ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ವಿರುದ್ಧ ತಕ್ಷಣ ಸಿಬಿಐ ತನಿಖೆಯಾಗಲಿ-ನಿತ್ಯಾನಂದ

By Srinath
|
Google Oneindia Kannada News

sleazy-video-let-cbi-investigate-swami-nithyananda
ಬೆಂಗಳೂರು, ಏ.4: ಮೊನ್ನೆಯಷ್ಟೇ ತನ್ನದೇನೂ ತಪ್ಪಿಲ್ಲ. ರಾಸಲೀಲೆ ಪ್ರಕರಣದೊಂದಿಗೆ ನನ್ನನ್ನು ತಳುಕು ಹಾಕಬೇಡಿ ಎಂದು ನೋರೆಂಟನೇ ಬಾರಿ ಹೇಳಿದ್ದ ಸ್ವಯಂಘೋಷಿತ ದೇವಮಾನವ, ರಾಸಲೀಲೆ ಖ್ಯಾತಿಯ ಸ್ವಾಮಿ ನಿತ್ಯಾನಂದ ಇಂದು ಪತ್ರಿಕಾಗೋಷ್ಠಿ ನಡೆಸಿ, ತಾನು ನಿರ್ದೋಷಿ ಎಂದು ಮತ್ತೆ ಹೇಳಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಸಾಚಾತನ ಮತ್ತು ರಾಸಲೀಲೆ ವಿಡಿಯೋ ಸಾಚಾತನದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಹೈಕೋರ್ಟಿಗೆ ಮೊರೆಹೋಗುವುದಾಗಿಯೂ ನಿತ್ಯಾನಂದ ಘೋಷಿಸಿದರು.

ರಾಜ್ಯ ಸಿಐಡಿ ಪೊಲೀಸರು ಕೋರ್ಟಿನಲ್ಲಿ ತಮ್ಮ ವಿರುದ್ಧ ಆರೋಪಪಟ್ಟಿ ದಾಖಲಿಸಿರುವುದರ ಹಿನ್ನೆಲೆಯಲ್ಲಿ ಸ್ವಾಮಿ ನಿತ್ಯಾನಂದ ಬಿಡದಿ ಬಳಿಯ ಧ್ಯಾನಪೀಠ ಆಶ್ರಮದಲ್ಲಿ ಈ ಸುದ್ದಿಗೋಷ್ಠಿ ನಡೆಸಿದ್ದಾರೆ. ಮುಖ್ಯಾಂಶಗಳು:
* ನನ್ನ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ
* ನಟಿ ರಂಜಿತಾ ಸಹ ನನ್ನ ವಿರುದ್ಧ ಯಾವುದೇ ಆರೋಪ ಮಾಡಿಲ್ಲ
* ಲೆನಿನ್ ಸೇರಿದಂತೆ ನನ್ನ ವಿರುದ್ಧ ದೂರು ಕೊಟ್ಟಿರುವವರೆಲ್ಲ ಕ್ರಿಮಿನಲ್ ಗಳು
* ಆರೋಪ ಮಾಡಿದ್ದ ಲೆನಿನ್ ಜೈಲಿನಲ್ಲಿದ್ದಾನೆ
* ನಾನು ಹೈಕೋರ್ಟಿನಲ್ಲಿ ರಿಟ್ ಸಲ್ಲಿಸುವೆ; ನನ್ನ ವಿರುದ್ಧ ಸಿಬಿಐ ತನಿಖೆ ನಡೆಯಲಿ
* ಈ ಕ್ಷಣವೇ ನಾನು ತನಿಖೆಗೆ ಸಿದ್ಧ
* ನನ್ನನ್ನು ರಕ್ಷಿಸಿಕೊಳ್ಳಲು ಕೋರ್ಟಿಗೆ ಮೊರೆ ಹೋಗುವೆ
* ನನ್ನ ವಿರುದ್ಧ ಅನವಶ್ಯಕವಾಗಿ ಆರೋಪ ಮಾಡಲಾಗಿದೆ
* ನನ್ನ ವಿರುದ್ಧ ನಿರಂತರ ಅವಹೇಳನ ಮಾಡಲಾಗುತ್ತಿದೆ. ಇದು ಸಲ್ಲದು
* ಕೆಲವರಿಂದ ನನಗೆ ನಿರಂತರ ಕಿರುಕುಳ
* ಅಮೆರಿಕದ ಪ್ರಯೋಗಾಲಯವೇ ವಿಡಿಯೋ ತಿರುಚಿರುವ ಬಗ್ಗೆ ವರದಿ ನೀಡಿದೆ
* ವಿಶ್ವದ 100 ಮಂದಿ ಪ್ರಭಾವಿಗಳ ಪೈಕಿ ನಾನೂ ಒಬ್ಬ

English summary
Swami Nithyananda yet again said that the video, which allegedly shows him along with a South Indian actress Ranjitha was morphed. This time the self-styled godman demanded that CBI should investigate his case. He was speaking to the media a short while ago (April 4) at Bidadi Dhyanapeetam near Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X