ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪಗೆ ಮತ್ತೆ ಹೈಕೋರ್ಟ್ ಕಂಟಕ

By Srinath
|
Google Oneindia Kannada News

prosecute-bsy-high-court-sirajin-basha-bharadwaj
ಬೆಂಗಳೂರು, ಏ.16: ಹೈಕೋರ್ಟಿನ ನ್ಯಾಯತಕ್ಕಡಿ ಮತ್ತೊಮ್ಮೆ ಯಡಿಯೂರಪ್ಪ ಅವರ ವಿರುದ್ಧ ದಿಕ್ಕಿನಲ್ಲಿ ವಾಲಿಕೊಂಡಿದೆ. ರಾಜ್ಯಪಾಲರು ತಮ್ಮ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ತಿರಸ್ಕರಿಸಿದೆ.

ಜೂನ್ 14ರಂದು ಪ್ರಕರಣದ ಸಂಬಂಧ ಯಡಿಯೂರಪ್ಪ ವಿರುದ್ಧ ವಿಚಾರಣೆ ನಡೆಯಲೆಂದು ದಿನಾಂಕವನ್ನು ನಿಗದಿಪಡಿಸಿ, ನ್ಯಾ.ಅಜಿತ್ ಗುಂಜಾ ಮತ್ತು ನ್ಯಾ. ನಾಗರತ್ನ ಅವರ ವಿಭಾಗೀಯ ಪೀಠ ಸೋಮವಾರ ಈ ಮಹತ್ವದ ತೀರ್ಪು ನೀಡಿದೆ.

2008ರಲ್ಲಿ ರಾಚೇನಹಳ್ಳಿಯಲ್ಲಿ 1.1 ಎಕರೆ ಜಮೀನು ಡಿನೋಟಿಫಿಕೇಶನ್ ಸಂಬಂಧ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಸಿರಾಜಿನ್ ಬಾಷಾ ರಾಜ್ಯಪಾಲ ಭಾರದ್ವಾಜ್ ಅವರ ಅನುಮತಿ ಕೋರಿದ್ದರು. ಅದಕ್ಕೆ ರಾಜ್ಯಪಾಲರೂ ಅನುಮತಿ ನೀಡಿದ್ದರು.

ಆದರೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ರದ್ದುಪಡಿಸಬೇಕೆಂದು ಕೋರಿ ಯಡಿಯೂರಪ್ಪ ಹೈಕೋರ್ಟ್ ಮೊರೆಹೋಗಿದ್ದರು. ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೇರಲು ಎಗರಾಡುತ್ತಿರುವ ಯಡಿಯೂರಪ್ಪಗೆ ಈಗ ಹೈಕೋರ್ಟ್ ತೀರ್ಪಿನಿಂದ ತೀವ್ರ ಹಿನ್ನಡೆಯಾಗಿದೆ. ಇದರ ಹೊರತಾಗಿಯೂ, ಸಿಎಂ ಪಟ್ಟಕ್ಕಾಗಿ ಹೈಕಮಾಂಡ್ ಮೇಲೆ ಪ್ರಭಾವ ಬೀರಲು ಯಡಿಯೂರಪ್ಪ ಇಂದು ಮಧ್ಯಾಹ್ನ ದೆಹಲಿಗೆ ಹೊರಟಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಕಾನೂನು ಇಕ್ಕಟ್ಟಿಗೆ ಸಿಲುಕಿಸುವ ಭರದಲ್ಲಿ ರಾಜ್ಯಪಾಲ ಭಾರದ್ವಾಜ್ ಅವರು ಜೆಡಿಎಸ್ ವಕ್ತಾರ ವೈಎಸ್ ವಿ ದತ್ತಾ ತಂದಿದ್ದ ದೂರಿಗೆ ಕಣ್ಣುಮುಚ್ಚಿಕೊಂಡು ಸಹಿ ಹಾಕಿದ್ದನ್ನು ವಜಾಗೊಳಿಸಿ, ಕಳೆದ ಜನವರಿಯಲ್ಲಿ ಯಡಿಯೂರಪ್ಪಗೆ ಫುಲ್ ರಿಲೀಫ್ ನೀಡಿದ್ದ ಹೈಕೋರ್ಟ್, ಈ ಬಾರಿ ಸಿರಾಜಿನ್ ಬಾಷಾ ಸಲ್ಲಿಸಿದ್ದ ಖಾಸಗಿ ದೂರಿಗೆ ಮಣೆ ಹಾಕಿದೆ.

English summary
Prosecute BS Yeddyurappa in a private case lodged by Sirajin Basha orders high court divisional bench on April 16. Governor Bharadwaj had earlier sanctioned permission to prosecute BSY in the same case. But BSY appealed in HC which HC has rejected today and fixed the date for as June 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X