ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಂಡ್ ಟ್ರೀಗೆ 68.9 ಕೋಟಿ ರು ನಿವ್ವಳ ಲಾಭ

By Mahesh
|
Google Oneindia Kannada News

MindTree Q4 net profit doubles
ಬೆಂಗಳೂರು, ಏ.17: ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿ ಮೈಂಡ್ ಟ್ರೀ ಕಂಪನಿ ತನ್ನ 4ನೇ ತ್ರೈಮಾಸಿಕದಲ್ಲಿ 68.9 ಕೋಟಿ ರು ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 32 ಕೋಟಿ ರು ಮಾತ್ರ ಲಾಭ ಗಳಿಸಿತ್ತು.

2011-12 ಆರ್ಥಿಕ ವರ್ಷ ಸಂಸ್ಥೆಗೆ ಲಾಭದಾಯಕವಾಗಿ ಪರಿಣಮಿಸಿದೆ. ಕಂಪನಿ ಏಳಿಗೆ ಹಿಂದೆ ಉದ್ಯೋಗಿಗಳ ಪರಿಶ್ರಮ ಅಡಗಿದೆ ಎಂಬುದನ್ನು ಮರೆಯುವಂತಿಲ್ಲ.'back to basics' ಎಂಬ ತತ್ತ್ವದಡಿಯಲ್ಲಿ ಸಂಸ್ಥೆ ಪ್ರಗತಿ ಕಂಡಿದೆ ಎಂದು ಮೈಂಡ್ ಟ್ರೀ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್ ನಟರಾಜನ್ ಹೇಳಿದ್ದಾರೆ.

QoQ (ಕಳೆದ ವರ್ಷದ ಪ್ರಸಕ್ತ ತ್ರೈಮಾಸಿಕಕ್ಕೆ ಹೋಲಿಸಿದರೆ) ಶೇ 1.2 ರಷ್ಟು ಆದಾಯ ಹಾಗೂ YoY (ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ)ಶೇ 34.4 ರಷ್ಟು ಅಥವಾ 5,257 ಕೋಟಿ ಆದಾಯ ಗಳಿಸಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ ಶೇ 13.7 ರಷ್ಟು ಹಾಗೂ Yoyನಲ್ಲಿ ಶೇ 115.3 ರಷ್ಟು ಅಥವಾ 68.9 ಕೋಟಿ ರು ಲಾಭ ಗಳಿಸಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ ಕಂಪನಿ ಬಿಡುವವರ(ಗ್ರಾಹಕರು, ಉದ್ಯೋಗಿಗಳು-attrition-rate) ಸಂಖ್ಯೆ ಕೂಡಾ ಶೇ 19.4 ರಿಂದ ಶೇ 18.2ಕ್ಕೆ ಇಳಿಕೆಯಾಗಿದೆ.

ಪ್ರತಿ ಷೇರಿಗೆ ರು.1.5 ನಂತೆ ಅಂತಿಮ ಲಾಭಾಂಶವನ್ನು ಸಂಸ್ಥೆ ಘೋಷಿಸಿದೆ. ಮಾರ್ಚ್ 31, 2012ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಅಂಕಿ ಅಂಶದಂತೆ ಸಂಸ್ಥೆ 237 ಸಕ್ರಿಯ ಗ್ರಾಹಕರನ್ನು ಹೊಂದಿದೆ. ಇದರಲ್ಲಿ 37 ಜಾಗತಿಕ ಫಾರ್ಚೂನ್ 500 ಕಂಪನಿಗಳಾಗಿದೆ.

ಪ್ರಸಕ್ತ ತ್ರೈಮಾಸಿಕ (Q4)ದಲ್ಲಿ ಸುಮಾರು 502 ಜನ ಹೊಸ ಉದ್ಯೋಗಿಗಳ ನೇಮಕಾತಿ ನಡೆದಿದೆ. ಸಂಸ್ಥೆಯ ಒಟ್ಟಾರೆ ಉದ್ಯೋಗಿಗಳ ಸಂಖ್ಯೆ 11,000ಕ್ಕೆ ಏರಿದೆ. 522.00 ರು ದರದಂತೆ ಬಿಎಸ್ ಇನಲ್ಲಿ ಮೈಂಡ್ ಟ್ರೀ ಷೇರುಗಳು ಬೆಳಗ್ಗಿನಿಂದ ಏರಿಕೆಯಲ್ಲೇ ಸಾಗಿದೆ.

English summary
MindTree posted higher than expected consolidated net profit of Rs 68.9 crore. The company had posted a net profit of Rs 32 crore in the previous period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X