ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಚನೆ ಆರೋಪ ಇಸ್ಕಾನ್ ಗೆ ಲೋಕಾಯುಕ್ತ ನೋಟಿಸ್

By Mahesh
|
Google Oneindia Kannada News

ISKCON Indore Fraud
ಇಂದೋರ್, ಏ.17: ಸ್ಥಳೀಯ ಸರ್ಕಾರದಿಂದ ಕಡಿಮೆ ದರಕ್ಕೆ ವಾಣಿಜ್ಯ ನಿವೇಶನ ಪಡೆದು ಇಸ್ಕಾನ್ ಸಂಸ್ಥೆ ಐಟಿ ಪಾರ್ಕ್ ಕಟ್ಟುವುದಾಗಿ ಹೇಳಿ ನಾಮ ಹಾಕಿದ ಘಟನೆ ವರದಿಯಾಗಿದೆ. ಉಜ್ಜಯಿನಿಯ ಐಟಿ ಪಾರ್ಕ್ ಸ್ಥಾಪನೆ ಮಾಡುವುದಾಗಿ ವಂಚಿಸಿರುವ ಇಸ್ಕಾನ್ ಮೇಲೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಐಟಿ ಪಾರ್ಕ್ ಸ್ಥಾಪನೆಗೆ ಬೇಕಾದ ಬಂಡವಾಳ ಸಾಲದೆ ಸ್ಥಳೀಯ ಬ್ಯಾಂಕೊಂದರಿಂದ ಸುಮಾರು 13.5 ಕೋಟಿ ರು ಸಾಲವನ್ನು ಪಡೆದಿರುವುದು ಬೆಳಕಿಗೆ ಬಂದಿದೆ.

ಇಸ್ಕಾನ್ ಅಕ್ರಮದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆ ವಂಚನೆ ಪ್ರಕರಣ ದಾಖಲಿಸಿಕೊಂಡಿದೆ. ಉಜ್ಜಯನಿ ಅಭಿವೃದ್ಧಿ ಪ್ರಾಧಿಕಾರದ ಸಿಇಒಗಳಾದ ಚಂದ್ರಮೌಳಿ ಶುಕ್ಲಾ

ಇಸ್ಕಾನ್ ಸ್ಥಳೀಯ ಮುಖ್ಯಸ್ಥ ಭಕ್ತಿ ಚಾರು ಸ್ವಾಮಿ ಮಹಾರಾಜ್, ನಿರ್ಮಲ್ ಉಪಾಧ್ಯಾಯ, ಅವಧ್ ಶೋತ್ರಿಯಾ ಎಂಬ ಮಾಜಿ ಸಿಇಒಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ ಎಂದು ಲೋಕಾಯಕ್ತ ಎಸ್ ಪಿ ಅರುಣ್ ಮಿಶ್ರಾ ಹೇಳಿದ್ದಾರೆ.

ವಂಚನೆ ಕಥೆ ಹೀಗಿದೆ..: 2005ರಲ್ಲಿ 13.5 ಮೌಲ್ಯದ ಭೂಮಿಯನ್ನು ಭಕ್ತಿ ಚಾರು ಸ್ವಾಮಿ ಮಹಾರಾಜ್ ಸ್ವಾಮ್ಯದ ವರಾಹಮಿಹಿರ್ ಇನ್ಫೋಟೆಕ್ ಸಂಸ್ಥೆಗೆ ಕೇವಲ 1.4 ಕೋಟಿ ರು. ಗಳಿಗೆ ನೀಡಲಾಗಿತ್ತು. ಆದರೆ, ಐಟಿ ಪಾರ್ಕ್ ನಿರ್ಮಾಣಕ್ಕೆ ನಗರ ಪಾಲಿಕೆ ವಿರೋಧ ವ್ಯಕ್ತಪಡಿಸಿತ್ತು.

2010 ರಲ್ಲಿ ವರಾಹಮಿಹಿರ್ ಇನ್ಫೋಟೆಕ್ ಸಂಸ್ಥೆ ಐಟಿ ಪಾರ್ಕ್ ನಿರ್ಮಿಸಲು 13.5 ಕೋಟಿ ರು ಸಾಲವನ್ನು ಅಲಹಾಬಾದ್ ಬ್ಯಾಂಕ್ ನಿಂದ ಪಡೆದಿದೆ. ಈ ಸಾಲದ ಮೊತ್ತವನ್ನು ಅಲ್ಕೊಕ್ ಪ್ರೈ ಲಿ ಎಂಬ ಬೇನಾಮಿ ಸಂಸ್ಥೆಗೆ ವರ್ಗಾಯಿಸಿದೆ.

ಈ ಮೊತ್ತದಲ್ಲಿ 8.5 ಕೋಟಿ ರು ಹಣವನ್ನು ಡ್ರಾ ಮಾಡಿಕೊಂಡಿದೆ. ಅಲಹಾಬಾದ್ ಬ್ಯಾಂಕ್ ಈಗ ಸರ್ಕಾರಿ ಜಮೀನನ್ನು ಸಾಲಕ್ಕೆ ಆಧಾರವಾಗಿ ನೀಡಿರುವುದು ಹಾಗೂ ಯಾವುದೇ ಐಟಿ ಪಾರ್ಕ್ ಮಾದರಿ ಕಟ್ಟಡ ನಿರ್ಮಾಣವಾಗದಿರುವುದನ್ನು ಕಂಡು ಅಲಹಾಬಾದ್ ಬ್ಯಾಂಕ್ ಕೂಡಾ ನೋಟಿಸ್ ಜಾರಿ ಮಾಡಿದೆ. ಇಸ್ಕಾನ್ ನಿಂದ ಅಕ್ರಮವಾಗಿರುವುದನ್ನು ವಕ್ತಾರ ರಾಘವ್ ಕೂಡಾ ಒಪ್ಪಿಕೊಂಡಿದ್ದಾರೆ.

English summary
The Lokayukta has also served notice on regional chief of ISKCON, Bhakti Charu Swami Maharaj. CEOs of Ujjain Development Authority said Lokayukta SP Arun Mishra. Varahmihir Infotech limited, a firm owned by the ISKCON trust cheated by not setting up Information Technology (IT) park in Ujjain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X