ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ITC ಸಿಗರೇಟ್ ಬೆಲೆ 5-16 % ಏರಿಕೆ

By Mahesh
|
Google Oneindia Kannada News

ITC cigarette price Hike
ಬೆಂಗಳೂರು, ಏ.10: ಸಿಗರೇಟ್ ಸೇದೋ ಚಟ ಇರುವವರಿಗೆ ಐಟಿಸಿ ಕಂಪನಿ ಬಿಸಿ ಮುಟ್ಟಿಸಿದೆ. ನಿರೀಕ್ಷೆಯಂತೆ ಐಟಿಸಿ ಕಂಪನಿ ತನ್ನ ವಿವಿಧ ಸಿಗರೇಟ್ ಗಳ ಬೆಲೆಯನ್ನು ಶೇ 6 ರಿಂದ 15 ರವರೆಗೂ ಏರಿಸಿದೆ.

ಕೇಂದ್ರ ಬಜೆಟ್ ನಲ್ಲಿ ಸಿಗರೇಟ್ ಮೇಲಿನ ಅಬಕಾರಿ ಸುಂಕವನ್ನು ಶೇ 15 ರಷ್ಟು ಏರಿಸಿದ ನಂತರ ಐಟಿಸಿ ತನ್ನ ಉತ್ಪನ್ನಗಳ ಬೆಲೆ ಏರಿಕೆಯ ಸೂಚನೆ ನೀಡಿತ್ತು. ಶೇ 10 ರಿಂದ 15 ರಷ್ಟು ಬೆಲೆ ಏರಿಕೆ ನಿರೀಕ್ಷೆಯಿತ್ತು. ಆದರೆ, ಈಗ ಶೇ 6 ರಿಂದ 15 ರಷ್ಟು ಬೆಲೆ ಏರಿಕೆ ಮಾಡಿರುವುದಾಗಿ ಐಟಿಸಿ ಲಿ. ಹೇಳಿದೆ.

ಕರ್ನಾಟಕ, ಕೇರಳ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ವ್ಯಾಟ್ ದರ ಏರಿಕೆ ಇರುವುದರಿಂದ ಐಟಿಸಿ ಸಿಗರೇಟ್ ಗಳು ತುಟಿ ಸುಡುವುದು ಖಂಡಿತ ಎಂದು ಮಾರುಕಟ್ಟೆ ಸಂಶೋಧಕ ಸಂಜಯ್ ಸಿಂಗ್ ಹೇಳುತ್ತಾರೆ.

ಸಿಗರೇಟ್ ಎಂಆರ್ ಪಿ ಮೇಲೆ ಶೇ 5ರಷ್ಟು ಏರಿಕೆ ಕಾಣಬಹುದಾಗಿದ್ದು, 65mm ಉದ್ದದ ಸಿಗರೇಟುಗಳಿಗೆ ಪ್ರತ್ಯೇಕ ತೆರಿಗೆ ವಿಧಿಸಿರುವುದು ಮಾರುಕಟ್ಟೆಯಲ್ಲಿ ಗೊಂದಲ ಎಬ್ಬಿಸಿದೆ.

ಐಟಿಸಿ ಲಿಮಿಟೆಡ್ ಕಂಪನಿಯ ಪ್ರಮುಖ ಉತ್ಪನ್ನಗಳು: ಇಂಡಿಯಾ ಕಿಂಗ್ಸ್, ಲಕ್ಕಿ ಸ್ಟ್ರೈಕ್, ಕ್ಲಾಸಿಕ್, ಗೋಲ್ಡ್ ಫ್ಲೇಕ್, ನೇವಿ ಕಟ್, ಪ್ಲೇಯರ್ಸ್, ಸಿಜರ್ಸ್, ಕ್ಯಾಪ್ ಸ್ಟನ್, ಬರ್ಕ್ ಲಿ, ಬ್ರಿಸ್ಟೋಲ್, ಫ್ಲೇಕ್, ಸಿಲ್ಕ್ ಕಟ್, ಡ್ಯೂಕ್ ಅಂಡ್ ರಾಯಲ್ ಹಾಗೂ ಇನ್ ಸಿಗ್ನಿಯಾ..ಇತ್ಯಾದಿ

English summary
ITC is the market leader in cigarettes in India has increase cigarette prices by 5-16%. Given the excise hikes and expected increase in VAT (Kerala, Karnataka and UP expected to go up to 20 per cent) it was expected from ITC says market experts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X