ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೇಸುದಾಸ್ ದೇಗುಲ ಪ್ರವೇಶ ಆಗ್ರಹಿಸಿ ಧರಣಿ

By Mahesh
|
Google Oneindia Kannada News

Singer Yesudas
ತ್ರಿಸ್ಸೂರು, ಏ.18: ಜನಪ್ರಿಯ ಗಾಯಕ ಕೆಜೆ ಯೇಸುದಾಸ್ ಅವರಿಗೆ ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇಗುಲಕ್ಕೆ ಪ್ರವೇಶ ನಿರಾಕರಿಸಿರುವುದನ್ನು ಖಂಡಿಸಿರುವ ಸಂಘಟನೆಯೊಂದು ಪ್ರತಿಭಟನೆಗೆ ಮುಂದಾಗಿದೆ.

ಹಿಂದೂ ಧರ್ಮಕ್ಕೆ ಸೇರದ ಅನ್ಯಧರ್ಮೀಯರಿಗೆ ಕೃಷ್ಣ ದೇಗುಲದಲ್ಲಿ ಪ್ರವೇಶ ನಿಷಿದ್ಧವಾಗಿದೆ. ಹೀಗಾಗಿ ಹುಟ್ಟಿನಿಂದ ಕ್ರೈಸ್ತ ಧರ್ಮಕ್ಕೆ ಸೇರಿರುವ ಯೇಸುದಾಸ್ ಅವರನ್ನು ಕೂಡಾ ದೇಗುಲದ ಒಳಗೆ ಬಿಟ್ಟಿಲ್ಲ.

ಜನಸೇವಾ ಮುನ್ನಾನಿ ಎಂಬ ಹೆಸರಿನ ದಾನದತ್ತಿ ಸಂಘಟನೆ ಈಗ ಯೇಸುದಾಸ್ ಪರವಾಗಿ ಪ್ರತಿಭಟನೆ ನಡೆಸಲು ಮುಂದಾಗಿದೆ. ಮೇ.1ರಂದು ದೇಗುಲದ ಎದುರು ಧರಣಿ ಕೂತು ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘಟನೆ ಮುಖ್ಯಸ್ಥ ಸೋಮನ್ ಪಿಳ್ಳೈ ಹೇಳಿದ್ದಾರೆ.

ಯೇಸುದಾಸ್ ದೇಗುಲ ಪ್ರವೇಶ ನಿರಾಕರಿಸುವವರೂ ಕೂಡಾ ಅವರು ಗುರುವಾಯೂರಪ್ಪನ್ ಕುರಿತು ಹಾಡಿದ ಹಾಡುಗಳನ್ನು ಮೆಚ್ಚಿದ್ದಾರೆ. ಯೇಸುದಾಸ್ ಅವರನ್ನು ಅನೇಕ ದೇಗುಲಗಳು ಆಸ್ಥಾನ ವಿದ್ವಾನ್ ಆಗಿ ಪರಿಗಣಿಸಿ ಗೌರವಿಸಿದೆ.

ಕೊಲ್ಲೂರು ಮುಕಾಂಬಿಕಾ ದೇಗುಲದಲ್ಲಿ ವಿಶೇಷ ಗೌರವ ಸ್ಥಾನ ಮನ್ನಣೆ ನೀಡಲಾಗಿದೆ. ಕಳೆದ 30 ವರ್ಷಗಳಿಂದ ತಮ್ಮ ಹುಟ್ಟುಹಬ್ಬ ಆಚರಣೆಯನ್ನು ಕೊಲ್ಲೂರು ಅಮ್ಮನ ಸನ್ನಿಧಿಯಲ್ಲಿ ಮಹಾನ್ ಗಾಯಕ ಆಚರಿಸುತ್ತಾ ಬಂದಿದ್ದಾರೆ. ಆದರೆ ಕೇರಳದ ದೇಗುಲದಲ್ಲಿ ಮಾತ್ರ ಏಕೆ ಈ ತಾರತಮ್ಯ ಎಂದು ಪಿಳ್ಳೈ ಪ್ರಶ್ನಿಸಿದ್ದಾರೆ.

English summary
A Christian by birth, Yesudas is banned entry since the Guruvayur Sree Krishna temple is out of bounds for non-Hindus. Yesudas has to his credit many songs on the deity, Sri Guruvayurappan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X