ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟಲಿಯಲ್ಲಿ ವಯಾಗ್ರಾ ಮಾರಾಟವಿಲ್ಲ

By Mahesh
|
Google Oneindia Kannada News

Italian pharmacists Strike
ರೋಮ್, ಏ.9: ಇಟಲಿ ಸರ್ಕಾರದ ಆರ್ಥಿಕ ಸುಧಾರಣಾ ನೀತಿಗಳನ್ನು ಖಂಡಿಸಿರುವ ಔಷಧಿ ವ್ಯಾಪಾರಿಗಳು ಸರ್ಕಾರಕ್ಕೆ ಸವಾಲೆಸೆದಿದ್ದಾರೆ. ವಯಾಗ್ರಾ ಮಾರಾಟ ನಿಲ್ಲಿಸಿ ಭಾರಿ ಹೋರಾಟ ನಡೆಸಲು ಯೋಜಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳ ಔಷಧಿ ವ್ಯಾಪಾರಿಗಳು ಖಾಸಗಿ ಕ್ಷೇತ್ರ ವ್ಯಾಪಾರಿಗಳೊಡನೆ ಸಮಾನ ಸೌಕರ್ಯಗಳಿಗಾಗಿ ಹೋರಾಡುತ್ತಿದ್ದಾರೆ. ವಯಾಗ್ರಾ ಮಾತ್ರೆಗಳ ಮಾರಾಟವನ್ನು ಸ್ಥಗಿತಗೊಳಿಸಲು ಆಲೋಚಿಸುತ್ತಿದ್ದಾರೆ.

ಪ್ರಧಾನಿ ಮರಿಯೋ ಮೊಂಟಿಯವರ ಆರ್ಥಿಕ ಉದಾರವಾದಿ ನೀತಿಯ ಫಲವಾಗಿ 5,000ಕ್ಕೂ ಹೆಚ್ಚು ಹೊಸ ಔಷಧಿ ಮಳಿಗೆಗಳು ತೆರೆಯಲಿದ್ದು, ಇದರಲ್ಲಿ ಖಾಸಗಿಯವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಇದಕ್ಕೆ ಹೊಡೆತ ನೀಡಲು ಅತಿ ಹೆಚ್ಚು ಬೇಡಿಕೆ ಇರುವ ವಯಾಗ್ರಾ ಮಾತ್ರೆಯನ್ನು ಬಹಿಷ್ಕರಿಸುವುದರಿಂದ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಂಘಟನೆ ನಿರ್ಧರಿಸಿದೆ.

ಇಟಲಿಯ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ಔಷಧಿ ವ್ಯಾಪಾರಿಗಳು ಏಪ್ರಿಲ್ ತಿಂಗಳಿನಲ್ಲಿ ಸರಣಿ ಪ್ರತಿಭಟನೆ ನಡೆಸಲು ಯೋಜಿಸಿದ್ದಾರೆ. ಸಾರ್ವಜನಿಕರು ಇನ್ನೂ ವಯಾಗ್ರಾ ಬಳಕೆ, ಲಭ್ಯತೆ ಬಗ್ಗೆ ಗೊಂದಲದಲ್ಲೇ ಇದ್ದಾರೆ.

English summary
Hospital pharmacists, part of Italy's public health care system have condemned economic liberalization plan of Mario Monti and threat to go on strike with banner "No Viagra, No Party."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X