ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BIAL 'ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ'

By Srinath
|
Google Oneindia Kannada News

bial-to-become-kempegowda-intl-airport-sm-krishna
ಬೆಂಗಳೂರು, ಏ.6: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (BIAL) 'ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ' ಎಂದು ಹೆಸರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಬೆಂಗಳೂರು ನಗರದ ನಿರ್ಮಾತೃ ಮಾಗಡಿ ಕೆಂಪೇಗೌಡರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಅವರು ಸಖತ್ ಸಿಹಿ ಸುದ್ದಿ ನೀಡಿದ್ದಾರೆ.

ಕೇಂದ್ರ ನಾಗರಿಕ ವಿಮಾನ ಯಾನ ಖಾತೆ ಸಚಿವ ಅಜಿತ್ ಸಿಂಗ್ ಅವರು ತಮಗೆ ಈ ಮಾಹಿತಿ ನೀಡಿದ್ದಾರೆ ಎಂದು ಎಸ್ಎಂ ಕೃಷ್ಣ ಶುಕ್ರವಾರ ಬೆಳಗ್ಗೆ ತಿಳಿಸಿದ್ದಾರೆ. 'ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ' ಎಂಬ ನೂತನ ನಾಮಕರಣದ ಕುರಿತು ಅಧಿಕೃತ ಪ್ರಕಟಣೆಗೆ ಇನ್ನು ಒಂದೆರಡು ಕಡತಗಳಿಗೆ ಅನುಮೋದನೆ ಬೀಳಬೇಕಿದೆ ಅಷ್ಟೆ.

ಸರಿಯಾಗಿ ಒಂದು ವರ್ಷದ ಹಿಂದೆಯೇ, ರಾಜ್ಯ ಸಚಿವ ಸಂಪುಟವು ಹಾಲಿ BIAL ಅನ್ನು 'ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ'ವನ್ನಾಗಿ ಹೆಸರು ಬದಲಾಯಿಸಲು ಕೇಂದ್ರಕ್ಕೆ ಅನುಮೋದನೆ ಕಳಿಸಿತ್ತು.

ಈ ವಿಮಾನ ನಿಲ್ದಾಣ ಆರಂಭವಾದಾಗ ಅದಕ್ಕೆ ಯಾವ ಹೆಸರಿಡಬೇಕು ಎಂಬುದರ ಬಗ್ಗೆ ಭಾರಿ ಚರ್ಚೆಗಳಾಗಿದ್ದವು. ಬಸವಣ್ಣ, ಸರ್ ಎಂ ವಿಶ್ವೇಶ್ವರಯ್ಯ, ಕುವೆಂಪು, ಅಂಬೇಡ್ಕರ್ ಮುಂತಾದ ಹೆಸರುಗಳು ಕೇಳಿಬಂದಿದ್ದವು. ಆದರೆ ಈಗ ಅದಕ್ಕೆಲ್ಲ ತೆರೆಬಿದ್ದಿದ್ದು, ಕೆಂಪೇಗೌಡ ಹೆಸರು ಅಂತಿಮವಾಗಿದೆ.

English summary
The Devanahalli Bangalore International Airport (BIAL) will be rechristened as Kempegowda International Airport said Foreign Minister SM Krishna a short while ago (April 6) as he was informed by Ajith Singh, Central Aviation Minister. In last Year March, the Karnataka Govt. had agreed to rename the BIAL and had sent a proposal to Center. 6 April is observed as Kempe Gowda (1510-1570) Day in Karnataka. He was the King and founder of Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X