ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಕ್ ಮಹೀಂದ್ರದಲ್ಲಿ 10 ಸಾವಿರ ಉದ್ಯೋಗಾವಕಾಶ

By Mahesh
|
Google Oneindia Kannada News

Tech Mahindra Hiring
ಬೆಂಗಳೂರು, ಏ.11: ಟೆಕ್ ಮಹೀಂದ್ರಾ ಹಾಗೂ ಸತ್ಯಂ ಕಂಪ್ಯೂಟರ್ಸ್ ವಿಲೀನದ ನಂತರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 10, 000 ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಯೋಜಿಸಲಾಗಿದೆ ಎಂದು ಟೆಕ್ ಮಹೀಂದ್ರಾ ಸಿಇಒ ವಿನೀತ್ ನಾಯರ್ ಹೇಳಿದ್ದಾರೆ.

'ನಮ್ಮಲ್ಲಿರುವ ಮಾನವ ಸಂಪನ್ಮೂಲ ಸಮರ್ಥವಾಗಿ ಬಳಕೆ ಮಾಡಲು ಯೋಜನೆ ಸಿದ್ಧವಾಗಿದೆ. ಜೊತೆಗೆ 5 ರಿಂದ 10 ಸಾವಿರ ಉದ್ಯೋಗಿಗಳ ನೇಮಕಾತಿ ಸಾಧ್ಯತೆ ಇದೆ' ಎಂದು ನಾಯರ್ ಹೇಳಿದ್ದಾರೆ.

ಸದ್ಯಕ್ಕೆ ಎರಡು ಕಂಪನಿಗಳನ್ನು ಸೇರಿಸಿ 75,000 ಉದ್ಯೋಗಿಗಳಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ಟೆಕ್ ಮಹೀಂದ್ರಾ ಸುಮಾರು 4,413 ಉದ್ಯೊಗಿಗಳನ್ನು ನೇಮಕ ಮಾಡಿಕೊಂಡಿತ್ತು. ಸತ್ಯಂ ಕಂಪ್ಯೂಟರ್ಸ್ 3,014 ಹೊಸ ಉದ್ಯೋಗಿಗಳನ್ನು ಸೇರಿಸಿಕೊಂಡಿತ್ತು. [ಇದನ್ನು ಓದಿ: ಟೆಕ್ ಎಂ ಮಹೀಂದ್ರಾ ವಿಲೀನ, ಸತ್ಯಂ ಷೇರು ಜಿಗಿತ]

ಮಹೀಂದ್ರಾ ಅಂಡ್ ಮಹೀಂದ್ರಾ ಸಂಸ್ಥೆಯ ಭಾಗವಾಗಿರುವ ಟೆಕ್ ಮಹೀಂದ್ರಾ ಸಂಸ್ಥೆ ಸರ್ಕಾರಿ ಹರಾಜಿನಲ್ಲಿ ಸತ್ಯಂ ಸಂಸ್ಥೆಯನ್ನು 2009ರಲ್ಲಿ ಖರೀದಿಸಿತ್ತು. ಸತ್ಯಂನ ಸ್ಥಾಪಕ ಸಿಇಒ ರಾಮಲಿಂಗರಾಜು ಐಟಿ ಲೋಕ ಬೆರಗಾಗುವಂಥ ಹಗರಣಕ್ಕೆ ಸಂಸ್ಥೆಯನ್ನು ದೂಡಿದ್ದರು.

English summary
After the announcement of the merger of Tech Mahindra Ltd and Satyam Computer Services Ltd Vineet Nayyar, CEO of Tech Mahindra said Company may hire as many as 10,000 new employees in the current fiscal year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X