• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೊಟ್ಲೂ ತೂಗಿ ಯಡ್ಡಿಯ ಚಿವುಟುತ್ತಿರುವ ಸದಾನಂದ

By Srinath
|

ಬೆಂಗಳೂರು, ಮಾ.28: ಮುಖ್ಯಮಂತ್ರಿ ಡಿವಿ ಸದಾನಂದಗೌಡರು ಸದ್ಯ ಏನು ಮಾಡುತ್ತಿದ್ದಾರೆ!? ಏನಿಲ್ಲ -ತೊಟ್ಟಿಲೂ ತೂಗಿ, ಮಗುವನ್ನೂ ಚಿವುಟುತ್ತಿದ್ದಾರೆ ಎನ್ನುತ್ತಿದೆ ಬಿಜೆಪಿ ಮೂಲಗಳು.

ಏನ್ ಹಾಗೆಂದರೆ, ಮುಖ್ಯಮಂತ್ರಿ ಹುದ್ದೆ ನಿಭಾಯಿಸುತ್ತಿಲ್ಲವಾ!? ಎಂದು ಆಶ್ಚರ್ಯ ಚಕಿತರಾಗಬೇಡಿ. ಆ ಹುದ್ದೆಯನ್ನು ಉಳಿಸಿಕೊಳ್ಳುವ ಸಲುವಾಗಿಯೇ ಅವರು ಇಂತಹ ಸಾಹಸಕ್ಕೆ ಇಳಿದಿದ್ದಾರೆ.

ರಾಮ(ಭಟ್ಟ) ಬಾಣ: ಪಟ್ಟಕ್ಕಾಗಿ ಯಡಿಯೂರಪ್ಪನವರ ಎಗರಾಟವನ್ನು ಒಂದು ಹಂತದವರೆಗೂ ಹಿಡಿದಿಟ್ಟಿರುವ ಸದಾನಂದರು ಮುಂದಿನ ತೊಗಲುಗೊಂಬೆ ಆಟಕ್ಕಾಗಿ ಸೂತ್ರವನ್ನು ಬೇರೆಯವರ ಕೈಗೆ ಒಪ್ಪಿಸಿ, ಆಟ enjoy ಮಾಡುತ್ತಿದ್ದಾರೆ. ಇತ್ತ ಯಡಿಯೂರಪ್ಪನವರನ್ನು ಸಮಾಧಾನಪಡಿಸುವಂತೆ ನಟಿಸುತ್ತಾ, ಅತ್ತ ತಮ್ಮ ರಾಜಕೀಯ ಗುರು-ಗೈಡ್ ಉರಿಮಜಲು ರಾಮಭಟ್ಟರ ಮೂಲಕ ದಿಲ್ಲಿ ವೇದಿಕೆಯಲ್ಲಿ ಯಕ್ಷಗಾನ ಆಡಿಸುತ್ತಿದ್ದಾರೆ.

ಮೊನ್ನೆಯಷ್ಟೇ ಕಾಂಗ್ರೆಸ್ ಶಾಸಕ ನೆ.ಲ. ನರೇಂದ್ರ ಬಾಬು ಬೆಳಕಿಗೆ ತಂದಿದ್ದ ಯಡಿಯೂರಪ್ಪ ಅಕ್ರಮ ಡಿನೋಟಿಫಿಕೇಷನ್‌ ಪ್ರಕರಣವನ್ನು ಸದಾನಂದಗೌಡರು ಕಾನೂನುಬದ್ಧವಾಗಿ ಸರಿತಿದ್ದಿ, ಕೈತೊಳೆದುಕೊಂಡರು. ಯಾವ ಪ್ರಕರಣದಲ್ಲಿ ಯಡಿಯೂರಪ್ಪಗೆ ಕೋರ್ಟು ಛೀಮಾರಿ ಹಾಕಿತ್ತೋ ಅದನ್ನು ತಣ್ಣಗಾಗಿಸಿದರು. ಸದ್ಯ ಮತ್ತೊಂದು ಕೋರ್ಟ್ ಕಂಟಕ ತಪ್ಪಿತಲ್ಲ ಅಂತ ಯಡಿಯೂರಪ್ನೋರೂ ಸಂತುಷ್ಟಗೊಂಡರು.

ಆದರೆ ಪಟ್ಟಕ್ಕಾಗಿ ಗೌಡರು ಆಡುತ್ತಿರುವ ಪಗಡೆಯಾಟವೇ ಬೇರೆ. ಅವರುರುಳಿಸುತ್ತಿರುವ ದಾಳವೇ ಬೇರೆ. ದಿಲ್ಲಿಯಲ್ಲಿ ವರಿಷ್ಠರ ಮುಂದೆ ಹಿರಿಯ ತಲೆಗಳನ್ನು ಪೆರೇಡ್ ಮಾಡಿಸಿ, ತಾವು ಪರದೆ ಕೆ ಪೀಛೆ ಉಳಿದಿದ್ದಾರೆ. 'ಹೇಗಾದರೂ ಮಾಡಿ ಈ ಬಾರಿ ಯಡಿಯೂರಪ್ಪನವರನ್ನು ಕಟ್ಟಿ ಹಾಕಿ ಗುರುಗಳೇ' ಎಂದು ಉರಿಮಜಲು ರಾಮಭಟ್ಟರಿಗೆ ವೀಳ್ಯ ನೀಡಿದ್ದಾರೆ. ಅದರಂತೆ ಸದಾನಂದರ ಸಿಎಂ ಪಟ್ಟವನ್ನು Team Shivappa ದೆಹಲಿಯಲ್ಲಿ ಭದ್ರಪಡಿಸುತ್ತಿದೆ. ತನ್ಮೂಲಕ ಯಡಿಯೂರಪ್ಪನವರ ಪ್ರಯತ್ನಗಳಿಗೆ ಅಂತಿಮ ಮೊಳೆ ಹೊಡೆಯುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka BJP battle - In a surprise development, chief minister D V Sadananda Gowda and senior BJP leader and former Puttur MLA Urimajalu K Ram Bhat are in good terms now. As a result DVS entertains his mentor Rambhat to defeat BS Yeddyurappa in his efforts to ascend the CM post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more