• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸದಾನಂದ ಗೌಡರಿಗೆ ವರವಾದ ಆ ಒಂದು ಭೇಟಿ

By * ಸಾಧು ಶ್ರೀನಾಥ್
|

ಅದಾಗತಾನೇ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದ ಡಿವಿ ಸದಾನಂದಗೌಡರಿಗೂ 'ಆ ಭೇಟಿ' ಮುಂದೊಂದು ದಿನ ರಾಜಕೀಯವಾಗಿ ತಮ್ಮ ಕೈಹಿಡಿಯಬಹುದು ಎಂಬ ಲೆಕ್ಕಾಚಾರ ಇರಲಿಲ್ಲವೇನೋ! ಆದರೆ ಇಂದು ಅದು ಆಪದ್ಬಾಂಧವನಾಗಿ ಪರಿಣಮಿಸಿದೆ.

ಇತಿಹಾಸದ ಒಂದೆರಡು ಪುಟ ತಿರುವಿದಾಗ...

ಉರಿಮಜಲು ಕೆ ರಾಮಭಟ್ಟರು 2 ಬಾರಿ ಪ್ರತಿನಿಧಿಸಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅವರ ಮತ್ತೊಬ್ಬ ಶಿಷ್ಯೆ ಶಕುಂತಲಾ ಶೆಟ್ಟಿ ಮರುಆಯ್ಕೆಗೆ ಟಿಕೆಟ್ ನಿರಾಕರಿಸಲಾಗಿತ್ತು. ಸದಾನಂದಗೌಡರೇ ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂಬುದು ಎಲ್ಲರ ಎಣಿಕೆಯಾಗಿತ್ತು.

ಆಗಲೇ 'ಸ್ವಾಭಿಮಾನಿ ವೇದಿಕೆ' ತಲೆಯೆತ್ತಿದ್ದು. ತತ್ಫಲವಾಗಿ, ದೀರ್ಘ ಕಾಲದಿಂದ ಸದಾನಂದರಿಗೆ ಗುರು, ಗೈಡ್ ಆಗಿದ್ದ ರಾಮಭಟ್ಟರು ನಿಜಕ್ಕೂ ಸದಾನಂದರಿಂದ ಬಹುದೂರ ಸಾಗಿದ್ದರು. ಶಕುಂತಲಾಗೆ ಟಿಕೆಟ್ ನೀಡದಿರುವುದನ್ನು ಪ್ರತಿಭಟಿಸಿ ರಾಮಭಟ್ಟರು ಬಿಜೆಪಿ ವಿರುದ್ಧವೇ ಲೋಕಸಭೆ ಚುನಾವಣೆಗೂ ನಿಂತು, ಸೋತರು. ಪಕ್ಷದ ಶಿಸ್ತಿನ ಸಿಪಾಯಿ ರಾಮಭಟ್ಟರ ವಿರುದ್ಧ 'ಶಿಸ್ತು ಕ್ರಮವಾಗಿ ಪಕ್ಷದಿಂದ ಉಚ್ಛಾಟಿಸುವ' ಮಂತ್ರವನ್ನು ಉಚ್ಚರಿಸಲು ಬಿಜೆಪಿ ಉದ್ದೇಶಪೂರ್ವಕವಾಗಿ ಮರೆತಿತ್ತು.

ಅದಕ್ಕೂ ಮುನ್ನ ಬಿಜೆಪಿಯಲ್ಲಿ ರಾಮಭಟ್ಟರ ಹಿಡಿತ ಹೇಗಿತ್ತೆಂದರೆ... ಭಾರತೀಯ ಜನಸಂಘದ ದಿನಗಳಿಂದಲೂ ವಾಜಪೇಯಿ ಮತ್ತು ಅಡ್ವಾಣಿ ಅವರಿಗೆ ತೀರಾ ಹತ್ತಿರವಾಗಿದ್ದ ರಾಮಭಟ್ಟರನ್ನು ಎನ್ ಡಿಎ ಆಡಳಿತದ ಕಾಲದಲ್ಲಿ ಉತ್ತರದ ಯಾವುದಾದರೂ ಒಂದು ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ನೇಮಿಸುವ ವಿಚಾರವೂ ಸುಳಿದಾಡಿತ್ತು. ಆದರೆ ಭಟ್ಟರಿಗೆ ಭಾಷೆ ಕೈಕೊಟ್ಟಿತ್ತು.

ಇಂತಿಪ್ಪ ರಾಮಭಟ್ಟರು ಅತ್ತ ತಮ್ಮ ಮಾಜಿ ಶಿಷ್ಯ ಸದಾನಂದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಹಿರಿಯರ ವೇದಿಕೆಯನ್ನು ರಚಿಸಿದ್ದರು. ಬಿಬಿ ಶಿವಪ್ಪ, ಗೋವಿಂದಪ್ಪ ರಾಮಭಟ್ಟರಿಗೆ ಸಾಥ್ ನೀಡಿದ್ದರು. ಆಗ... ಆ ಹಿರಿಯರ ವೇದಿಕೆ ಮುಂದೊಂದು ದಿನ ತಮ್ಮ ಬುಡಕ್ಕೆ ನೀರು ತರುತ್ತದೆ ಎಂದು ಆತಂಕಗೊಂಡ ಮುಖ್ಯಮಂತ್ರಿ ಸದಾನಂದರು Patch-up ಸಲುವಾಗಿ ...

2011 ಅಕ್ಟೋಬರ್ 24ರ ರಾತ್ರಿ...

58 ವರ್ಷದ ದೇವರಗುಂಡ ವೆಂಕಪ್ಪ ಸದಾನಂದಗೌಡರು ದಂಪತಿ ಜತೆಗೂಡಿ ತಮ್ಮ ರಾಜಕೀಯ ಗುರು ರಾಮಭಟ್ಟರ ನಿವಾಸಕ್ಕೆ ಭೇಟಿ ನೀಡಿಯೇ ಬಿಟ್ಟರು. ಮೂರು ವರ್ಷಗಳ ಅಹಿತಕರ ರಾಜಕೀಯ ಬೆಳವಣಿಗೆಗಳಿಂದಾಗಿ 'ಉರಿಮಜಲು ನಿವಾಸ'ದತ್ತ ಮುಖ ಮಾಡದಿದ್ದ ಗೌಡರನ್ನು ರಾಮಭಟ್ಟರು ಬಾಗಿಲಿಗೇ ಬಂದು (ಚಿತ್ರ ನೋಡಿ) ಆತ್ಮೀಯವಾಗಿ ಸ್ವಾಗತಿಸಿದ್ದರು.

ಇಂತಹ ಸಮಾಗಮಕ್ಕೆ RSS ಹಿರಿತಲೆಗಳಾದ ಮೈ.ಚ. ಜಯದೇವ್, ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಇಂಬು ನೀಡಿದ್ದರು. ಆಗ ರಾಮಭಟ್ಟರ ಭೇಟಿಗಾಗಿ ಅಕ್ಟೋಬರ್ 24ರ ಹಿಂದಿನ ದಿನ ಇವರಿಬ್ಬರೂ ಸದಾನಂದರನ್ನು ತಿದಿಯೊತ್ತಿ ಕಳಿಸಿದ್ದೇ ಇಂದು ಸದಾನಂದರಿಗೆ ವರವಾಗಿ ಪರಿಣಮಿಸಿದೆ.

'ಆದದ್ದೆಲ್ಲ ಒಳ್ಳೇದಕ್ಕೇ, ಎಲ್ಲವೂ ಸರಿ ಹೋಗುತ್ತೆ ಬಿಡಿ' ಎಂದು ಶಕ್ಕು ಅಕ್ಕ ಅಂದು ಶಕುನ ಸಹ ನುಡಿದಿದ್ದರು. ಅದರಂತೆ ಇಂದು ರಾಮಭಟ್ಟರು ಸದಾನಂದರ ಹೆಸರನ್ನು ದಿಲ್ಲಿಯಲ್ಲಿ ಮೆರೆಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಗೌಡರ ಸಿಎಂ ಖುರ್ಚಿಯೂ ಸೇಫ್ ಆಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka BJP battle - In a surprise development, chief minister D V Sadananda Gowda, had paid an unscheduled visit to the home of senior BJP leader and former Puttur MLA Urimajalu K Ram Bhat in Puttur on Oct 24 night. And that visit paying high dividends to DVS now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more