ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚಾರಣೆ ನಡೆದಿದೆ, ಬಿಎಸ್ ವೈಗೆ ಭೀತಿ ಶುರುವಾಗಿದೆ

By Mahesh
|
Google Oneindia Kannada News

BS Yeddyurappa
ನವದೆಹಲಿ, ಏ.13: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಕುರಿತ ಸಿಇಸಿ ಹಾಗೂ ಅರಣ್ಯ ಇಲಾಖೆ ವರದಿ ಆಧಾರಿಸಿ ಸುಪ್ರೀಂಕೋರ್ಟ್ ಶುಕ್ರವಾರ(ಏ.13) ತನಿಖೆ ನಡೆಸಿದೆ.

ಸಿಇಸಿ ತಂಡ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಜ್ಯದಲ್ಲಿ ಗಣಿ ಸಮೀಕ್ಷೆ ನಡೆಸಿ ನೀಡಿರುವ ವರದಿ ಸಲ್ಲಿಸಿದೆ. ವರದಿಯಲ್ಲಿ ಕರ್ನಾಟಕದ 'ಎ' ಕೆಟಗೆರಿಯ 49 ಗಣಿ ಸಂಸ್ಥೆಗಳ ಲೈಸನ್ ರದ್ದು ಮಾಡುವಂತೆ ಸೂಚಿಸಾಗಿದೆ. ಇದಕ್ಕೆ ಸುಪ್ರೀಂಕೋರ್ಟ್ ಸಮ್ಮತಿಸಿದೆ.

ಗಣಿ ಕಂಪನಿಗಳ ವಿರುದ್ಧ ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯಕ್ಕೆ ಮಾರಕವಾಗುವ ಸಾಧ್ಯತೆಯಿದೆ.

ಇದಲ್ಲದೆ, ಯಡಿಯೂರಪ್ಪನವರ ಕುಟುಂಬದ ಸದಸ್ಯರು ಅಕ್ರಮ ಗಣಿಗಾರಿಕೆ ನಡೆಸುವ ಉದ್ಯಮಿಗಳಿಂದ ಲಂಚ ಪಡೆದಿರುವುದರ ಬಗ್ಗೆ 314 ಪುಟಗಳ ವರದಿಯನ್ನು ಸಲ್ಲಿಸಿರುವ ಎಸ್ ಆರ್ ಹಿರೇಮಠ್ ಅವರ ಎನ್‌ಸಿಎನ್‌ಪಿಆರ್ ಸಂಘಟನೆ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಮನವಿ ಸಲ್ಲಿಸಿದೆ.

ಎನ್ ಸಿಎನ್ ಪಿಆರ್ ಪರ ವಕೀಲ ಪ್ರಶಾಂತ್ ಭೂಷಣ್ ಸಮರ್ಥವಾಗಿ ವಾದ ಮಂಡಿಸಿದ್ದಾರೆ. ಯಡಿಯೂರಪ್ಪ ಪರ ಸೊಲೊ ಸೊರಾಬ್ಜಿ ಅವರು ವಾದ ಮಂಡಿಸುತ್ತಿದ್ದಾರೆ.

ಯಡಿಯೂರಪ್ಪ ಅವರಿಗೆ ಹೈಕೋರ್ಟ್ ಕ್ಲೀನ್ ಚಿಟ್ ನೀಡಿದೆ. ಪ್ರೇರಣಾ ಟ್ರಸ್ಟ್ ಹಣ ಪಡೆದಿದ್ದು ನಿಜವಾದರೂ ಅದು ಲಂಚವಲ್ಲ ಎಂದು ಸೊರಾಬ್ಜಿ ವಾದಿಸಿದ್ದಾರೆ. ಸ್ಪೆಷಲ್ ಲೀವ್ ಪಿಟಿಷನ್ ಬಂದ ನಂತರ ನೋಡೋಣ ಎಂದು ಜಡ್ಜ್ ಹೇಳಿದ್ದಾರೆ. ವಿಚಾರಣೆ ಜಾರಿಯಲ್ಲಿದೆ.

English summary
Yeddyurappa's advocate Soli Sorabji made plea to SC today(Apr.13) that CEC should not be allowed to investigate as HC has given clean chit to Yeddyurappa in Illegal Mining Case. SC is yet to give its order based on CEC report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X