• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ವಾರ ಯಡಿಯೂರಪ್ಪಗೆ ಸಕತ್ ಸಂಕಷ್ಟಕರ

By Mahesh
|

ಬೆಂಗಳೂರು/ನವದೆಹಲಿ, ಏ.9: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪ ಕುರಿತ ಸಿಇಸಿ ಹಾಗೂ ಅರಣ್ಯ ಇಲಾಖೆ ವರದಿ ಸಲ್ಲಿಕೆಯಾಗಲಿದ್ದು, ಸುಪ್ರೀಂಕೋರ್ಟ್ ಕೂಡಾ ಇದೇ ವಾರ ತೀರ್ಪು ನೀಡಲಿದೆ. ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯಕ್ಕೆ ಕೋರ್ಟ್ ತೀರ್ಪು ನಿರ್ಣಾಯಕವಾಗಲಿದೆ.

ಯಡಿಯೂರಪ್ಪ ಕುಟುಂಬ ವರ್ಗದವರಿಗೆ ಸೇರಿದ ಎರಡು ರಿಯಲ್ ಎಸ್ಟೇಟ್ ಕಂಪನಿಗಳು ಗಣಿ ಉದ್ಯಮಿಗಳಿಂದ ಲಂಚ ಪಡೆದಿರುವ ಪ್ರಕರಣವನ್ನು ಸಿಇಸಿ ವಿಚಾರಣೆ ನಡೆಸುತ್ತಿದೆ. ಚಿತ್ರದುರ್ಗ ಗಣಿಗಾರಿಕೆ ಲೈಸನ್ ನವೀಕರಣ ಅಕ್ರಮ ಪ್ರಕರನದಲ್ಲಿ ಯಡಿಯೂರಪ್ಪ ಸೇಫ್ ಆಗಿದ್ದಾರೆ. ಆದರ, ಲಂಚ ಪ್ರಕರಣ ವಿಚಾರಣೆ ಇನ್ನೂ ಬಾಕಿ ಇದೆ.

'ಸುಪ್ರೀಂ ಕೋರ್ಟ್‌ನ ಅರಣ್ಯಪೀಠ ಏಪ್ರಿಲ್ 13ರಂದು ವಿಚಾರಣೆ ನಡೆಸಲಿರುವ ಈ ಪ್ರಕರಣ ಕರ್ನಾಟಕದ ಇತಿಹಾಸದಲ್ಲಿ ಅದ್ವಿತೀಯವಾಗಿದೆ'ಎಂದು ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್ ಆರ್ ಹಿರೇಮಠ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿ ಮತ್ತು ಅರಣ್ಯ ಪೀಠ ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಲಿದೆ.

ಕೇಂದ್ರ ಉನ್ನತಾಧಿಕಾರ ಸಮಿತಿಯೂ ಸಹ ತನ್ನ ಅಂತಿಮ ತೀರ್ಪನ್ನು ಇದೇ ವೇಳೆಯಲ್ಲಿ ನೀಡಲಿದೆ. ಯಡಿಯೂರಪ್ಪನವರ ಕುಟುಂಬದ ಸದಸ್ಯರು ಅಕ್ರಮ ಗಣಿಗಾರಿಕೆ ನಡೆಸುವ ಉದ್ಯಮಿಗಳಿಂದ ಲಂಚ ಪಡೆದಿರುವುದರ ಬಗ್ಗೆ 314 ಪುಟಗಳ ವರದಿಯನ್ನು ಸಲ್ಲಿಸಿರುವ ಎನ್‌ಸಿಎನ್‌ಪಿಆರ್ ಸಂಘಟನೆ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಮನವಿ ಸಲ್ಲಿಸಿದೆ.

ಜೆಎಸ್‌ಡಬ್ಲ್ಯು ಸ್ಟೀಲ್ಸ್ ಮತ್ತು ಅದಾನಿ ಎಂಟರ್‌ಪ್ರೈಸಸ್ ಕಂಪನಿಗಳು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿರುವುದರ ಬಗ್ಗೆ ಸಿಇಸಿ ತನ್ನತೀರ್ಪು ನೀಡಲಿದೆ. ಈ ಎರಡೂ ಕಂಪನಿಗಳ ವ್ಯವಹಾರಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ವಕೀಲ ಪ್ರಶಾಂತ್ ಭೂಷಣ್ ಕೋರಿದ್ದಾರೆ.

ಈ ಎರಡೂ ಕಂಪನಿಗಳು ಮತ್ತು ಯಡಿಯೂರಪ್ಪ ತಮ್ಮ ಪ್ರತಿಕ್ರಿಯೆಯನ್ನು ಏಪ್ರಿಲ್ 9ರಂದು ನ್ಯಾಯಾಲಯಕ್ಕೆ ಸಲ್ಲಿಸಲಿದ್ದು ಏಪ್ರಿಲ್ 11ರಂದು ಎನ್‌ಸಿಪಿಎನ್‌ಆರ್ ತನ್ನ ವಾದವನ್ನು ಮಂಡಿಸಲಿದೆ ಎಂದು ಹಿರೇಮಠ್ ಹೇಳಿದ್ದಾರೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಲೋಕಾಯುಕ್ತ ಸಲ್ಲಿಸಿದ್ದ ಎಫ್ಐಆರ್‌ ಅನ್ನು ಹೈಕೋರ್ಟ್ ರದ್ದುಪಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪದವಿ ಮರಳಿ ಪಡೆಯಲು ಯಡಿಯೂರಪ್ಪ ಹರಸಾಹಸ ಪಡುತ್ತಿದ್ದಾರೆ. ಆದರೆ, ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಅವರ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ.

ಇದಕ್ಕೆ ಪೂರಕವಾಗಿ ಏ.15ರ ತನಕ ಕಾಯುವುದು ಉತ್ತಮ ಎಂದು ಬೆಂಗಳೂರಿಗೆ ಬಂದಿದ್ದ ದೆಹಲಿ ವರಿಷ್ಠ ಧರ್ಮೇಂದ್ರ ಪ್ರಧಾನ್ ಅವರು ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Supreme Court on April 13 decide fate of BS Yeddyurappa and direct the Central Empowerment Committee, which is looking into the illegal mining issue, to verify whether a Central Bureau of Investigation probe is necessary against former Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more