ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟೆಲ್ ಸೀಕ್ರೇಟ್ ಡಾಟಾ ಕದ್ದು ಸಿಕ್ಕಿಬಿದ್ದ ಕಳ್ಳ

By Mahesh
|
Google Oneindia Kannada News

Intel former Employee guilty
ನ್ಯೂಯಾರ್ಕ್, ಏ.10: ಭಾರತೀಯ ಮೂಲದ ಮಾಜಿ ಉದ್ಯೋಗಿಯೊಬ್ಬರು ಇಂಟೆಲ್ ಸಂಸ್ಥೆಯ ಟಾಪ್ ಸೀಕ್ರೇಟ್ ಕದ್ದ ಆರೋಪ ಸಾಬೀತಾಗಿದೆ. ಬಿಸ್ವಮೋಹನ್ ಪನಿ ಎಂಬ ವ್ಯಕ್ತಿಯನ್ನು ಗೌಪ್ಯ ಮಾಹಿತಿ ಕದ್ದ ಆರೋಪದ ಮೇಲೆ ಇತ್ತೀಚೆಗೆ ಬಂಧಿಸಲಾಗಿತ್ತು.

ಇಂಟೆಲ್ ಸರ್ವರ್ ನಿಂದ ಟಾಪ್ ಸಿಕ್ರೇಟ್ ಡಾಕ್ಯುಮೆಂಟ್ ಗಳನ್ನು ಅಕ್ರಮವಾಗ ಡೌನ್ ಲೋಡ್ ಮಾಡಿಕೊಂಡ ಆರೋಪವನ್ನು ಪನಿ ಮೇಲೆ ಹೊರೆಸಲಾಗಿದೆ.

ಮಾಸ್ಸಾಚುಸೆಟ್ಸ್ ಇಂಟೆಲ್ ಮೈಕ್ರೋಪ್ರೊಸೆಸರ್ ಸೆಂಟರ್ ನ ಉದ್ಯೋಗಿಯಾಗಿದ್ದ ಪನಿ,Itanium ಪ್ರೊಸೆಸರ್ ವಿನ್ಯಾಸ ವಿಭಾಗದಲ್ಲಿ ಉದ್ಯೋಗಿಯಾಗಿದ್ದ, ಮೇ, 2008ರಲ್ಲಿ ಇಂಟೆಲ್ ಗೆ ರಾಜೀನಾಮೆ ಪತ್ರ ನೀಡಿ ನೀಡಿ ದೀರ್ಘ ರಜೆ ಮೇಲೆ ಹೋಗಿಬಿಟ್ಟಿದ್ದ.

ನಂತರ ಜೂನ್ ತಿಂಗಳಿನಲ್ಲಿ ಇಂಟೆಲ್ ಪ್ರತಿಸ್ಪರ್ಧಿ ಸಂಸ್ಥೆ ಅಡಾನ್ಸ್ಡ್ ಮೈಕ್ರೋ ಡಿವೈಸ್(AMD) ಸೇರಿದ ಪನಿ, ಇಂಟೆಲ್ ಪೇ ರೋಲ್ ನಲ್ಲೇ ಇದ್ದು, ಕ್ಯಾಲಿಫೋರ್ನಿಯಾದಲ್ಲಿರುವ ಇಂಟೆಲ್ ಸರ್ವರ್ ಗಳಿಂದ 13ಕ್ಕೂ ಅಧಕ ಚಿಪ್ ವಿನ್ಯಾಸ ದಾಖಲೆಗಳನ್ನು ಸಂಗ್ರಹಿಸಿದ.

ವಿಶೇಷ ಎಂದರೆ AMDಗೆ ಈ ದಾಖಲೆಗಳನ್ನು ನೀಡಿರಲಿಲ್ಲ. ತನ್ನ ವೃತ್ತಿಗೆ ಅನುಕೂಲವಾಗಲಿದೆ ಎಂದು ಈ ದಾಖಲೆಗಳನ್ನು ಡೌನ್ ಲೋಡ್ ಮಾಡಿದೆ ಎಂದು ಪನಿ ಹೇಳಿದ್ದಾನೆ. ದಾಖಲೆಗಳನ್ನು ಯಾವ ಕಂಪನಿಗೂ ಮಾರಾಟ ಮಾಡಿಲ್ಲ. ಬೇರೆ ಯಾವ ರೀತಿಯೂ ದುರ್ಬಳಕೆ ಮಾಡಿಲ್ಲವಾದರೂ ಬೇರೆ ಕಂಪನಿ ಸೇರಿದ ಮೇಲೂ ಹಳೆ ಕಂಪನಿ ರಹಸ್ಯ ದಾಖಲೆ ಸಂಗ್ರಹಿಸಿದ ಆರೋಪದ ಮೇಲೆ ಪನಿಯನ್ನು ಬಂಧಿಸಲಾಗಿತ್ತು. ಈಗ ಅಪರಾಧ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣ ತಿಳಿಯಬೇಕಾಗಿದೆ.

English summary
Former employee Intel Biswamohan Pani is found guilty stealing confidential documents from the company according to U.S. District Court for the District of Massachusetts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X