ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈ ಕಮಾಂಡ್ ಮೀರೊಲ್ಲ: Gentleman ಪ್ರಾಮಿಸ್

By Srinath
|
Google Oneindia Kannada News

wont-break-high-command-bsy-gentleman-promise
ಗುಲ್ಬರ್ಗ, ಮಾ. 26: ಸಿಎಂ ಪೋಸ್ಟ್ ಬೇಕೇ ಬೇಕು ಎಂದು ಅತಿರೇಕಕ್ಕೆ ಹೋಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಬಿಜೆಪಿ ಹೈಕಮಾಂಡ್ ಏನು ಮಂತ್ರ ಪ್ರಯೋಗಿಸಿದೆಯೋ ಗೊತ್ತಿಲ್ಲ. ಆದರೆ ಅದರ ಫಲಿತಾಂಶವಂತೂ ಎದ್ದುಕಾಣುತ್ತಿದೆ. ಸನ್ಮಾನ್ಯ ಯಡಿಯೂರಪ್ನೋರು ಸದ್ಯಕ್ಕಂತೂ ಗಪ್ ಚುಪ್ ಆಗಿದ್ದಾರೆ. ಅಷ್ಟೇ ಅಲ್ಲ, ತಾನು good boy ಅಂತ ನಿರೂಪಿಸಲು ಹೈಕಮಾಂಡ್ ಆದೇಶ ಮೀರೊಲ್ಲ ಎಂದು Gentleman's Promise ಸಹ ಮಾಡಿದ್ದಾರೆ. ಆದರೆ ಇದು ಎಷ್ಟು ಕಾಲವೋ ಆ ಕಾಲವೇ ನಿರ್ಧರಿಸಬೇಕಿದೆ.

ಲೋಕಾಯುಕ್ತ ಕೇಸ್ ಖುಲಾಸೆಗೊಂಡ ಕೂಡಲೇ ಅದೇ ಸ್ಥಾನಮಾನ ನೀಡುವುದಾಗಿ ಹೇಳಿ ಹೈಕಮಾಂಡ್ ನನ್ನ ರಾಜೀನಾಮೆ ಪಡೆದದ್ದು ನಿಜ. ಹೀಗಾಗಿ ಸ್ಥಾನಮಾನ ಮತ್ತೆ ಕೇಳಿದ್ದು ನಿಜ. ಈ ಬಗ್ಗೆ ರಾಷ್ಟ್ರೀಯ ನಾಯಕರ ಮೇಲೆ ವಿಶ್ವಾಸವಿದೆ. ಅವರನ್ನು ಪ್ರಶ್ನಿಸುವ ಅಧಿಕಾರ ನನಗಿಲ್ಲ ಎಂದು ನಿನ್ನೆ ಇಲ್ಲಿ ಹೇಳಿದ್ದಾರೆ.

'ಯಾವ ಸ್ಥಾನಮಾನ ಸಿಗದಿದ್ದರೂ ಸಂತಸದಿಂದ ಇರುತ್ತೇನೆ. ನನ್ನ ಶಕ್ತಿಯನ್ನು ಬಳಸಿಕೊಳ್ಳುವುದು ಪಕ್ಷಕ್ಕೆ ಬಿಟ್ಟ ವಿಚಾರ. ಆದರೆ ಬೇರೆ ಪಕ್ಷ ಕಟ್ಟುವ ಪ್ರಶ್ನೆಯೇ ನನ್ನ ಮುಂದೆ ಇಲ್ಲ' ಎಂದು ಖಡಕ್ ಆಗಿ ಹೇಳಿದ ಅವರು, ಸಿಎಂ ಆಗಿ ಸದಾನಂದ ಗೌಡರನ್ನು ಮುಂದುವರಿಸುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಸೂಚ್ಯವಾಗಿ ಹೇಳಿದರು.

ಅಭಾವವೈರಾಗ್ಯವೋ, ಏನೋ ... ಅವರ ನಡೆನುಡಿ ಬದಲಾಗಿದೆ. ವೇದಾಂತಿಯಂತೆ ಮಾತನಾಡುತ್ತಿದ್ದಾರೆ. ತಾವೇ ಸಾಕಿದ ಗಿಣಿ ಕುಕ್ಕಿದ್ದರೂ... ಬೆಚ್ಚಿಬಿದ್ದವರಂತೆ ಇಲ್ಲ ಇಲ್ಲ. ಅವಯ್ಯ ತುಂಬಾ ಒಳ್ಳೇಯವರು ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಬಗ್ಗೆ ಷರಾ ಬರೆದಿದ್ದಾರೆ. ಅಷ್ಟೇ ಅಲ್ಲ... 'ಅವರ ಕಾರ್ಯವನ್ನೂ ಹೊಗಳಿದ್ದಾರೆ. ಅವರು (ಡಿವಿಎಸ್) ಉತ್ತಮ ಬಜೆಟ್ ನೀಡಿದ್ದಾರೆ' ಎಂದಿದ್ದಾರೆ. ಅಷ್ಟೇ ಅಲ್ಲ... 'ನಾನೇ ಸಿಎಂ ಆಗಿದ್ದರೂ ಅಷ್ಟು ಒಳ್ಳೆಯ ಬಜೆಟ್ ಮಂಡಿಸುತ್ತಿದ್ದೆನೋ ಇಲ್ವೋ ಗೊತ್ತಿಲ್ಲ' ಎಂದೂ ಬಿಎಸ್ವೈ ಹೇಳಿಕೊಂಡಿದ್ದಾರೆ.

ಯಡಿಯೂರಪ್ಪ ನಿಜಕ್ಕೂ ಇಷ್ಟೊಂದು ಹತಾಶರಾದರಾ? ಹಾಗಾದರೆ ವರಿಷ್ಠರು ಇನ್ನಿಂತೆಹ ಮಂತ್ರ ಪ್ರಯೋಗಿಸಿರಬಹುದು!?

English summary
Karnataka BJP battle - It seems Karnataka Ex CM BS Yeddyurappa has back stepped against BJP High Command. As a Gentleman's promise he declared he wont break party Commands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X