ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಹೂನಿಂದ 2000 ನೌಕರರಿಗೆ ಪಿಂಕ್ ಸ್ಲಿಪ್

By Mahesh
|
Google Oneindia Kannada News

ಬೆಂಗಳೂರು, ಏ.5: ಇಂಟರ್ ನೆಟ್ ದಿಗ್ಗಜ ಯಾಹೂ ಸಂಸ್ಥೆ ನಿರೀಕ್ಷೆಯಂತೆ ಸಾಮೂಹಿಕವಾಗಿ ಸಾವಿರಾರು ಉದ್ಯೋಗಿಗಳನ್ನು ಹೊರ ದಬ್ಬುವುದು ಖಾತ್ರಿಯಾಗಿದೆ. ಶೇ14ರಷ್ಟು ಮಾನವ ಸಂಪನ್ಮೂಲ ಅಥವಾ 2000 ಉದ್ಯೋಗಿಗಳು ನೌಕರಿ ಬಿಡಬೇಕಾಗುತ್ತದೆ.

ಈ ರೀತಿ ಪಿಂಕ್ ಸ್ಲಿಪ್ ನೀಡುವ ಕಾರ್ಯಕ್ರಮದಿಂದ ವಾರ್ಷಿಕವಾಗಿ ಸುಮಾರು 375 ಮಿಲಿಯನ್ ಡಾಲರ್ ಉಳಿಸಲು ಹೊಸ ಸಿಇಒ ಸ್ಕಾಟ್ ಥಾಮಸನ್ ಯೋಜನೆ ಹಾಕಿಕೊಂಡಿದ್ದಾರೆ.

ಕ್ಯಾಲಿಫೋರ್ನಿಯಾ ಮೂಲದ ಯಾಹೂ ಕಂಪನಿಯಲ್ಲಿ ಸುಮಾರು 14,100 ಫುಲ್ ಟೈಮ್ ಉದ್ಯೋಗಿಗಳಿದ್ದಾರೆ.

ಅಧಿಕಾರ ವಹಿಸಿಕೊಂಡ ನಂತರ ಇಂಟರ್ ನೆಟ್ ದಿಗ್ಗಜ ಯಾಹೂ ಸಂಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಯಾಹೂ ಸಂಸ್ಥೆ ನಿರ್ವಹಣೆಯನ್ನು ಪುನರ್ ರಚನೆ ಮಾಡಲಾಗುತ್ತದೆ.

ಯಾಹೂ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಏ.17ರಂದು ಪ್ರಕಟಿಸುವ ಸಾಧ್ಯತೆಯಿದೆ.

ಇಬೇ ಆದಾಯವನ್ನು ಡಬಲ್ ಮಾಡಿ, 100 ಮಿಲಿಯನ್ ಗೂ ಅಧಿಕ ಗ್ರಾಹಕರನ್ನು ಅಕರ್ಷಿಸಿದ ಸ್ಕಾಟ್ ಥಾಮಸನ್ ಈಗ ಯಾಹೂ ಸಂಸ್ಥೆ ಉದ್ಧಾರ ಮಾಡಲು ಸಕತ್ ಯೋಜನೆ ಹಾಕಿಕೊಂಡಿದ್ದಾರೆ.

ಫೇಸ್ ಬುಕ್ ಹಾಗೂ ಗೂಗಲ್ ನಿಂದ ಪ್ರತಿಸ್ಪರ್ಧೆ ಎದುರಿಸುತ್ತಿರುವ ಯಾಹೂ ಈಗ ತನ್ನ ಗಮನವನ್ನು ಮಾಧ್ಯಮ ಹಾಗೂ ಜಾಹೀರಾತು ಕ್ಷೇತ್ರದತ್ತ ಹರಿಸಲು ಯೋಜಿಸಿದೆ ಎಂಬ ಸುದ್ದಿ ಇದೆ.

English summary
The internet giant Yahoo Inc, is eliminating 14 per cent of its workforce. Yahoo plans to cut 2,000 jobs to execute CEO Scott Thompson's plan of restructuring Yahoo operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X