ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ 24ರಿಂದ ಶ್ರೀರಾಮುಲು 54 ದಿನ ಪಾದಯಾತ್ರೆ

By Srinath
|
Google Oneindia Kannada News

sriramulu-54-day-padayatra-april-24-basavakalyana
ಬೆಂಗಳೂರು,ಮಾ.27: ಕರ್ನಾಟಕದ ಪುರೋಭಿವೃದ್ಧಿಗಾಗಿ ಏಪ್ರಿಲ್ 24ರಿಂದ ಪಾದಯಾತ್ರೆ ಮಾಡುವುದಾಗಿ ಮಾಜಿ ಸಚಿವ, ಬಳ್ಳಾರಿ ಶಾಸಕ ಬಿ. ಶ್ರೀರಾಮುಲು ಅವರು ಪ್ರಕಟಿಸಿದ್ದಾರೆ.

ಇತ್ತೀಚೆಗೆ ತಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನಾಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಗೆ ರಾಮುಲು 'ದೊಡ್ಡ ಥ್ಯಾಂಕ್ಸ್' ಎಂದಿದ್ದಾರೆ. ಇದೇ ವೇಳೆ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದೂ ರಾಮುಲು ಸ್ಪಷ್ಟಪಡಿಸಿದ್ದಾರೆ. ಕಳೆದ ತಿಂಗಳು ಮಾರ್ಚ್ 13 ಮತ್ತು 14 ರಂದು ಇದೇ ಶ್ರೀರಾಮುಲು ಅವರು ಗದುಗಿನ ವಿದ್ಯಾದಾನ ಸಮಿತಿ ಹೈಸ್ಕೂಲ್‌ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

ರಾಮುಲು ಪಾದಯಾತ್ರೆಯ ಮೈಲುಗಲ್ಲು:
* ಉದ್ದೇಶ ಸಮಗ್ರ ಕರ್ನಾಟಕ ಅಭಿವೃದ್ಧಿ
* ಸಹಬಾಳ್ವೆ -ಸಮಾನತೆ ಸಾಧಿಸುವ ಗುರಿ
* ಒಟ್ಟು 839 ಕಿ.ಮೀ. ಉದ್ದ ಪಾದಯಾತ್ರೆ
* ಬಸವಕಲ್ಯಾಣದಿಂದ ಪಾದಯಾತ್ರೆ ಆರಂಭ
* ಒಟ್ಟು 54 ದಿನಗಳ ನಿರಂತರ ಪಾದಯಾತ್ರೆ
* ಬಸವಜಯಂತಿಯಂದು ಪಾದಯಾತ್ರೆ ಆರಂಭ

English summary
B Sriramulu, an independent MLA from Bellary rural, ex-health minister is all set to start a 54-day Padayatra from April 24 from Basavakalyana. His aim is to achive comprehensive Karnataka development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X