ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಲ್ ಮಾರ್ಟ್ ಗೆ 5 ಸಾವಿರ ಕೋಟಿ ಕನಸು

By Mahesh
|
Google Oneindia Kannada News

Walmart goes Online India
ಬೆಂಗಳೂರು, ಏ.12: ಸೇವ್ ಮನಿ, ಲಿವ್ ಬೆಟರ್ ಎಂದು ನಿಧಾನವಾಗಿ ಭಾರತದ ಚಿಲ್ಲರೆ ಮಾರುಕಟ್ಟೆ ಕ್ಷೇತ್ರಕ್ಕೆ ಕಾಲಿಡುತ್ತಿರುವ ವಾಲ್ಮರ್ಟ್ ಸಂಸ್ಥೆ ಈಗ ಆನ್ ಲೈನ್ ಮಾರುಕಟ್ಟೆಗೆ ಲಗ್ಗೆ ಇಡಲು ಯೋಜಿಸಿದೆ. ಭಾರತದ ಪ್ರಮುಖ ಇ ಕಾಮರ್ಸ್ ಕಂಪನಿಗಳ ಜೊತೆ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ತನ್ನ ಕಾರ್ಯ ಯೋಜನೆ ಬಗ್ಗೆ ಪ್ರಕಟಿಸಲಿದೆ.

ಭಾರ್ತಿ ಸಂಸ್ಥೆ ಜೊತೆ ಕೈ ಜೋಡಿಸಿರುವ ವಾಲ್ಮರ್ಟ್ ಸಂಸ್ಥೆ ಭಾರತದಿಂದ ಸುಮಾರು 5,000 ಕೋಟಿ ಪ್ರತಿ ವರ್ಷ ಲಾಭ ಗಳಿಸುವ ಯೋಜನೆ ಹಾಕಿಕೊಂಡಿದೆ.

ಸದ್ಯ ದೆಹಲಿ ಮುಂತಾದೆಡೆ ಇರುವ ವಾಲ್ ಮಾರ್ಟ್ ಕ್ಯಾಶ್ ಅಂಡ್ ಕ್ಯಾರಿ ಮಳಿಗೆಗಳ ಮಾದರಿಯಲ್ಲಿ ಭಾರತದಲ್ಲಿ 17 ಕಡೆ ಹೊಸ ಮಳಿಗೆ ಆರಂಭಿಸಲಾಗುತ್ತಿದೆ.

ಬಹು ಬ್ರ್ಯಾಂಡ್ ವಿಭಾಗದಲ್ಲಿ ಎಫ್ ಡಿಐ ಗೊಂದಲ ನಿವಾರಣೆಯಾದರೆ ವಾಲ್ಮರ್ಟ್ ಗೆ ಲಾಭವೋ ಲಾಭ.

ಅನ್ ಲೈನ್ ಮಾರುಕಟ್ಟೆ: ಸುಮಾರು 400 ಬಿಲಿಯನ್ ಆದಾಯ ಹೊಂದಿರುವ ವಾಲ್ಮರ್ಟ್ ಇ ಕಾಮರ್ಸ್ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಲು ಯೋಜಿಸಿದೆ. ಅಮೆಜಾನ್ ಮುಂತಾದ ಆನ್ ಲೈನ್ ಕಂಪನಿಗಳಿಗೆ ಸೆಡ್ಡು ಹೊಡೆಯಲು ಚೀನಾ ಸೇರಿದಂತೆ ವಿವಿಧೆಡೆ ಇರುವ ಪ್ರಮುಖ ಇ ಕಾಮರ್ಸ್ ಕಂಪನಿಗಳಿಗೆ ಗಾಳ ಹಾಕುತ್ತಿದೆ.

ಆದರೆ, ಭಾರತದಲ್ಲಿ ರೀಟೈಲ್ ಕ್ಷೇತ್ರದ ಅಂದಾಜು ಆದಾಯ 500 ಬಿಲಿಯನ್ ಡಾಲರ್ (25 ಲಕ್ಷ ಕೋಟಿ ರು) ಇದ್ದರೆ, ಅದರಲ್ಲಿ ಶೇ 0.1 ರಷ್ಟು ಮಾತ್ರ ಆನ್ ಲೈನ್ ರೀಟೈಲ್ ಮೂಲಕ ವ್ಯವಹಾರ ನಡೆದಿರುತ್ತದೆ. ವಾಲ್ಮರ್ಟ್ ಈ ಚಿತ್ರಣವನ್ನು ಬದಲಿಸುವ ಸಂಕಲ್ಪ ಹೊಂದಿದೆ.

English summary
Retail giant Walmart is having talks with e-commerce companies in India to explore online market. With global revenue of $400 billion. The Union cabinet had cleared FDI in multi-brand retail. Walmart bharti aims around $1 billion (about Rs 5,000 crore) in annual revenue from its India operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X