ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಫ್ಟ್ ವೇರ್ ಮೇಲು, ವರದಿಗಾರಿಕೆ ಕೀಳು ವೃತ್ತಿ

By Prasad
|
Google Oneindia Kannada News

Software engineer job best
ನ್ಯೂಯಾರ್ಕ್, ಏ. 12 : ಅತ್ಯುತ್ತಮ ವೃತ್ತಿ ಯಾವುದು? ಅವರವರಿಗೆ ಅವರು ಕೈಗೊಂಡಿರುವ ವೃತ್ತಿಯೇ ಅತ್ಯುತ್ತಮ ಎಂದು ಅನಿಸುವುದು ಸಹಜ. ಆದರೆ, ಅಮೆರಿಕ ನಡೆಸಿರುವ ಒಂದು ಸಮೀಕ್ಷೆಯ ಪ್ರಕಾರ, ವರದಿಗಾರಿಕೆ ಅತ್ಯಂತ ಕೀಳುಮಟ್ಟದ ವೃತ್ತಿಯ ಸಾಲಿನಲ್ಲಿದ್ದರೆ, ಸಾಫ್ಟ್ ವೇರ್ ಇಂಜಿನಿಯರ್ ಅತ್ಯುತ್ತಮ ವೃತ್ತಿ ಎಂಬ ತೀರ್ಮಾನಕ್ಕೆ ಬರಲಾಗಿದೆ.

ಆ ವೃತ್ತಿ ನೀಡುವ ಸವಲತ್ತು, ಕೆಲಸದ ವಾತಾರವಣ, ಅದು ತರುವ ಆದಾಯ, ಒತ್ತಡಗಳನ್ನು ಗಮನದಲ್ಲಿರಿಸಿಕೊಂಡು ಅಮೆರಿಕ ಮೂಲದ ಕರಿಯರ್‌ಕಾಸ್ಟ್ ಎಂಬ ಸಂಸ್ಥೆ ಸಾಫ್ಟ್ ವೇರ್ ಇಂಜಿನಿಯರ್ ವೃತ್ತಿಯೇ 2012ರ ಸಾಲಿನ ಅತ್ಯುತ್ತಮವಾದದ್ದು ಎಂದು ಹೇಳಿದೆ. ಪತ್ರಕರ್ತನ ಕೆಲಸವನ್ನು ಕಸಾಯಿ, ಹೋಟೆಲ್ ಮಾಣಿ, ಪಾತ್ರೆ ತೊಳೆಯುವವರ ಜೊತೆಗೆ ಹೋಲಿಸಲಾಗಿದೆ.

ಕೀಳು ಮತ್ತು ಅತ್ಯುತ್ತಮ ವೃತ್ತಿಯ ಪಟ್ಟ ಅಮೆರಿಕದಲ್ಲಿರುವ ವೃತ್ತಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಸರಕಾರಿ ಸಂಸ್ಥೆಗಳು ಮತ್ತು ಕಾರ್ಮಿಕರ ಅಂಕಿಸಂಖ್ಯೆ ಸಂಸ್ಥೆ ಒದಗಿಸಿದ ಮಾಹಿತಿಯ ಆಧಾರದ ಮೇಲೆ ಈ ತೀರ್ಮಾನಕ್ಕೆ ಬರಲಾಗಿದೆ. ಜಗತ್ತಿನ ಆಗುಹೋಗುಗಳನ್ನು ವರದಿಗಾರಿಕೆ ಮಾಡುವ ಮುಖಾಂತರ ಜಗತ್ತಿಗೆ ತಿಳಿಸುವ ಕಾಯಕ ಮಾಡುತ್ತಿರುವ ವರದಿಗಾರನ ವೃತ್ತಿ ಅತ್ಯಂತ ಕೀಳು ಎಂದು ಹೇಳಲಾಗಿದೆ.

ಡೈರಿ ನಡೆಸುವ ರೈತ, ವೈಟರ್, ಸೈನಿಕ, ಮೀಡರ್ ರೀಡರ್, ಪಾತ್ರೆ ತೊಳೆಯುವವರು, ಕಸಾಯಿಗಳನ್ನು ಕೀಳುಮಟ್ಟದ ಉದ್ಯೋಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿ ಉಂಟುಮಾಡುತ್ತಿರುವ ಡಿಜಿಟಲ್ ಜಗತ್ತಿನ ಮುಂದೆ ಸಾಂಪ್ರದಾಯಿಕ ಪ್ರಿಂಟ್ ಪತ್ರಿಕೋದ್ಯಮ ಹೊಳಪನ್ನು ಕಳೆದುಕೊಳ್ಳುತ್ತಿದೆ ಎಂದು ಸಮೀಕ್ಷೆ ನಡೆಸಿದ ಸಂಸ್ಥೆ ಅಭಿಪ್ರಾಯ ತಿಳಿಸಿದೆ.

ಉದಾತ್ತ ವೃತ್ತಿ ಎಂದು ತಿಳಿಯಲಾಗಿದ್ದ ಪತ್ರಿಕೋದ್ಯಮ ಕ್ರಮೇಣ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಕೆಲಸದ ಒತ್ತಡ, ಕಡಿಮೆ ಸಂಬಳ, ನಿರುದ್ಯೋಗ ಸಮಸ್ಯೆ ಆ ವೃತ್ತಿಯನ್ನು ಜನ ಕಡೆಗಣಿಸುವಂತೆ ಮಾಡುತ್ತಿದೆ. ಆದರೆ, ಸಾಫ್ಟ್ ವೇರ್ ಇಂಜಿನಿಯರುಗಳ ವೃತ್ತಿ ಕಡಿಮೆ ದೈಹಿಕ ಹಾಗೂ ಮಾನಸಿಕ ಶ್ರಮ ಮತ್ತು ಹೆಚ್ಚಿನ ಗಳಿಕೆಯಿಂದಾಗಿ ಒಲವನ್ನು ಗಳಿಸುತ್ತ ಸಾಗಿದೆ.

English summary
A US based consultancy CareerCast has named Software engineer job is the best and reporters work is the worst. It has taken work environment, stress, income, popularity, opportunities into consideration while coming to this conclusion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X