ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಬ್ಲೂ ಬಾಯ್ಸ್ ಗೆ ಕ್ಲೀನ್ ಚೀಟ್ ಏಕೆ?

By Mahesh
|
Google Oneindia Kannada News

BJP Ministers get Cleanchit
ಬೆಂಗಳೂರು, ಮಾ.30: ವಿಧಾನ ಸಭೆಯೊಳಗೆ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲ್‌ನಲ್ಲಿ ಬ್ಲೂಫಿಲಂ ನೋಡಿ ಸಿಕ್ಕಿ ಬಿದ್ದ ಮೂವರು ಮಾಜಿ ಸಚಿವರಲ್ಲಿ ಇಬ್ಬರಿಗೆ ಸದನ ಸಮಿತಿ ಕ್ಲೀನ್‌ಚಿಟ್ ನೀಡಿದೆ. ವಿಧಾನಸಭೆಯಲ್ಲಿ ಸದನ ಸಮಿತಿಯ ಅಧ್ಯಕ್ಷ ಬಿದರೂರು ಶ್ರೀಶೈಲಪ್ಪ ವಿರುಪಾಕ್ಷಪ್ಪ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ.

ಈ ವರದಿಯಲ್ಲಿ ಮಾಜಿ ಸಚಿವರಾದ ಸಿ.ಸಿ.ಪಾಟೀಲ್ ಹಾಗೂ ಕೃಷ್ಣ ಜೆ.ಪಾಲೆಮಾರ್‌ಗೆ ಕ್ಲೀನ್‌ಚಿಟ್ ನೀಡಲಾಗಿದೆ. ಮೂವರು ಮಾಜಿ ಸಚಿವರ ಪೈಕಿ ಸಿ.ಸಿ.ಪಾಟೀಲ್ ಹಾಗೂ ಕೃಷ್ಣ ಜೆ.ಪಾಲೆಮಾರ್ ಮೊಬೈಲ್ ಮೂಲಕ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದಾರೆ ಎನ್ನಲು ಯಾವುದೇ ಸ್ಪಷ್ಟ ಸಾಕ್ಷಿ ಆಧಾರಗಳು ಇಲ್ಲ. ಅವರ ವಿರುದ್ಧದ ಆರೋಪ ಸಾಬೀತಾಗಿಲ್ಲ ಎಂದು ಸದನ ಸಮಿತಿ ವರದಿಯಲ್ಲಿ ಹೇಳಲಾಗಿದೆ.

ಜೊತೆಗೆ ಲಕ್ಷ್ಮಣ ಸವದಿ ಮೇಲೆ ಮಾಡಲಾಗಿರುವ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿರುವುದು ಕಂಡು ಬಂದಿದೆ. ಸಭಾಧ್ಯಕ್ಷರು ಅವರಿಗೆ ಇನ್ನು ಮುಂದೆ ಇಂಥ ಕೃತ್ಯ ಎಸೆಗಬಾರದು ಎಂದು ಬುದ್ಧಿವಾದದ ಎಚ್ಚರಿಕೆ ನೀಡಬೇಕೆಂದು ಸದನ ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ಮೂವರು ಮಾಜಿ ಸಚಿವರಿಗೆ ಸದನದೊಳಗೆ ಬಾರದಂತೆ ವಿಧಿಸಲಾಗಿದ್ದ ನಿರ್ಬಂಧವನ್ನು ರದ್ದುಗೊಳಿಸಲಾಗಿದೆ ಎಂದು ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಸದನಕ್ಕೆ ಶುಕ್ರವಾರ(ಮಾ.30) ತಿಳಿಸಿದರು.

English summary
The Karnataka Legislature Committee which probed the infamous porn viewing scandal has indicted a former minister and recommended his "admonition" but gave a clean chit to two others while proposing a ban on the use of mobiles in the House.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X