ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಾಫಿಯ 7,600 ಕೋಟಿ ರು ಆಸ್ತಿ ಇಟಲಿ ವಶ

By Mahesh
|
Google Oneindia Kannada News

Gaddafi's assets Rs 7,600 crores seized
ರೋಮ್, ಮಾ.29: ಲಿಬಿಯಾದ ವಿಚಿತ್ರ, ವಿಕ್ಷಿಪ್ತ ಮನೋಭಾವದ ಸರ್ವಾಧಿಕಾರಿ ಮುಹಮ್ಮರ್ ಗಡಾಫಿ ಸಾವಿನ ನಂತರ ಆತನ ಆಸ್ತಿ ಲೆಕ್ಕಾಚಾರ ಆರಂಭವಾಗಿದೆ.

ಗಡಾಫಿ ಸತ್ತಾಗ ಆತನ ಮೈಮೇಲಿದ್ದ ಬಟ್ಟೆ ಭಾರಿ ಮೊತ್ತದ ಹರಾಜಾದ ಮೇಲೆ, ಇಟಲಿ ಸರ್ಕಾರ ಗಡಾಫಿಗೆ ಸೇರಿದ ಸುಮಾರು 7,600 ಕೋಟಿ ರು.ನಷ್ಟು ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.

ಗಡಾಫಿ ಕುಟುಂಬ ವರ್ಗಕ್ಕೆ ಸೇರಿದ್ದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಹೇಗ್ ನ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ ನೀಡಿತ್ತು.

ಬುಧವಾರ(ಮಾ.28) ಇಟಲಿ ಪೊಲೀಸರು ಗಡಾಫಿಗೆ ಸೇರಿರುವ ಸ್ಥಿರ, ಚರಾಸ್ಥಿ, ಬ್ಯಾಂಕ್ ಷೇರುಗಳು, ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಜಪ್ತಿ ಮಾಡಲಾದ ಆಸ್ತಿಯಲ್ಲಿ ಪ್ಯಾಂಟೆಲ್ಲೆರಿಯಾದ 150 ಹೆಕ್ಟೇರ್ (ಸುಮಾರು 371 ಎಕರೆ) ಅರಣ್ಯ ಪ್ರದೇಶವಿದೆ.

ಈ ಪ್ರದೇಶದಲ್ಲಿ ವಿಹಾರ ಧಾಮ ಗ್ರಾಮ ಸ್ಥಾಪಿಸಲು ಗಡಾಫಿ ಯೋಜಿಸಿದ್ದ. ಗಡಾಫಿ ಮಗ ಸಾದಿ ಗಡಾಫಿ ಒಡೆತನದ ಫುಟ್ಬಾಲ್ ಕ್ಲಬ್ ಯುವೆಂಟಸ್(Juventus) ಕೂಡಾ ಪೊಲೀಸ್ ದಾಳಿಗೆ ತುತ್ತಾಗಿದೆ.

ಎಲ್ಲಾ ಚೆನ್ನಾಗಿದ್ದ ಸಮಯದಲ್ಲಿ ಇಟಲಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಜೊತೆ ಉತ್ತಮ ವ್ಯಾವಹಾರಿಕ ಸಂಬಂಧ ಹೊಂದಿದ್ದ ಗಡಾಫಿ, ಇಟಲಿಯಲ್ಲಿ ಯಥೇಚ್ಛವಾಗಿ ಬಂಡವಾಳ ಹೂಡಿಕೆ ಮಾಡಿದ್ದಾನೆ ಎನ್ನಲಾಗಿದೆ.

English summary
Slain Libyan leader, Muammar Gaddafi's assets worth Rs 7,600 crore were seized by the Italian government on Wednesday(Mar.28). The seizures also include 150 hectares (371 acres) of forest on Pantelleria.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X