ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಶಾಸಕರು ಮುಡಾ ಸೈಟು ನುಂಗಿದ ಕಥೆ

By Mahesh
|
Google Oneindia Kannada News

Mysore MUDA scam
ಮಂಡ್ಯ, ಎ.4: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಅಕ್ರಮವಾಗಿ ನಿವೇಶನ ಪಡೆದ ಆರೋಪ ಎದುರಿಸುತ್ತಿರುವ ಶ್ರೀರಂಗಪಟ್ಟಣ ಶಾಸಕ ರಮೇಶ್‌ ಬಾಬು ಮತ್ತು ಮೇಲುಕೋಟೆ ಶಾಸಕ ಸಿಎಸ್ ಪುಟ್ಟರಾಜು ಅವರ ಮತ್ತೊಂದು ಭೂ ಹಗರಣ ಬೆಳಕಿಗೆ ಬಂದಿದೆ.

ಈ ಇಬ್ಬರು ಶಾಸಕರು ಮೈಸೂರು ಮುಡಾದಲ್ಲೂ ಅಕ್ರಮ ನಿವೇಶನ ಪಡೆದಿದ್ದಾರೆ ಎಂದು ಮೈಸೂರು ಕಾಂಗ್ರೆಸ್ ಘಟಕ ಆರೋಪಿಸಿದೆ.

ಈ ಶಾಸಕರಿಬ್ಬರೂ ಮಂಡ್ಯ ಮುಡಾದಲ್ಲಿ ಅಕ್ರಮ ನಿವೇಶನ ಪಡೆದಿರುವುದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿರುವ ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ವಕೀಲ ಟಿ.ಎಸ್.ಸತ್ಯಾನಂದ ಅವರು ಈಗ ಮೈಸೂರು ಮುಡಾದ ಅಕ್ರಮವನ್ನು ಬಯಲಿಗೆಳೆದಿದ್ದಾರೆ.

ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ ಹಾಗೂ ಸಿಎಸ್ ಪುಟ್ಟರಾಜು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ಸುಳ್ಳು ಪ್ರಮಾಣ ಪತ್ರ ನೀಡಿ ನಿವೇಶನ ಕಬಳಿಸಿರುವ ದಾಖಲೆಗಳನ್ನು ಸುದ್ದಿಗೋಷ್ಠಿಯಲ್ಲಿ ಟಿಎಸ ಸತ್ಯಾನಂದ ಬಿಡುಗಡೆ ಮಾಡಿದರು.

ಇಬ್ಬರು ಶಾಸಕರಿಗೆ ಸಿಕ್ಕಿರುವ ಭರ್ಜರಿ ನಿವೇಶನದ ಸೈಜ್ ಏನು? ಪಕ್ಷದ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರಿಗೆ ತಿಳಿಯದಂತೆ ಈ ಅಕ್ರಮ ನಡೆದಿದೆಯೇ? ಮುಂದೆ ಓದಿ...

English summary
Srirangapatna MLA Ramesh Babu and Melkote MLA CS Puttaraju are accused of obtained Public sites in their wives’ names, from MUDA, Mysore. Earlier in a similar case both JDS Legislators accused in MUDA Mandya case also by Advocare TS Sathyananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X