ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಮಾರುಕಟ್ಟೆ ಮೇಲೆ ಫೇಸ್ ಬುಕ್ ಕಣ್ಣು

By Mahesh
|
Google Oneindia Kannada News

Facebook Inc buys Tagtile
ಬೆಂಗಳೂರು/ಕ್ಯಾಲಿಫೋರ್ನಿಯಾ, ಏ.17: ಸಮಾಜಿಕ ಜಾಲ ತಾಣ ದಿಗ್ಗಜ ಫೇಸ್ ಬುಕ್ ಈಗ ಮೊಬೈಲ್ ಫೋನ್ ಮಾರುಕಟ್ಟೆ ಮೇಲೆ ಕಣ್ಣಿಟ್ಟಿದೆ. ಮೊಬೈಲ್ ಫೋನ್ ಫೋಟೋ ಅಪ್ಲಿಕೇಷನ್ ಇನ್ ಸ್ಟಾಗ್ರಾಮ್ ಅನ್ನು 1 ಬಿಲಿಯನ್ ಡಾಲರ್ ಕೊಟ್ಟು ಖರೀದಿಸಿದ ಮೇಲೆ ಫೇಸ್ ಬುಕ್ ಯೋಜನೆ ಏನು ಎಂಬುದು ಖಾತ್ರಿಯಾಗಿದೆ.

ಕ್ಯಾಲಿಫೋರ್ನಿಯಾ ಮೂಲದ ಫೇಸ್ ಬುಕ್ ಸಂಸ್ಥೆ ಈಗ ಟ್ಯಾಗ್ ಟೈಲ್ ಎಂಬ startup ಕಂಪನಿಯನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು ಎಲ್ಲರನ್ನು ಹುಬ್ಬೇರಿಸಿದೆ. ಕೋಟ್ಯಾಂತರ ಡಾಲರ್ ಬೆಲೆ ಬಾಳು ಫೇಸ್ ಬುಕ್, ಈಗಷ್ಟೇ ಕಣ್ಣು ಬಿಡುತ್ತಿರುವ ಸಂಸ್ಥೆಗಳನ್ನು ಖರೀದಿಸುತ್ತಿರುವುದು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.

ಮೊಬೈಲ್ ಮಾರುಕಟ್ಟೆ ಕ್ಷೇತ್ರದಲ್ಲಿ ಹೆಸರು ಮಾಡಿರುವ ಟ್ಯಾಗ್ ಟೈಲ್ ಸಂಸ್ಥೆಯ ಸ್ಥಾಪಕರು ಫೇಸ್ ಬುಕ್ ಸೇರುತ್ತಿದ್ದಾರೆ ಎಂದು ಹೇಳಲು ಹರ್ಷವಾಗುತ್ತಿದೆ. ಟ್ಯಾಗ್ ಟೈಲ್ ಈಗ ಫೇಸ್ ಬುಕ್ ಅಧೀನಕ್ಕೆ ಒಳಪಡಲಿದೆ ಎಂದು ಫೇಸ್ ಬುಕ್ ವಕ್ತಾರ ಮೆನ್ಲೊ ಪಾರ್ಕ್ ಹೇಳಿದ್ದಾರೆ.

ಆದರೆ, ಟ್ಯಾಗ್ ಟೈಲ್ ಖರೀದಿ ಮೊತ್ತ ಮಾತ್ರ ಇನ್ನೂ ಬಹಿರಂಗಗೊಂಡಿಲ್ಲ. ಟ್ಯಾಗ್ ಟೈಲ್ ಸ್ಥಾಪಕರಾದ ಎನ್ನಾರೈ ಅಭೀಕ್ ಆನಂದ್ ಹಾಗೂ ಸೋಹಂ ಮಂಜುಂದಾರ್ ಇಬ್ಬರು ಸಕತ್ ಥ್ರಿಲ್ ಆಗಿದ್ದಾರೆ. ವಿಎಂವೇರ್ ಹಾಗೂ ಗೂಗಲ್ ನಲ್ಲಿ ಇಬ್ಬರು ಈ ಮುಂಚೆ ಉದ್ಯೋಗಿಗಳಾಗಿದ್ದವರು ಎಂದು ಅವರ ವೆಬ್ ತಾಣದಿಂದ ತಿಳಿದು ಬರುತ್ತದೆ.

ಏನು ಫೇಸ್ ಬುಕ್ ತಂತ್ರ: ಮೊಬೈಲ್ ಮಾರುಕಟ್ಟೆ ವಿಸ್ತೀರ್ಣಗೊಳ್ಳುತ್ತಿದ್ದಂತೆ, ಜನರು ಹೆಚ್ಚೆಚ್ಚು ಮೊಬೈಲ್ ಕಾಮರ್ಸ್ ನತ್ತ ಗಮನ ಹರಿಸಲಿದ್ದಾರೆ. ಮೊಬೈಲ್ ಫೋನ್ ಮೂಲಕ ವ್ಯವಹಾರ ಸ್ಥಿರಗೊಳಿಸುವುದು ಫೇಸ್ ಬುಕ್ ಉದ್ದೇಶ.

ಇದಲ್ಲದೆ, ಚಿಂತಿಸಿದೆ ಸುಮಾರು 100 ಬಿಲಿಯನ್ ಡಾಲರ್ ಮೌಲ್ಯದ ಫೇಸ್ ಬುಕ್ ಕಂಪನಿ ಸಾರ್ವಜನಿಕರಿಗೆ ಒಂದಿಷ್ಟು ಷೇರುಗಳನ್ನು initial public offering ಮೂಲಕ ನೀಡಿ 5 ಬಿಲಿಯನ್ ಡಾಲರ್ ನಷ್ಟು ಸಾರ್ವಜನಿಕವಾಗಿ ಲಾಭ ಗಳಿಸಲು ಚಿಂತಿಸಿದೆ.

English summary
After Instagram Social Networkd gaint Facebook buys mobile marketing startup Tagtile. Tagtile app is popular in both iphone and Android smartphones. Tagtile started by NRI Abheek Anand and Soham Mazumdar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X