ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10,000 ಉದ್ಯೋಗ ಕಡಿತಕ್ಕೆ ಮುಂದಾದ ಸೋನಿ

By Mahesh
|
Google Oneindia Kannada News

Sony to cut 10,000 Jobs
ನವದೆಹಲಿ, ಏ.13: ವಿಶ್ವದ ಅತಿದೊಡ್ಡ ಟಿವಿ ಉತ್ಪಾದನಾ ಸಂಸ್ಥೆ ಸೋನಿ, ತನ್ನ ಸಂಸ್ಥೆಯಿಂದ ಸಾವಿರಾರು ಉದ್ಯೋಗಿಗಳನ್ನು ಹೊರದಬ್ಬಲು ಚಿಂತಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 10,000 ಉದ್ಯೋಗಿಗಳನ್ನು ತೆಗೆದು ಹಾಕಲಾಗುವುದು ಎಂದು ಸೋನಿ ಹೇಳಿದೆ.

ಜಾಗತಿಕ ಮಟ್ಟದಲ್ಲಿ ಶೇ.6 ರಷ್ಟು ಮಾನವ ಸಂಪನ್ಮೂಲವನ್ನು ಕಡಿತಗೊಳಿಸಿ, ಸಂಸ್ಥೆಯನ್ನು ಪುನರ್ ರೂಪಿಸುವ ಕಾರ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಟಿವಿ ಉತ್ಪಾದನೆಯಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಹಾಗೂ ಎಲ್ ಜಿ ಜೊತೆ ಸ್ಪರ್ಧೆಯಲ್ಲಿ ಸೋತಿರುವ ಸೋನಿ, ಆಪಲ್ ಜೊತೆ ಆಡಿಯೋ ಗೇರ್ ಹಾಗೂ ಫೋನ್ ಕ್ಶೇತ್ರದಲ್ಲೂ ಪೈಪೋಟಿ ನೀಡಲಾಗದೆ ಸೋತಿದೆ.

ವಾರ್ಷಿಕವಾಗಿ 6.4 ಬಿಲಿಯನ್ ಡಾಲರ್ ನಷ್ಟ ಹಾಗೂ ಶೇ 40 ರಷ್ಟು ಷೇರುಗಳ ಕುಸಿತದಿಂದ ಸೋನಿ ಕಂಗೆಟ್ಟಿದೆ. ಈಗ ಸೋನಿ ಸಂಸ್ಥ ಡಿಜಿಟಲ್ ಇಮೇಜಿಂಗ್, ಗೇಮ್ಸ್ ಹಾಗೂ ಮೊಬೈಲ್ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ಹರಿಸಲಿದೆ.

2015ರೊಳಗೆ 10.5 ಬಿಲಿಯನ್ ಡಾಲರ್ ಲಾಭದ ನಿರೀಕ್ಷೆ ಹೊಂದಿದೆ. ವಾರ್ಷಿಕವಾಗಿ ಸುಮಾರು 20 ಮಿಲಿಯನ್ ಟವಿ ಸೆಟ್ ಮಾರಾಟ ಮಾಡುವ ಸೋನಿ ಲಾಭ ಸಿಗದೆ ಸಂಸ್ಥೆ ನಡೆಸುವುದು ದುಸ್ತರವಾಗಿದೆ.

ಮತ್ತೊಂದೆಡೆ ಪ್ರತಿಸ್ಪರ್ಧಿ ಜಪಾನಿನ ಶಾರ್ಪ್ ಸಂಸ್ಥೆ ಕೂಡಾ ವಾರ್ಷಿಕವಾಗಿ 4.7 ಬಿಲಿಯನ್ ನಷ್ಟ ಅನುಭವಿಸಿದೆ.

English summary
Sony to cut 10,000 jobs or otherwise 6% of the global workforce will lose jobs in the next 12 months. Sony is struggling to compete with South Korea's Samsung and LG.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X