ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯ ನೌಕರರಿಗೆ ವಾರಕ್ಕೆ ಐದೇ ದಿನ ಭಾಗ್ಯವಿಲ್ಲ
ಏನಪಾ ಅಂದರೆ ಸರಕಾರಿ ಉದ್ಯೋಗಿಗಳು ಈಗಿರುವಂತೆ ವಾರಕ್ಕೆ 6 ದಿನ ಕೆಲಸ ಮಾಡಲೇಬೇಕು ಎಂದು ಸದಾನಂದ ಗೌಡರು ಸ್ಪಷ್ಟಪಡಿಸಿದ್ದಾರೆ. ವೇತನ ಆಯೋಗದ ಅಧ್ಯಕ್ಷರು, ಹಿರಿಯ ಅಧಿಕಾರಿಗಳು ಮತ್ತು ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಜತೆ ಗುರುವಾರ (ಏ. 5) ನಡೆಸಿದ ಸಭೆಯಲ್ಲಿ ಸದಾನಂದ ಗೌಡರು ಈ ವಿಷಯ ಪ್ರಕಟಿಸಿದ್ದಾರೆ. ಇದರಿಂದ ಲಕ್ಷಾಂತರ ಸರ್ಕಾರಿ ನೌಕರರ ಮೊಗದಲ್ಲಿ ಅರಳಿದ್ದ ಮಂದಹಾಸ ಹಾಗೇ ಮಾಯವಾಗಿದೆ.
6ನೇ ವೇತನ ಆಯೋಗವು ಸರಕಾರಿ ನೌಕರರಿಗೆ ಇನ್ನು ಮುಂದೆ ವಾರಕ್ಕೆ ಐದೇ ದಿನ ಕೆಲಸವಿರಲಿ ಎಂದು ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಅದಕ್ಕೆ ಮುಖ್ಯಮಂತ್ರಿ ಸದಾನಂದ ಗೌಡರು ಅಂಕಿತ ಹಾಕುತ್ತಾರೆ ಎಂಬ ಮಾತು ಚೈತ್ರ ಕಾಲದ ಗಾಳಿಯಲ್ಲಿ ತೇಲಿ ಬಂದಿತ್ತು.
ಆದರೆ ತಾಂತ್ರಿಕವಾಗಿ ವಾರಕ್ಕೆ 5 ದಿನಗಳ ಸರಕಾರಿ ನೌಕರಿ ಕಾಲ್ಪನಿಕ ಅಷ್ಟೆ. ಆದ್ದರಿಂದ ವಾರಕ್ಕೆ 6 ದಿನ ಕೆಲಸ ಮಾಡಲೇಬೇಕು ಎಂದು ಗೌಡರು ಹೇಳಿದ್ದಾರೆ.
ಬಜೆಟ್ ಯುಗಾದಿ ಉದ್ಯೋಗ ನೇಮಕಾತಿ ಕರ್ನಾಟಕ ಬೆಂಗಳೂರು ಆದಾಯ ತೆರಿಗೆ ಬಡ್ಡಿದರ budget income tax interest karnataka sadananda gowda ಸದಾನಂದ ಗೌಡ
English summary
Karnataka CM Sadananda Gowda has clarified that there is no proposal of 5 day week for Karnataka govt employees. It was rumored that the 6th pay commission has suggested a 5 day week for Karnataka govt employees. Is 5-day-week better or 6-day-week? Discuss.
Story first published: Friday, April 6, 2012, 7:08 [IST]