್ತಿರುವುದು ಪಕ್ಷದ ಶಾಸಕರಿಗೆ ಗೊಂದಲ ಮೂಡಿಸಿರುವುದಂತೂ ನಿಜ.
ಈ ಬಗ್ಗೆ ಧೋನಿ ಜೊತೆ ಅನಔಪಚಾರಿಕ ಮಾತುಕರೆ ನಡೆಸಲಾಗಿದೆ. ಧೋನಿ ಚಿಂತಿಸಿ ಉತ್ತರಿಸುವ ಭರವಸೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿದೆ.

English summary
India’s Captain Cool Mahendra Singh Dhoni is reportedly being considered for a Rajya Sabha nomination from Jharkhand. The name is understood to be proposed by Opposition Jharkhand Vikas Morcha (JVM) led by former CM Babulal Marandi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X