ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಮನೆಗೆಲಸದವರನ್ನು ನೇಮಿಸುವ ಮುನ್ನ ಯೋಚಿಸಿ!

By Prasad
|
Google Oneindia Kannada News

Topless maid service, Only in Texas
ಟೆಕ್ಸಾಸ್, ಏ. 13 : ನೆಲದ ಮೇಲೆ ಒಂದು ಕಸಕಡ್ಡಿಯೂ ಇರದಂತೆ, ವಸ್ತುಗಳ ಮೇಲೆ ಒಂದೇ ಒಂದು ಧೂಳಿನ ಕಣವೂ ಇರದಂತೆ ಮನೆ ಲಕಲಕ ಅನ್ನುತ್ತಿರಬೇಕೆ? ಮನೆ ಎಲ್ಲರೂ ಮೆಚ್ಚುವಂತೆ ಒಪ್ಪಓರಣವಾಗಿರಬೇಕೆ? ಮೂವರು ಮನೆಗೆಲಸದವರು ಸದಾ ಸಿದ್ಧರಿದ್ದಾರೆ. ಅವರು ಗಂಟೆಗೆ ಚಾರ್ಜ್ ಮಾಡುವುದು ಕೇವಲ 100 ಡಾಲರ್ ಮಾತ್ರ!

ಹಿಂದೆ ಮುಂದೆ ನೋಡದೆ, ವಿಷಯವನ್ನು ಸರಿಯಾಗಿ ತಿಳಿಯದೆ, ಮನೆಗೆಲಸದವಳು ಇಲ್ಲದೆ ತುಂಬಾ ಕಷ್ಟವಾಗಿಬಿಟ್ಟಿದೆ, ನಮ್ಮ ಮನೆಗೂ ಕೆಲಸದವಳು ಬೇಕ್ರೀ ಅಂತ ನಿರ್ಧಾರ ತೆಗೆದುಕೊಂಡುಬಿಡಬೇಡಿ. ಏಕೆಂದರೆ, ಈ ಮನೆಕೆಲಸದವರು ಕೆಲಸ ಮಾಡುವುದು ಕನಿಷ್ಠ ಬಟ್ಟೆಯಲ್ಲಿ ಅಥವಾ ಏನೂ ಇಲ್ಲದೆಯೂ. ವಿಷಯ ಏನೆಂದು ಈಗ ಮನದಟ್ಟಾಯಿತಲ್ಲ?

ಇಂಥ 'ಫ್ಯಾಂಟಸಿ ಮೇಡ್ ಸರ್ವೀಸ್' ಅನ್ನು 26 ವರ್ಷದ ಮಹಿಳೆ ಮೆಲಿಸ್ಸಾ ಬೊರೆಟ್ ಎಂಬುವವಳು ಅಮೆರಿಕಾದ ಟೆಕ್ಸಾಸ್ನಲ್ಲಿ ಶುರುಮಾಡಿದ್ದಾಳೆ. ಇಷ್ಟಪಟ್ಟವರು ಇವರಿಂದ ಸೇವೆ ಪಡೆಯಬಹುದು. ಇಷ್ಟಕಷ್ಟಗಳೇನೇ ಇರಲಿ ಈ ಸೇವೆ ಸಂಪ್ರದಾಯವಾದಿ ಸಮಾಜದ ಮತ್ತು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ. ಅನುಮತಿಯಿಲ್ಲದೆ ಈ ಸೇವೆ ಎಲ್ಲಿಯೂ ನೀಡುವಂತಿಲ್ಲ ಎಂದು ಎಚ್ಚರಿಕೆ ಪೊಲೀಸರು ನೀಡಿದ್ದಾರೆ.

ಲುಬ್ಬಕ್ ಪೊಲೀಸರೂ ಒಪ್ಪಿದರು, ನಿಮಗೂ ಇಷ್ಟವಾಯಿತು ಎಂದಿಟ್ಟುಕೊಳ್ಳಿ. ಬೆತ್ತಲೆ ಸೇವೆ ಪಡೆಯುವ ಮುನ್ನ ಕೆಲ ನಿಬಂಧನೆಗಳಿವೆ ಅವನ್ನೂ ಓದಿಬಿಡಿ. ಮನೆಗೆಲಸವನ್ನು ಮೆಚ್ಚಿ ಅವರಿಗೆ ಟಿಪ್ಸ್ ನೀಡಿದರೂ ಅವರನ್ನು ಮುಟ್ಟುವಂತಿಲ್ಲ. ಅಪ್ಪಿತಪ್ಪಿ ಮುಟ್ಟಲು ಹೋದರೆ ತಕ್ಷಣವೇ ಜಾಗ ಖಾಲಿ ಮಾಡುತ್ತಾರೆ ಲೋಕಲ್ ಬೂಬುಗಳು.

ಮನೆಗೆಲಸದ ಹೊರತಾಗಿ ಮತ್ತಾವ ಸೇವೆಗೂ ಅವರನ್ನು ಕರೆಯುವಂತಿಲ್ಲ, ಬೆದರಿಸಿ ಸೇವೆ ಪಡೆಯುವಂತಿಲ್ಲ. ಹಾಗೇನಾದರೂ ಆದರೆ, ಅರ್ಧಕ್ಕೆ ಕೆಲಸ ಬಿಟ್ಟು ಹೊರಟರೂ ಹಣ ಹಿಂದಿರುಗಿಸುವುದಿಲ್ಲ ಮತ್ತು ಮತ್ತೆಂದೂ ಅಂಥ ಸೇವೆ ಸಿಗುವುದಿಲ್ಲ. ಮನೆಗೆಲಸದವರು ಬೆತ್ತಲಾಗಿ ಕೆಲಸ ಮಾಡಿದರೂ ಅವರೆದಿರು ಸೇವೆ ಪಡೆಯುವವರು ನಗ್ನರಾಗುವಂತಿಲ್ಲ. ಹದಿನೆಂಟು ವರ್ಷಗಳಿಂದ ಕೆಳಗಿನ ಸದಸ್ಯರಿರುವ ಮನೆಯಲ್ಲಿ ಬೂಬುಗಳು ಟಾಪ್‌ಲೆಸ್ ಆಗಿ ಕೆಲಸ ಮಾಡುವುದಿಲ್ಲ. ವಿಚಾರ ಮಾಡಿ.

English summary
Are you looking for maid for cleaning your home? 26-year-old lady in America has started Fantasy Maid Services. Think twice before taking this service. Because maids will work only topless or without any cloths, if you wish. Would you like to avail this service?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X