ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಸಿದ ನಾಗರಹಾವಿಗೆ ಆಹಾರವಾದ ನಾಯಿಮರಿ!

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

Serpent tries to swallow puppy
ರಾಮನಗರ, ಏ. 10 : ಹಾವು ಕಪ್ಪೆಯನ್ನು ಇಲಿಗಳನ್ನು ನುಂಗುವುದನ್ನು ನೋಡಿದ್ದೇವೆ. ಆದರೆ ನಾಗರಹಾವೊಂದು ನಾಯಿ ಮರಿಯೊಂದನ್ನು ನುಂಗುವುದನ್ನು ಎಲ್ಲಾದ್ರು ನೋಡಿದ್ದೀರಾ? ಇಲ್ಲೊಂದು ನಾಗಸರ್ಪ ಹಸಿವನ್ನು ನೀಗಿಸಿಕೊಳ್ಳಲು ನಾಯಿಮರಿಯೊಂದನ್ನ ತನ್ನ ಪೊದೆಯೊಳಗೆ ಎಳೆದೊಯ್ದು, ಹೊರಗೆ ಎಳೆತಂದು ನುಂಗಲು ಹರಸಾಹಸ ಮಾಡುತ್ತಿದ್ದ ಅತ್ಯಪರೂಪದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಪಟ್ಲಿ ಗ್ರಾಮದಲ್ಲಿ ನಡೆದಿದೆ.

ಸರ್ಪದ ಬಾಯಲ್ಲಿರುವ ತನ್ನ ಮರಿಯನ್ನು ಉಳಿಸಿಕೊಳ್ಳಲು ತಾಯಿ ನಾಯಿ ಕೂಡ ಹೋರಾಟ ನಡೆಸಿದರೂ ವ್ಯರ್ಥವಾಯಿತು. ತಾಯಿ ಶ್ವಾನದ ಮಮತೆಯ ಆರ್ತನಾದ ಕೊನೆಗೂ ಉರಗಕ್ಕೆ ಕೇಳಿಸಲೇ ಇಲ್ಲ. ಸರ್ಪದ ಹಸಿವಿಗೆ ನಾಯಿಮರಿ ಕೊನೆಗೂ ಬಲಿಯಾಯಿತು. ಹಾವು ನಾಯಿಮರಿಯನ್ನು ನುಂಗಿದ, ನಾಯಿ ತನ್ನ ಮಗುವನ್ನು ಬೊಗಳುತ್ತ ಕಾಪಾಡಲು ಹೋರಾಟ ನಡೆಸಿದ ಅತ್ಯಪರೂಪದ ದೃಶ್ಯಕ್ಕೆ ಊರಿಗೆ ಊರೇ ಸಾಕ್ಷಿಯಾಯಿತು.

ಕೋಡಗನ ಕೋಳಿ ನುಂಗಿತ್ತಾ.. ಆಡು ಆನೆಯ ನುಂಗಿ.... ಹಗ್ಗ ಮಗ್ಗವ ನುಂಗಿ..... ಗೋಡೆ ಸುಣ್ಣವ ನುಂಗಿತ್ತಾ... ಎಂಬ ಷರೀಫರ ಹಾಡಿಗೆ ಈಗ ಹಾವು ನಾಯಿ ಮರಿಯ ನುಂಗಿತ್ತಾ.... ಎಂದು ಸೇರಿಸಿಕೊಳ್ಳಬಹುದಾಗಿದೆ. ಈ ನಾಗರಹಾವಿಗೆ ಹಸಿವು ಎಲ್ಲಿತ್ತೋ ಗೊತ್ತಿಲ್ಲ, ನಾಯಿಯೊಂದು ಮರಿಹಾಕಿದ್ದ ನಾಲ್ಕೈದು ಮರಿಗಳಲ್ಲಿ ಒಂದು ಮರಿಯನ್ನು ಬಲಿ ತೆಗೆದುಕೊಂಡಿದೆ. ಮೊದಲಿಗೆ ನಾಯಿ ಮರಿಯನ್ನ ಕಚ್ಚಿ ಕೊಂದ ಸರ್ಪ, ಕಾಲಿಡಿದು ಪೊದೆಯೊಳಗೆ ಎಳೆದೊಯ್ಯಿತು. ನಂತರ ಪೊದೆಯೊಳಗಿಂದ ಹೊರತಂದು ಸುಮಾರು 2 ಗಂಟೆ ಕಾಲ ನಾಯಿ ಮರಿಯನ್ನು ನುಂಗಲು ಹರಸಾಹಸಪಟ್ಟಿತು.

ಶ್ವಾನವೊಂದು ನಾಲ್ಕೈದು ಮರಿಗಳಿಗೆ ಗುಡಿಸಲು ಒಂದರ ಬಳಿ ಜನ್ಮ ನೀಡಿತ್ತು. ಮರಿಗಳಿಗೆ ಹಾಲುಣಿಸುತ್ತಿದ್ದ ಸಂದರ್ಭದಲ್ಲಿ ನಾಗರಹಾವು ಮರಿಯೊಂದಕ್ಕೆ ಕಚ್ಚಿ ಕೊಂದಿದೆ. ಮರಿಯನ್ನು ನುಂಗಲು ಯತ್ನಿಸುತ್ತಿದ್ದ ಹಾವನ್ನು ಬೊಗಳಿ ಓಡಿಸಲು ಅಮ್ಮ ನಾಯಿ ಸಾಕಷ್ಟು ಪ್ರಯತ್ನಪಟ್ಟಿದೆ. ಯಾವ ಬೊಗಳಿಕೆಗೂ ಜಗ್ಗದ ನಾಗರಹಾವು ತನ್ನ ಕೆಲಸ ಮುಂದುವರಿಸಿತು. ಸುಮಾರು 2 ಗಂಟೆಗಳ ಕಾಲ ನುಂಗುವ ಕಾರ್ಯ ನಡೆದು, ಕೊನೆಗೂ ಮುಕ್ಕಾಲು ನಾಯಿಯನ್ನು ನುಂಗಿದರೂ ದಕ್ಕಿಸಿಕೊಳ್ಳಲಾಗದೆ ಮರಿಯನ್ನು ಬಿಟ್ಟು ಸರ್ಪ ಜಾಗ ಖಾಲಿ ಮಾಡಿತು. ಜೀವಕಳೆದುಕೊಂಡ ಮರಿಯ ದೇಹವನ್ನು ನೋಡಿದ ತಾಯಿ ಶ್ವಾನದ ಆರ್ತನಾದ ನೆರೆದಿದ್ದವರ ಕರುಳು ಚುರುಕ್ ಎನ್ನುವಂತೆ ಮಾಡಿತು.

English summary
Weird news from a Karnataka village : A hungry serpent tried to swallow puppy, but failed. The incident has happened in Channapattana taluk in Ramnagar district. The mother dog's attempt to save the child went in vain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X