ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿ ಕುಸಿತ, ಎಚ್ ಸಿಎಲ್ ಗೆ ಭರ್ಜರಿ ಲಾಭ

By Mahesh
|
Google Oneindia Kannada News

HCL Technologies
ಬೆಂಗಳೂರು, ಏ.18: ಇನ್ಫೋಸಿಸ್ ಸಂಸ್ಥೆ ಹೊರಗುತ್ತಿಗೆ ಸೇವೆಯಲ್ಲಿ ಕೊಂಚ ವೀಕ್ ಆಗಿದೇ ತಡ, ಪ್ರತಿಸ್ಪರ್ಧಿ ಎಚ್ ಸಿಎಲ್ ಸಂಸ್ಥೆ ಭರ್ಜರಿ ಲಾಭದತ್ತ ಹೆಜ್ಜೆ ಹಾಕಿದೆ. ಜುಲೈ-ಜೂನ್ ಆರ್ಥಿಕ ವರ್ಷ ಮಾದರಿ ಅನುಸರಿಸುವ ಎಚ್ ಸಿಎಲ್ ಸಂಸ್ಥೆ ತನ್ನ Q3 ವರದಿಯನ್ನು ಬುಧವಾರ(ಏ.18) ಪ್ರಕಟಿಸಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿ ಶೇ.28 ರಷ್ಟು ಲಾಭ ಗಳಿಸಿದೆ.

ಭಾರತದ ನಾಲ್ಕನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಎಚ್ ಸಿಎಲ್ ಸುಮಾರು 2.5 ಬಿಲಿಯನ್ ಡಾಲರ್ ಗೂ ಅಧಿಕ ಮೌಲ್ಯದ ಹೊಸ ಒಪ್ಪಂದಗಳನ್ನು ಕಳೆದ ಎರಡು ತ್ರೈಮಾಸಿಕದಲ್ಲಿ ಕಂಡಿದೆ.

ಮಾರ್ಚ್ 31ಕ್ಕೆ ಅನ್ವಯವಾಗುವಂತೆ ಮೂರನೇ ತ್ರೈಮಾಸಿಕದಲ್ಲಿ ಲಾಭ 6 ಬಿಲಿಯನ್ ರು(116.4 ಮಿಲಿಯನ್ ಡಾಲರ್) ಆಗಿದೆ. ಕಳೆದ ವರ್ಷ ಇದೆ ಅವಧಿಯಲ್ಲಿ 4.68 ಬಿಲಿಯನ್ ರುಪಾಯಿ ಮಾತ್ರ ಗಳಿಸಿತ್ತು.

ಮಾರಾಟ ಶೇ 26ರಷ್ಟು ಅಥವಾ 52.16 ಬಿಲಿಯನ್ ರುಪಾಯಿಯಷ್ಟು ಏರಿಕೆ ಕಂಡಿದೆ. ನಿವ್ವಳ ಲಾಭ 5.74 ಬಿಲಿಯನ್ ರುಪಾಯಿ ಬರುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಮುನ್ಸೂಚನೆ ನೀಡಿದ್ದಾರೆ.

ಜೆರಾಕ್ಸ್, ರೀಡರ್ಸ್ ಡೈಜಸ್ಟ್ ಅಸೋಸಿಯೇಷನ್ ಮುಂತಾದ ಪ್ರಮುಖ ಸಂಸ್ಥೆಗಳು ಎಚ್ ಸಿಎಲ್ ಗ್ರಾಹಕರ ಪಟ್ಟಿಯಲ್ಲಿದ್ದಾರೆ.

2ನೇ ತ್ರೈಮಾಸಿಕದ ಅವಧಿಯಲ್ಲಿ ಒಟ್ಟು 2,556 ಹೊಸ ನೇಮಕಾತಿ ನಡೆದಿದೆ. ಡಿ.31 ರ ಕೊನೆಗೆ ಕಂಪನಿಯ ಉದ್ಯೋಗಿಗಳ ಸಂಖ್ಯೆ 83,076 ನಷ್ಟಿದೆ ಎಂದು ಎಚ್ ಸಿಎಲ್ ನ ಸಿಎಫ್ ಒ ಅನಿಲ್ ಹೇಳಿದ್ದಾರೆ.

ಶಿವ ನಾಡರ್ ಮುಖ್ಯಸ್ಥರಾಗಿರುವ ಎಚ್ ಸಿಎಲ್ ಟೆಕ್ನಾಲಜೀಸ್ ಲಿ. ಷೇರುಗಳು ಶೇ.4.5 ರಷ್ಟು ಏರಿಕೆ ಕಂಡಿದೆ(ಬುಧವಾರ, ಏ.18, ಬಿಎಸ್ ಇ)[ಗುಡ್ ರಿಟರ್ನ್ಸ್]

English summary
HCL Technologies reported a better than expected financial performance928 percent rise) for the third quarter, with the markets heaving a sigh of relief, after the dismal performance of IT major Infosys.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X