ಮಣಿಪಾಲ್ ಮಂಗಳೂರು ವೋಲ್ವೋ ದರ ಏರಿಕೆ
ಐರಾವತ-ರಾಜಹಂಸ ಬಸ್ಗಳಿಗೆ ಸೀಸನ್ ಹೆಸರಿನಲ್ಲಿ ಪ್ರಯಾಣದರ ಏರಿಸಲಾಗಿತ್ತು. ಈಗ ಸಿಟಿ ವೋಲ್ವೊ ಬಸ್ಗೂ ದರ ಏರಿಸಿರುವುದು ಪ್ರಯಾಣಿಕರಿಗೆ ಕಷ್ಟಕರವಾಗಿದೆ.
ಮಣಿಪಾಲದಿಂದ ಮಂಗಳೂರಿಗೆ 70 ರೂ., ಉಡುಪಿಯಿಂದ ಮಂಗಳೂರಿಗೆ 65 ರೂ. ಇದ್ದ ದರ ಇನ್ನು ಮುಂದೆ ಮಣಿಪಾಲ ಮತ್ತು ಉಡುಪಿಯಿಂದ ಮಂಗಳೂರಿಗೆ 80 ರು. ಆಗಿದೆ. ಉಡುಪಿ-ಮಣಿಪಾಲ ನಡುವೆ ಇದ್ದ ದರ 20 ರು ನಿಂದ 25 ರು.ಗೆ ಏರಿಸಿದ್ದಾರೆ.
ಮಣಿಪಾಲದಿಂದ ಕಾಪು (35 ರು.), ಪಡುಬಿದ್ರಿ (40 ರು.), ಮೂಲ್ಕಿ (50 ರು), ಎನ್ಐಟಿಕೆ (55 ರು.), ಸುರತ್ಕಲ್ವರೆಗೆ (60 ರು.) ಈಗಿರುವ ಪ್ರಯಾಣದರವನ್ನು ಉಳಿಸಿಕೊಳ್ಳಲಾಗಿದೆ.
ಖಾಸಗಿ ಬಸ್ಗಳಲ್ಲಿ ರಿಯಾಯಿತಿ ಕೂಪನ್ನಲ್ಲಿ ಉಡುಪಿ ಮಂಗಳೂರಿಗೆ 23 ರು. ಪಾವತಿಸಿದರೆ ಸಾಕು. ಸಾಮಾನ್ಯ ಪ್ರಯಾಣಿಕರಾದರೆ 44 ರು. ಪಾವತಿಸಬೇಕು. ವೋಲ್ವೊ ಬಸ್ನಲ್ಲಿ ಪ್ರಯಾಣಿಸುವವರು ದುಪ್ಪಟ್ಟು ಪಾವತಿಸಬೇಕಾಗುತ್ತದೆ.
ಹಿಂದೆ ಮಂಗಳೂರಿನಿಂದ ಉಡುಪಿಗೆ ಬಡವರ ಬಸ್ ಆಗಿ ಕೆಎಸ್ಸಾರ್ಟಿಸಿ ಮಿನಿ ಬಸ್ ಸೇವೆ ಇತ್ತು. ಇದನ್ನು ಹಂತಹಂತವಾಗಿ ನಿಲ್ಲಿಸಲಾಯಿತು. 'ಖಾಸಗಿಯವರು ದರ ಏರಿಸದೆ ಇರುವ ಈ ಅವಧಿಯಲ್ಲಿ ಕೆಎಸ್ಸಾರ್ಟಿಸಿಯವರು ಏಕೆ ಏರಿಸಿದ್ದಾರೆ' ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.