• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೇಸಿಗೆಯಲ್ಲಿ ಚಿಣ್ಣರಿಗೆ ಮಸ್ತ್ ಸಮ್ಮರ್ ಕ್ಯಾಂಪ್

By Mahesh
|

ಪರೀಕ್ಷೆಗಳು ಮುಗಿಯಲಿದ್ದು, ಬೇಸಿಗೆ ರಜೆಗೆ ಏನು ಮಾಡುವುದು ಎಂದು ಈಗಾಗಲೇ ಚಿಂತಿಸುತ್ತಿರಬೇಕಲ್ವೇ? ಒಂದು ಸುತ್ತು ಪರಿಸರದ ಸುತ್ತ ಜೊತೆಗೆ ಒಂದಿಷ್ಟು ಸಾಹಸ ಇತ್ಯಾದಿ ಏಕಾಗಬಾರದು? ಕಿಂದರಜೋಗಿ ನಿಮ್ಮೊಂದಿಗಿರುತ್ತಾನೆ ಎಂದ್ರೆ ಬರ್ತೀರಲ್ವಾ?

ಹೌದು, ಮೊದಲ ಬಾರಿಗೆ ಮಕ್ಕಳನ್ನು ಪರಿಸರ, ಸಾಹಸ ಇತ್ಯಾದಿಗಳ ಪರಿಚಯ ಮಾಡಿಕೊಡಲು ಕಿಂದರಜೋಗಿ ಹಲವಾರು ವರ್ಷಗಳಿಂದ ಮಕ್ಕಳನ್ನು ನಿಸರ್ಗದ ಮಡಿಲಿಗೆ ಕೊಂಡೊಯ್ಯುತ್ತಿರುವ ಬ್ಯಾಕ್‌ಪ್ಯಾಕರ್ಸ್ ತಂಡದೊಡನೆ ಒಂದಾಗಿದೆ.

9 ರಿಂದ 15 ವರ್ಷದ ಪುಟಾಣಿಗಳು ಕಿಂದರಜೋಗಿ ಮತ್ತು ಬ್ಯಾಕ್‌ಪ್ಯಾಕರ್ಸ್ ಜೊತೆಗೆ ಈ ಬೇಸಿಗೆಯಲ್ಲಿ ಸೋಮ್ವಾರ್ ಪೇಟೆಯ ಪೇಮಲ್ಲಳ್ಳಿ ಜಲಪಾತದ ಹತ್ತಿರ 3 ದಿನಗಳ ಕಾಲ ಬೇಸಿಗೆ ಕಳೆಯಬಹುದು.

ಆಟ, ಆಟದ ಜೊತೆಗೆ ಪಾಠ, ಮತ್ತೆ ಊಟ ಕೂಡ. ನಿಸರ್ಗದ ಮಡಿಲಲ್ಲೇ ಇದ್ದು, ಅದರ ದಿನನಿತ್ಯದ ಕಾರ್ಯವೈಖರಿಯನ್ನು, ಅದರ ಜೊತೆಗೆ ಬೆರೆಯುವ ಪರಿಯನ್ನು ಪರಿಚಯಿಸಲು ಈ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ.

ಏಪ್ರಿಲ್ 12ರಿಂದ 16ರ ವರೆಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನ ಕಂಠೀರವ ಸ್ಟೇಡಿಯಂನಿಂದ ಏಪ್ರಿಲ್ 12ರ ರಾತ್ರಿ 9.30ಗೆ ಹೊರಟು, ಇದೇ ಸ್ಥಳಕ್ಕೆ 16ನೇ ತಾರೀಖು ಬೆಳಗ್ಗೆ 9.30ಕ್ಕೆ ಹಿಂತಿರುಗುವ ಯೋಜನೆ ಇದೆ. 9 ವಯಸ್ಸಿನ ಮಕ್ಕಳಿಂದ 15 ವರ್ಷದೊಳಗಿನವರಿಗೆ ಮಾತ್ರ ಆದ್ಯತೆ.

ಕಾರ್ಯಕ್ರಮದ ವೆಚ್ಚ: 3,500 ರೂಗಳು

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

ಲಕ್ಷ್ಮೀನಾರಯಣ ವಿ : 94496 49236/ 97318 73096/ 080-22582877

ದೀಪಕ್ : 94498 00754

ಪ್ರಸನ್ನ : 98444 86896/94480 88415

ಹಾಗೂ ಕಿಂದರಜೋಗಿ ವೆಬ್ ತಾಣಕ್ಕೆ ಭೇಟಿ ಕೊಡಿ

ಬೆಂಗಳೂರಿನ ಸಮ್ಮರ್ ಕ್ಯಾಂಪ್ ಗಳ ಪಟ್ಟಿ ಕರ್ನಾಟಕ.ಕಾಂ ವೆಬ್ ತಾಣದಲ್ಲಿ ಲಭ್ಯವಿದೆ ಆಸಕ್ತರು ಭೇಟಿ ಕೊಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bakpackers team Bangalore in association with Kindarajogi website is organising 'Chinnara Chilipili' a summer camp program on April 12. Which includes trip and trek to Malalli falls in Somwarpet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more