ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಡಿಕೆ ದ್ವಿಪತ್ನಿತ್ವ ಕೇಸಿನಲ್ಲಿ ಕೋರ್ಟ್ ಹೇಳಿದ್ದೇನು?

By Srinath
|
Google Oneindia Kannada News

radhika-kumaraswamy-marriage-hc-observations
ಬೆಂಗಳೂರು, ಏ.14: ಎಚ್ಡಿಕೆ ದ್ವಿಪತ್ನಿತ್ವ ಕೇಸಿನಲ್ಲಿ ಸತ್ಯ ಏನೆಂಬುದು ತಿಳಿದಿದ್ದರೂ ನ್ಯಾಯಾಲಯಕ್ಕೆ ಅಗತ್ಯವಾಗಿ ಬೇಕಾಗಿದ್ದುದು ಸಾಕ್ಷ್ಯ. ಹಾಗಾಗಿ, ನ್ಯಾಯಪೀಠವು ದಾಖಲೆಗಳನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿಕೊಡುವಂತೆ ಅರ್ಜಿದಾರ ಶಶಿಧರ ಬೆಳಗುಂಬಗೆ ಸೂಚಿಸಿತು. ಅದನ್ನೂ ಅರ್ಜಿದಾರರ ಪರ ವಕೀಲರು ಮಾಡದೇ ಹೋದರು. ಇದಕ್ಕೆ CJ ತಾನೆ ಏನು ಮಾಡಿಯಾರು? ಸುಮ್ಮನೆ... ಅರ್ಜಿಯನ್ನು ವಜಾಗೊಳಿಸಿದರು. ಆದರೆ ಅರ್ಜಿದಾರರಿಗೆ ಛೀಮಾರಿ ಹಾಕುವುದನ್ನು ಮರೆಯಲಿಲ್ಲ. ಇಚ್ಛಾಶಕ್ತಿಯಿಲ್ಲದ ಸಾರ್ವಜನಿಕ ಅರ್ಜಿಗಳ ಕುರಿತು ನ್ಯಾಯಪೀಠ ತೀವ್ರ ಸಮಾಧಾನ ವ್ಯಕ್ತಪಡಿಸಿತು.

ಕುತೂಹಲದ ಸಂಗತಿಯೆಂದರೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಕೋರ್ಟಿನಲ್ಲಿ ಕೇಸೊಂದು ದಾಖಲಾಗಿದೆ. ಪರೋಕ್ಷವಾಗಿ ಅದು ಈ ಕೇಸಿಗೆ ಸಂಬಂಧಪಟ್ಟಿದ್ದಾಗಿದೆ. ಒಂದೊಮ್ಮೆ ಕೋರ್ಟು (ನ್ಯಾ. ಸುಧೀಂದ್ರ ರಾವ್) ಆ ಕೇಸನ್ನು ಎತ್ತಿಹಿಡಿದರೆ ಅದು ಕುಮಾರಸ್ವಾಮಿ ಬುಡಕ್ಕೆ ನೀರುತರುವುದರಲ್ಲಿ ಅನುಮಾನವೇ ಇಲ್ಲ. ಅವರು ಭಾರಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಏನಪಾ ಅಂದರೆ ... 'ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರ ಆಸ್ತಿ ತೂಕ ಇತ್ತೀಚೆಗೆ ಹೆಚ್ಚಾಗಿದೆ. ಕುಮಾರಸ್ವಾಮಿ ಮತ್ತು ನಟಿ ರಾಧಿಕಾ ತಮ್ಮ ನುಡವಣ ವಿವಾಹ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಂಡಿರುವುದರಿಂದ ಅವರುಗಳ ಆಸ್ತಿ ತನಿಖೆಯಾಗಲಿ' ಎಂಬುದು ಟಿಜೆ ಅಬ್ರಹಾಂ ಎಂಬುವವರು ಲೋಕಾಯುಕ್ತ ಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿಯ ಸಾರ. ಅದೊಮ್ಮೆ ಕುಮಾರಸ್ವಾಮಿ ನ್ಯಾಯಾಲಯಕ್ಕೆ ತಲೆಬಾಗಿ ನಟಿ ರಾಧಿಕಾ ಆಸ್ತಿ ವಿವರ ನೀಡಿದರೆ ಮುಗಿಯಿತು ಕುಮಾರ ಕಥೆ...

ಅಷ್ಟಕ್ಕೂ, ಐಪಿಸಿ ಸೆಕ್ಷನ್ 494ರ ಪ್ರಕಾರ ಕಾನೂನುಬಾಹಿರವಾಗಿ ಎರಡನೇ ಮದುವೆಯಾಗುವುದು ಶಿಕ್ಷಾರ್ಹ ಅಪರಾಧ. ಆದರೆ ಎಚ್ ಡಿ ಕುಮಾರಸ್ವಾಮಿ ಅವರು ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಕಾನೂನುಬಾಹಿರವಾಗಿ ನಟಿ ರಾಧಿಕಾರನ್ನು ಮದುವೆಯಾಗಿದ್ದಾರೆ ಎಂಬುದು ಕುಮಾರಸ್ವಾಮಿ ವಿರುದ್ಧ ಲೋಕಕ್ಕೆ ತಿಳಿದಿರುವ ಆರೋಪ. ಆ ದಾಂಪತ್ಯ ಸಾಬೀತುಪಡಿಸಲು ಶಮಿಕಾ ಎಂಬ ಮುದ್ದಾದ ಮಗುವೇ ಸಾಕ್ಷಿ. ಇನ್ನೇನು ಬೇಕು, ಕೋರ್ಟಿಗೆ?

English summary
Karnataka High Court recently rejected the case against JDS state president HD Kumaraswamy's second marriage with actress Radhika Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X