ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2012ರ ಮಹಾಪ್ರಳಯ ಕಾಲ ಸಮೀಪಿಸಿದೆಯೇ!?

By Srinath
|
Google Oneindia Kannada News

omg-is-it-doomsday-2012-horrified-talks
ಬೆಂಗಳೂರು, ಏ.11: ಇಂಡೋನೇಷ್ಯಾದಲ್ಲಿ 8.7 ಪ್ರಮಾಣದ ಭೂಕಂಪ ಸಂಭವಿಸಿದೆ. ಸದ್ಯಕ್ಕೆ ಯಾವುದೇ ಅನಾಹುತವಾಗಿಲ್ಲ. ಆದರೆ ಯಾವಾಗ, ಏನೋ ಎಂಬ ಭಯದ ವಾತಾವರಣ. ಜನ ತಲೆಗೊಂದರಂತೆ ಭೂಕಂಪ, ಸುನಾಮಿ, ಮಹಾಪ್ರಳಯ ಸಮೀಪಿಸಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮಹಾಪ್ರಳಯ ಡಿಸೆಂಬರ್ 21ಕ್ಕೇ ಆಗಬೇಕು ಅಂತೇನೂ ಇಲ್ಲ. ಆರು ತಿಂಗಳು ಇಂಚುಮುಂಚು ಆಗಬಹುದು ಎಂದೂ ತರ್ಕಿಸುತ್ತಿದ್ದಾರೆ.

2012 ಡಿಸೆಂಬರ್ 21ಕ್ಕೆ ಮಹಾಪ್ರಳಯ ಸಂಭವಿಸುತ್ತದೆ ಎಂದು ಆರು ತಿಂಗಳ ಹಿಂದೆ ಇಂಟರ್ನೆಟ್‌ ಸೇರಿದಂತೆ ಎಲ್ಲ ಮಾಧ್ಯಮಗಳಲ್ಲೂ ಭೀತಿಯ ವಾತಾವರಣ ಸೃಷ್ಟಿಸಲಾಗಿತ್ತು. ಆದರೆ 2012ಕ್ಕೆ ಪ್ರಳಯನೂ ಇಲ್ಲ ಎಂಥದ್ದೂ ಇಲ್ಲ ಎಂದು ವಿಜ್ಞಾನಿಗಳು ಮತ್ತೊಮ್ಮೆ ಅಭಯ ನೀಡಿದ್ದಾರೆ. ಆದರೂ...

ಮಹಾಪ್ರಳಯ ಸಂಭವಿಸುವ ಕಾಲ ಬಂದೇ ಬಿಟ್ಟಿದೆ. ಇಡೀ ಭೂಮಂಡಲ ನಾಶವಾಗಲಿದೆ ಎಂಬ ಸಮೂಹ ಸನ್ನಿ ಎಲ್ಲೆಡೆ ವ್ಯಾಪಿಸತೊಡಗಿದೆ. 2012ರಲ್ಲಿ ಸೂರ್ಯನಿಂದ ಹೊರಹೊಮ್ಮುವ ದೈತ್ಯ ಸೌರ ಜ್ವಾಲೆಗಳು ಭೂಮಿಗೆ ಸಂಚಕಾರ ತರಲಿದೆ ಎಂಬ ಆತಂಕದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ, ದೈತ್ಯ ಸೌರ ಜ್ವಾಲೆಗಳು ಸೂರ್ಯನಿಂದ ಹೊರಹೊಮ್ಮುವುದು ಖಚಿತ ಎಂದಿರುವ ನಾಸಾ, ಅವು ಭೂಮಿಯನ್ನು ತಲುಪುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದ ಭೂಮಿಯ ಮೇಲೆ ಯಾವುದೇ ಪ್ರಳಯ ಸಂಭವಿಸಲಾರದು ಎಂದು ಹೇಳಿದೆ. ದೈತ್ಯ ಸೌರ ಜ್ವಾಲೆಗಳಿಂದ ಉಂಟಾಗುವ ವಿದ್ಯುತ್ ಕಾಂತೀಯ ವಿಕರಣದಿಂದ ನಮ್ಮ ರೇಡಿಯೊ ತರಂಗಗಳಿಗೆ ಹಾಗೂ ಸಂಹವನ ವ್ಯವಸ್ಥೆಯ ಉಪಗ್ರಹಗಳ ಕಾರ್ಯಾಚರಣೆಗೆ ತೊಂದರೆ ಮಾಡಬಹುದು.

ಅದೂ ಈ ದೈತ್ಯ ಸ್ವಾರಜ್ವಾಲೆಗಳು ಹೊರಹೊಮ್ಮುವುದು 2012ರಲ್ಲಿ ಅಲ್ಲ. ಬದಲಿಗೆ 2013ರ ಕೊನೆ ಅಥವಾ 2014ನೇ ವರ್ಷದ ಆರಂಭದಲ್ಲಿ. ಪ್ರತಿ 11 ವರ್ಷಗಳಿಗೊಮ್ಮೆ ಸೌರಜ್ವಾಲೆಗಳು ದೈತ್ಯ ಗಾತ್ರ ಪಡೆಯುವುದು ಸಹಜ ಸಂಗತಿ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ

English summary
There is widespread internet rumor that the world is on the verge of end due to some astronomical event as predicted 6 months ago. OMG is it Doomsday December 21, 2012 horrified people talking about it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X