ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಹೂ ಸಾವಿರಾರು ಉದ್ಯೋಗಿಗಳ ಕೆಲ್ಸಕ್ಕೆ ಕುತ್ತು

By Mahesh
|
Google Oneindia Kannada News

Yahoo Plan Mass Layoffs
ಬೆಂಗಳೂರು, ಏ.2: ಯಾಹೂ ಸಂಸ್ಥೆಯಲ್ಲಿ ಈ ರೀತಿ ಆಗೋದು ಸಾಮಾನ್ಯ. ಹಿಂದೊಮ್ಮೆ 600ಕ್ಕೂ ಅಧಿಕ ಉದ್ಯೋಗಿಗಳನ್ನು ಹೊರದಬ್ಬಿತ್ತು. ನಂತರ ಸಿಇಒ ಕರೋಲ್ ರನ್ನು ಕರೆ ಮಾಡಿ ಉಚ್ಚಾಟಿಸಲಾಗಿತ್ತು. ಈಗ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಸಿದ್ಧತೆ ನಡೆಸಿದೆ ಎಂಬ ಸುದ್ದಿ ಬಂದಿದೆ.

ಹೊಸ ಸಿಇಒ ಸ್ಕಾಟ್ ಥಾಮಸನ್ ಅಧಿಕಾರ ವಹಿಸಿಕೊಂಡ ನಂತರ ಇಂಟರ್ ನೆಟ್ ದಿಗ್ಗಜ ಯಾಹೂ ಸಂಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಯಾಹೂ ಸಂಸ್ಥೆ ನಿರ್ವಹಣೆಯನ್ನು ಪುನರ್ ರಚನೆ ಮಾಡಲಾಗುತ್ತದೆ.

ಬಹುಶಃ ಮುಂದಿನ ಕೆಲವಾರಗಳಲ್ಲಿ ಉದ್ಯೋಗ ಕಳೆದುಕೊಳ್ಳುವ ವಿಭಾಗ ಹಾಗೂ ನೌಕರರ ವಿವರ ಪ್ರಕಟಿಸುವ ಸಾಧ್ಯತೆಯಿದೆ ಎಂದು ಟೆಕ್ ಬ್ಲಾಗ್ ನಲ್ಲಿ ಹೇಳಲಾಗಿದೆ.

ಇಬೇ ಪೇಪಾಲ್ ನ ಮುಖ್ಯಸ್ಥರಾಗಿದ್ದ ಸ್ಕಾಟ್ ಥಾಮ್ ಸನ್ ಅವರು ಕರೋಲ್ ಬರ್ಟ್ಜ್ ನಂತರ ಯಾಹೂ ಸಂಸ್ಥೆಯನ್ನು ಮತ್ತೆ ಉತ್ತುಂಗಕ್ಕೇರಿಸಲು ಭಾರಿ ಸಿದ್ದತೆ ನಡೆಸಿದ್ದಾರೆ.

ಒಮ್ಮೆಗೆ ಅಷ್ಟು ಜನರನ್ನು ತೆಗೆದು ಹಾಕಿದರೆ ಯಾಗೂ ಪ್ರಾಡೆಕ್ಟ್, ಸಂಶೋಧನೆ ಹಾಗೂ ಮಾರ್ಕೆಟಿಂಗ್ ವಿಭಾಗಕ್ಕೆ ಭಾರಿ ಹೊಡೆತ ಬೀಳುತ್ತದೆ. ಹಾಗಾಗಿ ಸಮಯ ನೋಡಿಕೊಂಡು ಉದ್ಯೋಗಿಗಳ ವಜಾ ಕಾರ್ಯಕ್ಕೆ ಮುಂದಾಗಲು ಸಂಸ್ಥೆ ನಿರ್ಧರಿಸಿದೆ.

ಯಾಹೂ ಸಂಸ್ಥೆಯಲ್ಲಿ 14,000 ಉದ್ಯೋಗಿಗಳನ್ನು ಹೊಂದಿದೆ. ಫೇಸ್ ಬುಕ್ ಹಾಗೂ ಗೂಗಲ್ ನಿಂದ ಪ್ರತಿಸ್ಪರ್ಧೆ ಎದುರಿಸುತ್ತಿರುವ ಯಾಹೂ ಈಗ ತನ್ನ ಗಮನವನ್ನು ಮಾಧ್ಯಮ ಹಾಗೂ ಜಾಹೀರಾತು ಕ್ಷೇತ್ರದತ್ತ ಹರಿಸಲು ಯೋಜಿಸಿದೆ ಎಂಬ ಸುದ್ದಿ ಇದೆ.

English summary
According to sources the internet giant is planning to begin layoffs of thousands of employees next week as new CEO Scott Thompson's plan of restructuring Yahoo operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X