ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡ್ಡಿ ಮಾಡಿದ್ದ ಅಕ್ರಮ ಸರಿತಿದ್ದಿದ ಸದಾನಂದ!

By Srinath
|
Google Oneindia Kannada News

bsy-denotification-dvs-rectifies-court-permits-nln-babu
ಬೆಂಗಳೂರು, ಮಾ.27: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ್ದ ಭೂಹಗರಣಗಳು ಅನೇಕ. ಅವುಗಳಲ್ಲಿ ಒಂದನ್ನು ಹಾಲಿ ಮುಖ್ಯಮಂತ್ರಿ ಸದಾನಂದಗೌಡರು ಸರಿಪಡಿಸಿದ್ದಾರೆ. ಆದರೆ ಕಾಂಗ್ರೆಸ್ ಶಾಸಕ ನೆ.ಲ.ನರೇಂದ್ರ ಬಾಬು ಅವರು ಪ್ರಕರಣವನ್ನು ಬೆಳಕಿಗೆ ತಂದ ಫಲವಾಗಿ ಸರಕಾರಕ್ಕೆ ಈ ಅಮೂಲ್ಯ ಭೂಮಿ ವಾಪಸಾಗಿದೆ. ಇಲ್ಲವಾದಲ್ಲಿ ಸ್ವಾಹಾ...

ಆದರೂ ಇಲ್ಲಿ ಕಾಡುತ್ತಿರುವ ಪ್ರಶ್ನೆ ಏನೆಂದರೆ ನಿಕೃಷ್ಟ ಕಳ್ಳನೊಬ್ಬ ತಾನು ಕದ್ದ ಮಾಲನ್ನು ವಾಪಸ್ ಮಾಡಿದರೆ ಯಾವುದೇ ಶಿಕ್ಷೆಯೇ ಇಲ್ಲದೆ ಅವನನ್ನು ಆರೋಪ ಮುಕ್ತಗೊಳಿಸುವುದು ಯಾವ ನ್ಯಾಯ? ನೀವೇನಂತೀರಿ !?

ಏನಾಗಿತ್ತೆಂದರೆ ನಂದಿನಿ ಲೇಔಟ್‌ ಜರಕಬಂಡೆಯಲ್ಲಿ ಬೆನಕ ಇಂಗ್ಲೀಷ್‌ ಶಾಲೆ ಎಂಬ ಬೇನಾಮಿ ಸಂಸ್ಥೆಗೆ 2010 ಜನವರಿಯಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಒಂದು ಎಕರೆ ಭೂಮಿಯನ್ನು ಡಿನೋಟಿಫಿಕೇಷನ್‌ ಮಾಡಿದ್ದರು. ಅದನ್ನೀಗ ಸರ್ಕಾರ ಹಿಂಪಡೆದಿದೆ.

ಪ್ರಕರಣದ ಸಂಬಂಧ ಶಾಸಕ ನೆ.ಲ. ನರೇಂದ್ರ ಬಾಬು ಅವರು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸಾರ್ವಜನಿಕ ರಸ್ತೆಗೆ ಮೀಸಲಿಟ್ಟಿದ್ದ ಜಾಗವನ್ನು ಮಾಜಿ ಸಿಎಂ ಯಡಿಯೂರಪ್ಪ ಅಕ್ರಮವಾಗಿ ಡಿನೋಟಿಫಿಕೇಷನ್‌ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ.ನಷ್ಟವಾಗಿದೆ ಎಂದು ಬಾಬು ಆರೋಪಿಸಿದ್ದರು.

ಮುಖ್ಯ ನ್ಯಾಯಮೂರ್ತಿ ವಿ.ಜೆ. ಸೇನ್‌ ಮತ್ತು ನ್ಯಾ. ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿತ್ತು. ವಿಚಾರಣೆ ಸಂದರ್ಭಕ್ಕೆ ಫೆ. 8ರಂದು ಡಿನೋಟಿಫಿಕೇಷನ್‌ ಆದೇಶ ಹಿಂಪಡೆದಿರುವುದಾಗಿ ಸದಾನಂದರ ಸರ್ಕಾರ ಕೂಲಾಗಿ ಪ್ರಮಾಣ ಪತ್ರ ಸಲ್ಲಿಸಿತು. ಈ ಪ್ರಮಾಣ ಪತ್ರ ಆಧರಿಸಿದ ಹೈಕೋರ್ಟ್‌ ಬಾಬು ಅರ್ಜಿ ವಜಾಗೊಳಿಸಿ, ಪ್ರಕರಣಕ್ಕೆ ಇತಿಶ್ರೀ ಹಾಡಿತು. ಜನ ಧನ್ಯೋಸ್ಮಿ ಅಂದರು.

English summary
Karnataka high court permits quashing of denotification carried out by the then Chief Minister BS Yeddyurappa during 2010 January. Complaint N.L. Narendra Babu, a Congress MLA had filed PIL in this case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X