ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನಾ ಸಿಬ್ಬಂದಿಗೆ ಫೇಸ್‌ಬುಕ್, ಅರ್ಕುಟ್‌ ಕಟ್‌

By Srinath
|
Google Oneindia Kannada News

facebook-arkut-cut-for-indian-army-staff
ನವದೆಹಲಿ,ಏ.16: ದೇಶದ ಸೇನಾಪಡೆಯ ಯಾವುದೇ ಸಿಬ್ಬಂದಿ ಫೇಸ್‌ಬುಕ್‌, ಟ್ವೀಟರ್‌, ಆರ್ಕುಟ್‌, ಗೂಗಲ್ ಪ್ಲಸ್ ಅಂತಹ ಆನ್‌ಲೈನ್‌ ಸಾಮಾಜಿಕ ತಾಣಗಳಲ್ಲಿ ಗುರಿತಿಸಿಕೊಳ್ಳುವುದಕ್ಕೆ ಸೇನೆ ನಿಷೇಧಿಸಿದೆ. ಈಗಾಗಲೇ ಇಂತಹ ತಾಣಗಳಲ್ಲಿ ಇರುವವರು ಕೂಡಲೇ ಅವುಗಳಿಂದ ವಿಮುಖರಾಗಬೇಕು. ಜತೆಗೆ ಮುಂದೆ ಕೂಡಾ ಅಂತಹ ತಾಣಗಳಿಗೆ ಸೇರಬಾರದು ಎಂದೂ ಸೇನೆ ಸೂಚನೆ ಹೊರಡಿಸಿದೆ.

ಆನ್‌ಲೈನ್‌ನಲ್ಲಿ ಸಕ್ರಿಯರಾಗಿರುವವರ ಮೂಲಕ ಗುಪ್ತ ಮಾಹಿತಿ ಪಡೆಯಲು ಶತ್ರು ರಾಷ್ಟ್ರಗಳಿಗೆ ಸುಲಭ ಸಾಧ್ಯವಾಗುತ್ತದೆ. ಹಾಗಾಗಿ ಶತ್ರು ರಾಷ್ಟ್ರಗಳ ಆಮಿಷಕ್ಕೆ ಒಳಗಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಎರಡು ತಿಂಗಳ ಹಿಂದೆಯೇ ಈ ಸಂಬಂಧ ಸೇನೆ ಆದೇಶ ಹೊರಡಿಸಿದೆ.

ಸುಮಾರು 36,000 ಅಧಿಕಾರಿ ವರ್ಗ ಹಾಗೂ 11.3 ಲಕ್ಷ ಸೇನಾ ಸಿಬ್ಬಂದಿಯ ಪೈಕಿ ಪ್ರತಿಯೊಬ್ಬರ ಆನ್‌ಲೈನ್‌ ಚಲನವಲನಗಳ ಬಗ್ಗೆ ಕಣ್ಣಿಡುವುದು ಅಸಾಧ್ಯ ಸಂಗತಿ. ಹೀಗಾಗಿ ಅವರು ಇಂತಹ ತಾಣಗಳಿಗೆ ಪ್ರವೇಶ ಪಡೆಯುವುದನ್ನೇ ನಿಷೇಧಿಸುವುದೆ ಸೂಕ್ತ ಎಂದು ಭಾರತೀಯ ಸೇನೆ ತೀರ್ಮಾನಿಸಿದೆ. ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೇನೆ ನಿರ್ಧರಿಸಿದೆ.

English summary
It seems that India's security is at stake by its own men. In a recent development, Indian army ordered its officials to terminate their accounts on social networking sites such as Facebook, Twitter Orkut, Google Plus and many more. Here it can be mentioned that the latest orders will be issued on all 36,000 officers and other personnel of the 1.13 million-strong force.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X