ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜ್ಮೀರ್ ದರ್ಗಾಕ್ಕೆ ಜರ್ದಾರಿ ಭರ್ಜರಿ ಗಿಫ್ಟ್

By Srinath
|
Google Oneindia Kannada News

pak-president-zardari-rs-5-crore-gift-ajmer-dargah
ಅಜ್ಮೀರ್‌, ಏ.9: ಇಲ್ಲಿನ ಖ್ಯಾತ ಸಂತ ಸೂಫಿ ಖ್ವಾಜಾ ಮೊಯಿನುದ್ದೀನ್‌ ಚಿಸ್ತಿ ದರ್ಗಾಕ್ಕೆ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಭಾನುವಾರ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ವೇಳೆ 'ಆಧ್ಯಾತ್ಮಿಕ ಪರಮಾನಂದದಲ್ಲಿ' ತೇಲಿದ ಜರ್ದಾರಿ, ದರ್ಗಾ ಅಭಿವೃದ್ಧಿಗಾಗಿ ಸುಮಾರು 5 ಕೋಟಿ ರು. ಭರ್ಜರಿ ಗಿಫ್ಟ್ ನೀಡಿದ್ದಾರೆ.

ದರ್ಗಾದ ಅಭಿವೃದ್ಧಿಗಾಗಿ 10 ಲಕ್ಷ ಯುಎಸ್‌ ಡಾಲರ್‌ ದೇಣಿಗೆಯನ್ನು ಜರ್ದಾರಿ ಪರ ಅವರ ನಿಯೋಗದ ಸದಸ್ಯರೊಬ್ಬರು ಪ್ರಕಟಿಸಿದರೆಂದು ಅಂಜುಮಾನ್‌ ಸಮಿತಿಯ ಉಪಾಧ್ಯಕ್ಷ ಸಯ್ಯದ್‌ ಖಲಿಮುದ್ದೀನ್‌ ಚಿಸ್ತಿ ತಿಳಿಸಿದ್ದಾರೆ.

ಭರ್ಜರಿ ಗಿಫ್ಟ್: ಮಾಜಿ ಪಾಕ್‌ ಅಧ್ಯಕ್ಷರಾದ ಪರ್ವೇಜ್‌ ಮುಶರ್ರಫ್ ಮತ್ತು ಜಿಯಾ-ವುಲ್‌- ಹಕ್‌ ಅವರು ಈ ಹಿಂದೆ ದರ್ಗಾವನ್ನು ಸಂದರ್ಶಿಸಿದ್ದರು. ಭಾರತದ ಅನೇಕ ರಾಜಕಾರಣಿಗಳೂ ವಾಡಿಕೆಯಂತೆ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಿರುತ್ತಾರೆ. ಜರ್ದಾರಿ ಪ್ರಕಟಿಸಿರುವ ದೇಣಿಗೆ ಈಚಿನ ವರ್ಷಗಳಲ್ಲೇ ಅತ್ಯಂತ ದೊಡ್ಡ ಮೊತ್ತವಾಗಿದೆ ಎಂದು ಅಂಜುಮಾನ್‌ ಸಮಿತಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದನ್ನು ವೈಯಕ್ತಿಕ ನೆಲೆಯಲ್ಲಿ ನೀಡಲಾಯಿತೇ ಅಥವಾ ಅಧ್ಯಕ್ಷನೆಂಬ ನೆಲೆಯಲ್ಲಿ ನೀಡಲಾಯಿತೇ ಎಂಬುದು ತಿಳಿದುಬಂದಿಲ್ಲ.

ತಮಾಮ್‌ ಇನ್ಸಾನಿಯತ್‌ ಕೆ ಲಿಯೆ: ನೀಲಿ ಸಲ್ವಾರ್‌ ಕಮೀಜ್‌ ಧರಿಸಿದ್ದ 56 ವರ್ಷದ ಜರ್ದಾರಿ ತಮ್ಮ ಪುತ್ರ ಬಿಲಾವಲ್‌, ಒಳಾಡಳಿತ ಸಚಿವ ರೆಹ್ಮಾನ್‌ ಮಲಿಕ್‌ ಮತ್ತು 44 ಮಂದಿಯ ನಿಯೋಗದ ಸದಸ್ಯರೊಂದಿಗೆ ಸೂಫಿ ಸಂತರ ದರ್ಗಾದಲ್ಲಿ 20 ನಿಮಿಷಗಳ ಕಾಲ ಇದ್ದರು. ಜರ್ದಾರಿ ಅವರು 42 ಚದರ ಮೀಟರ್‌ ಉದ್ದದ ಕೆಂಪು 'ಚಾದರ್‌' ಮತ್ತು ಪುಷ್ಪಗುಚ್ಛಗಳನ್ನು ಸಮಾಧಿಗೆ ಅರ್ಪಿಸಿದರು. ಬಿಲಾವಲ್‌ ಹಸಿರು ಚಾದರ್‌ ಅರ್ಪಿಸಿದರು. ಚಾದರ್‌ ಎಂಬುದು ಧಾರ್ಮಿಕ ಶ್ಲೋಕಗಳು ಬರೆಯಲ್ಪಟ್ಟಿರುವ ಸಾಂಪ್ರದಾಯಿಕ ಬಟ್ಟೆಯಾಗಿದೆ.

'ಇಸ್‌ ಮುಕದ್ದಸ್‌ ಮುಕಾಮ್‌ ಪರ್‌ ಅಕರ್‌ ಮುಜೆ ಜೊ ರುಹಾನಿ ಖುಷಿ ಮೆಹಸೂಸ್‌ ಹುಯಿ ಹೈ ವೊ ನ ಕಭೀ ಎ ಬಯಾನ್‌ ಹೈ. ಅಲ್ಲಾ ತಲಾ ಸೆ ದುವಾ ಹೈ ಕಿ ವೊ ತಮಾಮ್‌ ಇನ್ಸಾನಿಯತ್‌ ಕೆ ಲಿಯೆ ಆಸಾನಿಯಾ ಪೈದಾ ಕರೇ. ಅಮೀನ್‌' (ಈ ಪವಿತ್ರ ಸ್ಥಳಕ್ಕೆ ಬಂದ ಬಳಿಕ ನನಗೆ ಆಧ್ಯಾತ್ಮಿಕ ಪರಮಾನಂದದ ಅನುಭಾವವಾಗುತ್ತಿದೆ. ಇದನ್ನು ಶಬ್ದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಮನುಕುಲದ ಒಳಿತಿಗೆ ತಕ್ಕ ವಾತಾವರಣ ನಿರ್ಮಿಸುವಂತೆ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅಮೀನ್‌) ಎಂದು ಸಂದರ್ಶಕರ ಪುಸ್ತಕದಲ್ಲಿ ಜರ್ದಾರಿ ಬರೆದಿದ್ದಾರೆ.

English summary
Pakistan President Asif Ali Zardari on Sunday (April 8) offered prayers at the historic 13th century dargah of sufi saint Khwaja Moinuddin Chisti in Ajmer town after which a $ 1 million donation for the shrine was announced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X