ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಒಳಜಗಳ ಒಪ್ಪಿಕೊಂಡ ಸಿಟಿ ರವಿ

By Srinath
|
Google Oneindia Kannada News

udupi-chikmagalur-bypolls-infight-defeat-bjp
ಚಿಕ್ಕಮಗಳೂರು, ಏ.3: ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪ ಚುನಾವಣೆ ಫಲಿತಾಂಶ ಸೋಲನ್ನು ಸ್ಥಳೀಯ ಬಿಜೆಪಿ ಶಾಸಕ ಸಿಟಿ ರವಿ ವಸ್ತುನಿಷ್ಠವಾಗಿ ವಿಶ್ಲೇಷಿಸಲು ಯತ್ನಿಸಿದ್ದಾರೆ. ನಮ್ಮ ಪಕ್ಷದೊಳಗಿನ ಒಳಜಗಳ, ಒಂದಿಬ್ಬರು ಮಾಡಿದ ತಪ್ಪಿನಿಂದಾಗಿ ಸೋಲಬೇಕಾಯಿತು ಎಂದು ರವಿ ಷರಾ ಬರೆದಿದ್ದಾರೆ.

ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಮತದಾರರು ಮತ್ತು ಕಾರ್ಯಕರ್ತರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಮರ್ಪಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಿಟಿ ರವಿ ವಿಶ್ಲೇಷಣೆ ವಿವರ ಹೀಗಿದೆ:
ನಮಗೆ ಮತ ನೀಡುತ್ತಾರೆಂದು ನಂಬಿದ್ದ ಜನರೂ ಎಚ್ಚರಿಕೆ ಕೊಟ್ಟಿದ್ದಾರೆ. ಬಹಳಷ್ಟು ಮಂದಿ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಮತ ಹಾಕಲು ಇಚ್ಛೆ ಇಲ್ಲದೆ ಮತ ಚಲಾವಣೆಗೆ ಬರಲೇ ಇಲ್ಲ. ಇದು ನಮ್ಮ ಮತಗಳಿಕೆ ಪ್ರಮಾಣ ಕಡಿಮೆಯಾಗಲು ಕಾರಣವಾಯಿತು.ರಾಜಕೀಯ ವಿರೋಧಿಗಳನ್ನು ಅಂದಾಜು ಮಾಡುವಲ್ಲಿ ನಾವು ವಿಫ‌ಲರಾದೆವು. ತಪ್ಪು ಲೆಕ್ಕಾಚಾರ ಹಾಕಿ ನಮ್ಮ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಎಡವಿದೆವು.

ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ತನ್ನ ಸ್ವಸಾಮರ್ಥ್ಯದಿಂದ ಲಭಿಸಿದ ಗೆಲುವಲ್ಲ. ಅದು ಸನ್ನಿವೇಶದ ಗೆಲುವಷ್ಟೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಾಲಿಗೆ ಗೆಲುವಿನ ಸಂಭ್ರಮ ಹೆಚ್ಚು ದಿನ ಉಳಿಯುವುದಿಲ್ಲ. ನಮ್ಮ ಮುಖಂಡರಲ್ಲಿನ ಗೊಂದಲಗಳಿಂದಾಗಿಯೇ ನಾವು ಗುರಿ ತಲುಪಲು ಸಾಧ್ಯವಾಗಲಿಲ್ಲ. ಕೆಟ್ಟ ರಾಜಕೀಯ ವಾತಾವರಣದ ಪರಿಣಾಮ ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಚರ್ಚೆಗೆ ತರುವಲ್ಲಿ ನಾವು ವಿಫ‌ಲವಾದೆವು.

ಜಾತಿಗಂಟ ಜೆಡಿಎಸ್, ಕಾಂಗ್ರೆಸ್‌ ಛಿದ್ರ:
ಜಾತ್ಯತೀತ ಜನತಾದಳದ ಮುಖಂಡರು ತಾವು ಜಾತ್ಯತೀತರೆಂದು ಹೇಳಿಕೊಳ್ಳುತ್ತಾರೆ. ಅವರ ಶಕ್ತಿ ಇರೋದೆ ಜಾತಿಯಲ್ಲಿ. ಜಾತಿ ಹೊರತು ಪಡಿಸಿದರೆ ಅವರು ಒಂದು ಕ್ಷೇತ್ರದಲ್ಲೂ ಗೆಲ್ಲುವುದಿಲ್ಲ. ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ಇಲ್ಲವಾದರೆ ಕಾಂಗ್ರೆಸ್‌ ಸಾವಿರ ಹೋಳಾಗಿ ಛಿದ್ರವಾಗಿ ಹೋಗುತ್ತದೆ. ಬಿಜೆಪಿ ಆತ್ಮ ಹಿಂದುತ್ವದಲ್ಲಿದೆ. ಹಿಂದುತ್ವ ಒಂದು ಧರ್ಮವಲ್ಲ. ಕೋಮು ಅಲ್ಲ. ಅದೊಂದು ರಾಷ್ಟ್ರೀಯತೆಯ ಸಂಕೇತ ಎಂದು ವಿವರಿಸಿದರು.

English summary
Udupi Chikmagalur bypolls- Infight within BJP lead to defeat accepts CT Ravi, local MLA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X