ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾ, ಏ.1ರಿಂದ ಬಸವನಗುಡಿ ದೋಸೆಮನೆ ಹಬ್ಬ!

By Prasad
|
Google Oneindia Kannada News

Basavanagudi Dosemane Habba from April 1
ಬೆಂಗಳೂರು, ಮಾ. 31 : ದೋಸೆಹಬ್ಬಕ್ಕೆ ಬಸವನಗುಡಿಯ ದೋಸೆಮನೆ ಸಜ್ಜುಗೊಂಡಿದೆ. ಇದೇ ಏಪ್ರಿಲ್ 1ರಿಂದ 8ರವರೆಗೆ ನಿರಂತರ ಎಂಟು ದಿನಗಳ ಕಾಲ ದೋಸೆಮನೆ ಹಬ್ಬ ನಡೆಯಲಿದೆ. ಒಂದಲ್ಲ, ಎರಡಲ್ಲ, ದೋಸೆಪ್ರಿಯರಿಗಾಗಿ ಒಂದೇ ಸೂರಿನಡಿ ನೂರಾರು ದೋಸೆಯ ವೈವಿಧ್ಯಗಳು ಸಿಗಲಿವೆ. ಅಮ್ಮನೇ ದೋಸೆ ಹೊಯ್ದು ಕೊಟ್ಟರೆ ಅದರ ರುಚಿ ದುಪ್ಪಟ್ಟು. ಅಮ್ಮನ ಕೈರುಚಿಯಂತಹದೇ ರುಚಿಯೊಂದಿಗೆ ನೂರಕ್ಕೂ ಅಧಿಕ ವೈವಿಧ್ಯದ ದೋಸೆ ಒಂದೇ ಸೂರಿನಡಿ ದೊರಕಲಿರುವುದು ಈ ಹಬ್ಬದ ವಿಶೇಷತೆ. ಬೆಂಗಳೂರು ಬಸವನಗುಡಿಯ ವಿವಿಪುರಂನ "ಜೈನ್ ಕಾಲೇಜು ಮುಂಭಾಗದಲ್ಲಿದೆ ಈ ದೋಸೆಮನೆ".

ಗಜಗಾತ್ರದ ದೋಸೆ : ದೋಸೆಮನೆ ಹಬ್ಬದ ಪ್ರಯುಕ್ತ ಏಪ್ರಿಲ್ 1 ಭಾನುವಾರದಂದು ಗಜಗಾತ್ರದ ದೋಸೆಯ ಅನಾವರಣ ನಡೆಯಲಿದೆ. ಬರೋಬ್ಬರಿ 12 ಅಡಿ ಉದ್ದದ ಈ ದೋಸೆಯನ್ನು ಅಂದು ಬೆಳಗ್ಗೆ 11 ಗಂಟೆಗೆ 'ಗಾಳಿಪಟ' ಖ್ಯಾತಿಯ ಕನ್ನಡದ ಪ್ರತಿಭಾನ್ವಿತ ಚಲನಚಿತ್ರ ನಟಿ ನೀತು ಅನಾವರಣಗೊಳಿಸಲಿದ್ದಾರೆ.

ಎಲ್ಲದಕ್ಕೂ ಒಂದೇ ಬೆಲೆ : ಹಬ್ಬದ ಅಂಗವಾಗಿ ಗ್ರಾಹಕರಿಗೆ ಒಂದೇ ಬೆಲೆಯಲ್ಲಿ ವಿವಿಧ ತಿನಿಸುಗಳನ್ನು ಆಕರ್ಷಕ ಬೆಲೆಯಲ್ಲಿ ನೀಡಲಾಗುವುದು ಎನ್ನುತ್ತಾರೆ ದೋಸೆಮನೆ ಹಬ್ಬದ ರೂವಾರಿ ವೆಂಕಟರಾಜ ಭಟ್. ಕಡಲೇ ಬೇಳೆ ಹೋಳಿಗೆ, ಕಾಯಿಹೋಳಿಗೆ, ಖರ್ಜೂರ ಹೋಳಿಗೆಗಳು ಸೇರಿದಂತೆ ಬಿಸಿಬಿಸಿ ಹೋಳಿಗೆ, ಬಜ್ಜಿ, ವೈವಿಧ್ಯಮಯ ಬೋಂಡಾ, ಐಸ್ ಕ್ರೀಂ ಸೇರಿದಂತೆ ಅನೇಕ ತಿನಿಸುಗಳಿಗೆ ಕೇವಲ 10 ರು. ದರ ನಿಗದಿಪಡಿಸಲಾಗಿದೆ. ಬಿಸಿಲ ಬೇಗೆಗೆ ಬಾಯಾರಿಕೆ ತಣಿಸಲು ಉಚಿತ ಮಜ್ಜಿಗೆ ವ್ಯವಸ್ಥೆ ದೋಸೆಮನೆಹಬ್ಬದಲ್ಲಿ ಕಲ್ಪಿಸಲಾಗಿದೆ. ತಳ ಮಹಡಿಯಲ್ಲಿ ಎಲ್ಲಾ ದೋಸೆಗಳಿಗೂ ಒಂದೇ ಬೆಲೆ ನಿಗದಿ ಪಡಿಸಲಾಗಿದೆ. ಹಾಗೂ ಇತರ ತಿನಿಸುಗಳೊಂದಿಗೆ ಮಿನಿದೋಸೆ ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಮೊದಲ ಹಾಗೂ ಎರಡನೇ ಮಹಡಿಯಲ್ಲಿ ಎಲ್ಲಾ ತಿಂಡಿ ತಿನಿಸುಗಳ ಮೇಲೆ ಶೇ. 20 ರಿಯಾಯಿತಿ ನೀಡಲಾಗುವುದು.

ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ತಿಂಡಿಯನ್ನು ಇಷ್ಟಪಡದವರೇ ಇಲ್ಲ. ದೋಸೆ ಎಂದರೆ ಮಸಾಲೆ, ರವಾ, ಸೆಟ್ ದೋಸೆಗಳಷ್ಟೇ ಅಲ್ಲ, ನಾನಾ ಬಗೆಯ ದೋಸೆಗಳಿವೆ. ವಿವಿಧ ಹಣ್ಣುಗಳು, ತರಕಾರಿಗಳು ಸಹಿತ ನಮ್ಮ ನಿತ್ಯ ಬಳಕೆಯ ಹತ್ತಾರು ವಸ್ತುಗಳಿಂದ ದೋಸೆ ತಯಾರಿಸುವುದು ಸಾಧ್ಯವಿದೆ. ಅವುಗಳಿಗೆ ನೆಂಜಿಕೊಳ್ಳಲು ಸಹ ವಿಧ ವಿಧದ ಸಾಂಬಾರ್‌ಗಳು, ಚಟ್ನಿಗಳು ಇವೆ. ಇವೆಲ್ಲವನ್ನೂ ಒಂದೆಡೆಯಲ್ಲೇ ನೀಡುವ ಪ್ರಯತ್ನ ಈ ದೋಸೆಮನೆ ಹಬ್ಬದಲ್ಲಿ ನಡೆಸಲಾಗುತ್ತದೆ. ಶುಚಿ ರುಚಿಯಲ್ಲಿ ಯಾವುದೇ ರಾಜಿ ಇಲ್ಲದೆ, ಮತ್ತೆ ಮತ್ತೆ ಇಲ್ಲಿಗೆ ಬಂದು ದೋಸೆ ತಿನ್ನುವ ಬಯಕೆ ಹುಟ್ಟಿಸುವ ರೀತಿಯಲ್ಲಿ ಇಲ್ಲಿ ದೋಸೆ ತಯಾರಾಗುತ್ತಿದೆ.

ಸ್ಥಳ : ದೋಸೆಮನೆ, ಬಸವನಗುಡಿಯ ವಿವಿಪುರಂ ಜೈನ್ ಕಾಲೇಜು ಎದುರು, ಬೆಂಗಳೂರು.
ಸಮಯ : ಬೆಳಿಗ್ಗೆ 11 ಗಂಟೆಗೆ
ಹೆಚ್ಚಿನ ಮಾಹಿತಿಗೆ : 98450 65870.

English summary
Dosemane Habba is commencing from April 1 till 8 opposite Jain College in VV Puram, Basavanagudi, Bangalore. This is brain child of Venkatraj Bhat. Hundreds of Dosa are available under only one roof. Savour it when it is hot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X