ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟಾರ್ ಬಕ್ಸ್ ಗೆ ಟಾಂಗ್ ಕೊಡಲು ಸಿದ್ಧಾರ್ಥ ಸಿದ್ಧ

By Mahesh
|
Google Oneindia Kannada News

VG Siddhartha
ಬೆಂಗಳೂರು, ಏ.16: ಅಮೆರಿಕ ಖ್ಯಾತ ಕಾಫಿ ಮಳಿಗೆ ಸ್ಟಾರ್ ಬಕ್ಸ್ ಟಾಟಾ ಸಂಸ್ಥೆ ಜೊತೆ ಜಂಟಿಯಾಗಿ ಸುಮಾರು 400 ಕೋಟಿ ರು ಬಂಡವಾಳ ಹೂಡಿಕೆ ಬಗ್ಗೆ ಪ್ರಕಟಿಸಿತ್ತು. ಈ ಸುದ್ದಿಯ ಬೆನ್ನಲ್ಲೇ ಕನ್ನಡಿಗ ವಿಜಿ ಸಿದ್ದಾರ್ಥ ಅವರು ಎಬಿಸಿಲ್ ಕಂಪನಿ ಕೂಡಾ 400 ಕೋಟಿ ರು ಹೂಡಿಕೆ ಮಾಡುತ್ತಿರುವುದಾಗ್ ಹೇಳಿದ್ದಾರೆ.

ಸ್ಟಾರ್ ಬಕ್ಸ್ ಗೆ ಸಮರ್ಥವಾಗಿ ಪೈಪೋಟಿ ನೀಡಲು ಫೋರ್ಬ್ಸ್ ಪಟ್ಟಿ ಸೇರಿರುವ ಕಾಫಿ ಉದ್ಯಮಿ ವಿಜಿ ಸಿದ್ಧಾರ್ಥ ಅವರ ಎಬಿಸಿಲ್ ಕಂಪನಿಯ ಕಾಫಿಡೇ ಮೂಲಕ ಸಿದ್ಧರಾಗಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 400 ಕೋಟಿ ರು.ಗೂ ಅಧಿಕ ಹೂಡಿಕೆ ಮಾಡಲಾಗುವುದು. ಕೆಫೆ ಕಾಫಿ ಡೇ(CCD)ಮಳಿಗೆಗಳನ್ನು ಸಾಫ್ಟ್ ವೇರ್ ಸಂಸ್ಥೆಗಳ ಆಧಾರಿತ ವಿಶೇಷ ಆರ್ಥಿಕ ವಲಯ (SEZ) ಗಳನ್ನು ಸ್ಥಾಪಿಸು ಉದ್ದೇಶಿಸಲಾಗಿದೆ. ಇದಕ್ಕಾಗಿ 200 ಕೋಟಿ ರು ಮೀಸಲಿಡಲಾಗಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಸ್ಥೆ 91 ಎಕರೆ ಭೂಮಿ ಹೊಂದಿದೆ ಹಾಗೂ ಮಂಗಳೂರಿನಲ್ಲಿ 23 ಎಕರೆ ಭೂ ಪ್ರದೇಶದಲ್ಲಿ ಹೊಸ ಸಿಸಿಡಿ ಮಳಿಗೆಗಳು ತಲೆ ಎತ್ತಲಿದೆ. ಎಚ್ ಪಿ ಎಂಫಾಸಿಸ್, ಮೈಂಡ್ ಟ್ರೀ ಹಾಗೂ ಟೆಕ್ಸಾಸ್ ಇನ್ಸ್ ಸ್ಟ್ರೂಮೆಂಟ್ಸ್ ಮುಂತಾದ ಐಟಿ ಕಂಪನಿಳು ವಿಶೇಷ ಆರ್ಥಿಕ ವಲಯದಲ್ಲಿ ಸ್ಥಾಪಿತವಾಗಿದೆ.

ಸಿದ್ಧಾರ್ಥ ಯೋಜನೆ ಸದಾ ಸಿದ್ಧ : ಸಿಕಲ್ ಲಾಜಿಸ್ಟಿಕ್ಸ್ ಸಂಸ್ಥೆಯನ್ನು ಖರೀದಿಸಿರುವ ಎಬಿಸಿಎಲ್ ತನ್ನ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ. ಸಿದ್ಧಾರ್ಥ ಅವರು ಕೂಡಾ ಸಂಸ್ಥೆಯಲ್ಲಿರುವ ತಮ್ಮ ಶೇ.52ರಷ್ಟು ಪಾಲು ಷೇರುಗಳನ್ನು ಸಾರ್ವಜನಿಕವಾಗಿ ಬಿಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಮೈಂಡ್ ಟ್ರೀ ಕಂಪನಿಯ ಸ್ಥಾಪಕ ಹೂಡಿಕೆದಾರರಾಗಿರುವ ಸಿದ್ಧಾರ್ಥ, ಶೇ.18ರಷ್ಟು ಪಾಲು ಹೊಂದಿದ್ದಾರೆ. ಇದನ್ನು ಗರಿಷ್ಠ ಶೇ.26ಕ್ಕೆ ಏರಿಸಿಕೊಳ್ಳುವ ಸಾಧ್ಯತೆಯಿದೆ. ಕೋಟಕ್ ಮಹೀಂದ್ರಾ ಸೇರಿದಂತೆ ಇತರೆ ಬ್ಯಾಂಕ್ ಗಳಿಂದ 200 ಕೋಟಿ ರು ಸಾಲ ಪಡೆದಿರುವ ಸಿದ್ದಾರ್ಥ, ಎಲ್ಲವನ್ನೂ ಕಾಫಿಡೇ ಮೇಲೆ ಸುರಿಯುವ ಸಾಧ್ಯತೆಯಿದೆ.

ಜೊತೆಗೆ ತಮ್ಮ Way2Wealth(ರೀಟೈಲ್ ಬ್ರೊಕರೇಜ್ ಬಿಸಿನೆಸ್) ಈ ವರ್ಷ ಮತ್ತೊಮ್ಮೆ pan-india ಅನ್ನು 300 ಕೋಟಿ ನೀಡಿ ಖರೀದಿಲು ಯತ್ನಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಒಟ್ಟಾರೆ 200 ರಿಂದ 300 ಹೊಸ ಕೆಫೆಗಳು ತಲೆ ಎತ್ತಲಿದೆ. 1,200 ಸಿಸಿಡಿಗಳು ಈಗಷ್ಟೇ ಮಾರುಕಟ್ಟೆಗೆ ಅಂಬೆಗಾಲಿಡಿತ್ತಿರುವ ಅಮೆರಿಕದ ದೈತ್ಯ ಶಿಶು ಸ್ಟಾರ್ ಬಕ್ಸ್ ಮೇಲೆ ಮುಗಿ ಬೀಳಲಿದೆ.

English summary
VG Siddhartha owned the Amalgamated Bean Co that runs the Café Coffee Day chain of coffee shops announces Rs 400 Cr expansion plans specially in SEZ consisting software firms after the competitor Starbucks JV with Tata Global Beverages announced investment plans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X