ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀಟರ್ ಬಡ್ಡಿ ದಂಧೆಯವರಿಗೆ ಪಾಲಿಕೆ ನೀಡಿದ ಭಾರೀ ಪೆಟ್ಟು

|
Google Oneindia Kannada News

Mysore City Corporation
ಮೈಸೂರು, ಮಾ 31: ಬೆರಳು ಮುದ್ರೆ ಆಧಾರದ ಗುರುತಿನ ಚೀಟಿ ಹೊಂದಿರುವ ವ್ಯಾಪಾರಿಗಳಿಗೆ ಮೈಸೂರು ಮಹಾನಗರ ಪಾಲಿಕೆ ಬಡ್ಡಿ ರಹಿತ ಸಾಲ ನೀಡಲು ನಿರ್ಧರಿಸಿದೆ. ಈ ಕಾರ್ಡ್ ಉಳ್ಳ ವ್ಯಾಪಾರಿಗಳಿಗೆ ದಿನನಿತ್ಯ ರೂಪಾಯಿ 100 ರಿಂದ 1000 ವರೆಗೆ ಸಾಲ ನೀಡಲು ಪಾಲಿಕೆಯ ಬಜೆಟ್ ಚರ್ಚೆಯಲ್ಲಿ ಆಯುಕ್ತರು ತಿಳಿಸಿದ್ದಾರೆ.

ಅವ್ಯಾಹುತವಾಗಿ ಬೆಳೆಯುತ್ತಿರುವ ಮೀಟರ್ ಬಡ್ಡಿ ದಂಧೆ ತಡೆಯುವ ಸಲುವಾಗಿ ಪಾಲಿಗೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಆಯುಕ್ತ ಕೆ ಎಸ್ ರಾಯ್ಕರ್ ಹೇಳಿಕೆ ನೀಡಿದ್ದಾರೆ. ಈ ಸಾಲದ ಉಪಯೋಗ ಪಡೆಯುವ ವ್ಯಾಪಾರಿಗಳು ತಾವು ಪಡೆದ ಹಣವನ್ನು ಪ್ರತಿನಿತ್ಯ ಪಾಲಿಕೆಗೆ ಸಂಜೆ ಹಿಂದಿರುಗಿಸಬೇಕು ಅಲ್ಲದೆ ವ್ಯಾಪಾರಿಗಳು ಈ ಹಣಕ್ಕೆ ಯಾವುದೇ ಬಡ್ಡಿ ನೀಡುವ ಅವಶ್ಯಕತೆಯಿಲ್ಲ ಎಂದು ಆಯುಕ್ತರು ಸ್ಪಷ್ಟ ಪಡಿಸಿದ್ದಾರೆ.

ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕುವ ಸಲುವಾಗಿ ಈ ಯೋಜನೆ ಜಾರಿಗೆ ತರಲಾಗಿದ್ದು, ಇದು ದೇಶದಲ್ಲೇ ಮೊದಲು. ನಗರದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಬೀದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಅವರಿಗೆ ಪುನರ್ವಸತಿ ಕೂಡ ಕಲ್ಪಿಸಲಾಗುವುದು ಎಂದು ಆಯುಕ್ತರು ಹೇಳಿದ್ದಾರೆ.

ಮೀಟರ್ ಬಡ್ಡಿ ದಂಧೆ ನಡೆಸುವವರು ಬೆಳಗ್ಗೆ ವ್ಯಾಪಾರಿಗಳಿಗೆ ಹಣ ನೀಡಿ ಸಂಜೆ ಭಾರೀ ಬಡ್ಡಿ ಲೆಕ್ಕಾಚಾರದಲ್ಲಿ ವಾಪಾಸ್ ಪಡೆಯುತ್ತಾರೆ.

English summary
Mysore City Corporation has decided to give Rs.1000/- on daily basis to street merchants with the condition of they should return the money on same day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X